ಕಠ್ಮಂಡು/ನವದೆಹಲಿ: ನೇಪಾಳದಲ್ಲಿ ಇಂದು ಮುಂಜಾನೆ ಭಾರಿ ಪ್ರಮಾಣದ ಎರಡು ಭೂಕಂಪನ ಸಂಭವಿಸಿದೆ. ಪಶ್ಚಿಮ ನೇಪಾಳದ ದೋಟಿ ಜಿಲ್ಲೆಯಲ್ಲಿ 6.6 ತೀವ್ರತೆಯ ಭೂಕಂಪ ವರದಿಯಾಗಿದ್ದು, ಮನೆ ಕುಸಿದು 6 ಮಂದಿ ಅಸುನೀಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮೂರು ಬಾರಿ ಭೂಕಂಪನವಾದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್‌ಎಸ್‌ಸಿ) ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ 9:07 ಕ್ಕೆ (ಸ್ಥಳೀಯ ಕಾಲಮಾನ) 5.7 ತೀವ್ರತೆಯ ಮೊದಲ ಭೂಕಂಪನ ದಾಖಲಾಯಿತು. ನಂತರ ರಾತ್ರಿ 9:56 ಕ್ಕೆ (ಸ್ಥಳೀಯ ಕಾಲಮಾನ) 4.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇಂದು ಮುಂಜಾನೆ 2:12 AM (ಸ್ಥಳೀಯ ಕಾಲಮಾನ) ಸುಮಾರಿಗೆ 6.6 ತೀವ್ರತೆಯ ಮೂರನೇ ಕಂಪನ ಉಂಟಾಗಿದೆ.
-
सुदूरपश्चिमको खप्तड क्षेत्र केन्द्रविन्दु बनाई गएको भूकम्पमा परि मृत्यु हुनेहरुप्रति हार्दिक श्रदाञ्जली व्यक्त गर्दै परिवारजनमा समवेदना प्रकट गर्दछु । साथै प्रभावित क्षेत्रमा राहत र उद्दारमा खटिन र घाईतेहरुको तत्काल उचित उपचारको प्रबन्ध गर्न सम्बन्धित निकायलाई निर्देशन दिएको छु।
— Sher Bahadur Deuba (@SherBDeuba) November 9, 2022 " class="align-text-top noRightClick twitterSection" data="
">सुदूरपश्चिमको खप्तड क्षेत्र केन्द्रविन्दु बनाई गएको भूकम्पमा परि मृत्यु हुनेहरुप्रति हार्दिक श्रदाञ्जली व्यक्त गर्दै परिवारजनमा समवेदना प्रकट गर्दछु । साथै प्रभावित क्षेत्रमा राहत र उद्दारमा खटिन र घाईतेहरुको तत्काल उचित उपचारको प्रबन्ध गर्न सम्बन्धित निकायलाई निर्देशन दिएको छु।
— Sher Bahadur Deuba (@SherBDeuba) November 9, 2022सुदूरपश्चिमको खप्तड क्षेत्र केन्द्रविन्दु बनाई गएको भूकम्पमा परि मृत्यु हुनेहरुप्रति हार्दिक श्रदाञ्जली व्यक्त गर्दै परिवारजनमा समवेदना प्रकट गर्दछु । साथै प्रभावित क्षेत्रमा राहत र उद्दारमा खटिन र घाईतेहरुको तत्काल उचित उपचारको प्रबन्ध गर्न सम्बन्धित निकायलाई निर्देशन दिएको छु।
— Sher Bahadur Deuba (@SherBDeuba) November 9, 2022
10 ಕಿಮೀ ಆಳದಲ್ಲಿ ಭೂಕಂಪನ ಆಳದ ಕೇಂದ್ರವನ್ನು ಗುರುತಿಸಲಾಗಿದೆ. ಸುಮಾರು 81.06 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರದ ತಜ್ಞರು ತಿಳಿಸಿದ್ದಾರೆ. ಭೂಕಂಪನದಿಂದ ಬೆಚ್ಚಿಬಿದ್ದಿ ಜನತೆ ಮನೆಗಳು, ಕಟ್ಟಡಗಳಿಂದ ಹೊರಗೆ ಓಡಿಬಂದು ರಸ್ತೆಯಲ್ಲಿ ನಿಂತಿದ್ದು ದೃಶ್ಯ ಸಾಮಾನ್ಯವಾಗಿತ್ತು.
ಇದನ್ನೂ ಓದಿ: ಗುಜರಾತ್ನಲ್ಲಿ 3.5 ತೀವ್ರತೆಯ ಭೂಕಂಪನ.. ರಸ್ತೆ, ಕಟ್ಟಡಗಳಲ್ಲಿ ಬಿರುಕು
ದೆಹಲಿ, ಗಾಜಿಯಾಬಾದ್ ಮತ್ತು ಗುರುಗ್ರಾಮ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಲಕ್ನೋದಲ್ಲೂ ಸಹ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ನಿದ್ದೆಯಿಂದ ಹೊರಬಂದಿದ್ದಾರೆ. "ಭೂಕಂಪನ ಸಂಭವಿಸಿದಾಗ ನಾನು ಕಚೇರಿಯಲ್ಲಿದ್ದೆ. ಭೂಮಿ ಕಂಪಿಸುವುದು ನಿಂತ ತಕ್ಷಣ ನಮಗೆ ಅದು ಪ್ರಬಲ ಭೂಕಂಪನ ಎಂದು ಅರಿವಾಯಿತು. ನಂತರ ಕಟ್ಟಡ ತೊರೆದು ಹೊರ ಬಂದೆವು" ಎಂದು ಸ್ಥಳೀಯರಾದ ಪ್ರಜೂಷಾ ಮಾಹಿತಿ ನೀಡಿದರು.
ಉತ್ತರಾಖಂಡದ ಹಿಮಾಲಯ ಪ್ರದೇಶ ಮತ್ತು ನೇಪಾಳದ ಪಕ್ಕದಲ್ಲಿ ಕಳೆದೆರಡು ದಿನಗಳಿಂದ ಕಡಿಮೆ ತೀವ್ರತೆಯ ಭೂಕಂಪಗಳು ಸಂಭವಿಸುತ್ತಿವೆ. ಇದಕ್ಕೂ ಮುನ್ನ ಅಕ್ಟೋಬರ್ 19 ರಂದು ಕಠ್ಮಂಡುವಿನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು.