ETV Bharat / bharat

ಮೇಘಾಲಯದಲ್ಲಿ ಮತ್ತೆ ಕಂಪಿಸಿದ ಭೂಮಿ: 3.5 ತೀವ್ರತೆ ದಾಖಲು - ರಿಕ್ಟರ್ ಮಾಪಕ

ಮೇಘಾಲಯದಲ್ಲಿ ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Earthquake
ಭೂಕಂಪನ
author img

By

Published : Apr 24, 2023, 12:09 PM IST

ನವದೆಹಲಿ: ಮೇಘಾಲಯದ ಪಶ್ಚಿಮ ಖಾಸಿ ಬೆಟ್ಟಗಳಲ್ಲಿ ಇಂದು ಬೆಳಗ್ಗೆ 7:47 ರ ಸುಮಾರಿಗೆ ಭೂಮಿ ಕಂಪಿಸಿದೆ. ಸುಮಾರು 90.94 ಕಿಲೋ ಮೀಟರ್​ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, 5 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.3.5 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮೂಲಕ ತಿಳಿಸಿದೆ.

ಭಾನುವಾರ ಮುಂಜಾನೆ ಸಹ ಮೇಘಾಲಯದ ದಕ್ಷಿಣ ಗಾರೋ ಬೆಟ್ಟಗಳಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ತೀವ್ರತೆ 3.5 ದಾಖಲಾಗಿದೆ ಎಂದು ಎನ್​ಸಿಎಸ್ ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೆ ಭೂಮಿ ಕಂಪಿಸಿದ್ದು, ಆತಂಕ ಎದುರಾಗಿದೆ.

ಇಂದು ಬೆಳಗ್ಗೆ ಪೆಸಿಫಿಕ್ ಮಹಾಸಾಗರದಲ್ಲಿ ಸೋಮವಾರ 7.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸುನಾಮಿ ಸೃಷ್ಟಿಯಾಗಿಲ್ಲ. ನ್ಯೂಜಿಲ್ಯಾಂಡ್​​​​​​​ ಉತ್ತರ ದ್ವೀಪದ ಈಶಾನ್ಯಕ್ಕೆ ಸುಮಾರು 900 ಕಿಲೋಮೀಟರ್ ( 560 ಮೈಲುಗಳು ) ದೂರದ ಕೆರ್ಮಾಡೆಕ್ ದ್ವೀಪಗಳ ಬಳಿ 49 ಕಿಲೋಮೀಟರ್ ( 30 ಮೈಲುಗಳು ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದೆ.

ಭೂಕಂಪವು ಹವಾಯಿ ಮತ್ತು ವಿಶಾಲವಾದ ಪೆಸಿಫಿಕ್‌ಗೆ ಯಾವುದೇ ಅಪಾಯವನ್ನುಂಟು ಮಾಡಿಲ್ಲ, ಸುನಾಮಿ ಯಾವುದೇ ಪ್ರಾಣ ಹಾನಿ ಮಾಡದೇ ಹಾದು ಹೋಗಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ಇನ್ನೊಂದೆಡೆ, ಭೂಕಂಪವು ನ್ಯೂಜಿಲ್ಯಾಂಡ್​ನ ಮೇಲೆ ಪರಿಣಾಮ ಬೀರಬಹುದೇ ಎಂದು ನ್ಯೂಜಿಲ್ಯಾಂಡ್​ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯು ಅಂದಾಜಿಸುತ್ತಿದೆ. ಅದಾಗಿಯೂ, ಪ್ರಬಲ ಭೂಕಂಪ ಸಂಭವಿಸಿರುವುದರಿಂದ ಕರಾವಳಿ ಪ್ರದೇಶಗಳಲ್ಲಿರುವ ಜನರು ಅಲ್ಲಿಂದ ತೆರಳುವಂತೆ ಸಲಹೆ ನೀಡಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ.

ಇದನ್ನೂ ಓದಿ : ಅಂಡಮಾನ್​ ಮತ್ತು ನಿಕೋಬಾರ್​ದಲ್ಲಿ ಭೂಕಂಪ.. 13 ಗಂಟೆ ಅವಧಿಯಲ್ಲಿ 6 ಬಾರಿ ಕಂಪಿಸಿದ ಭೂಮಿ !

ರೌಲ್ ದ್ವೀಪವನ್ನು ಹೊರತುಪಡಿಸಿ ಕೆರ್ಮಾಡೆಕ್ ದ್ವೀಪಗಳಲ್ಲಿ ಜನರು ವಾಸಿಸುತ್ತಿಲ್ಲ, ಆದರೆ, ಅಲ್ಲಿಗೆ ನ್ಯೂಜಿಲ್ಯಾಂಡ್​​ ವಿಜ್ಞಾನಿಗಳು ಕೆಲವೊಮ್ಮೆ ಹವಾಮಾನ ವೀಕ್ಷಣೆ ಮಾಡಲು ತೆರಳುತ್ತಿರುತ್ತಾರೆ. ಈ ದ್ವೀಪಗಳು ದೊಡ್ಡ ಭೂಕಂಪಗಳ ತಾಣವಾಗಿದೆ.

ಇನ್ನು ಇದೇ ತಿಂಗಳ ಏಪ್ರಿಲ್​ 10 ರಂದು ಫಿಜಿಯಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಶೇ. 6.3 ರಷ್ಟು ತೀವ್ರತೆ ದಾಖಲಾಗಿತ್ತು. ಫಿಜಿ ದಕ್ಷಿಣ ಪೆಸಿಫಿಕ್‌ನಲ್ಲಿರುವ ಒಂದು ದೇಶವಾಗಿದ್ದು, ಇದು 300 ಕ್ಕೂ ಹೆಚ್ಚು ದ್ವೀಪಗಳಿರುವ ಸಮೂಹ ರಾಷ್ಟ್ರವಾಗಿದೆ. ಫಿಜಿಯ 569 ಕಿಲೋ ಮೀಟರ್​ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ. 6.3ರಷ್ಟು ತೀವ್ರತೆಯ ಕಂಪನ ಉಂಟಾಗಿದೆ. ಸುವಾದಿಂದ 485 ಕಿಲೋ ಮೀಟರ್​ ದೂರದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದೆ ಎಂದು ಭೂಕಂಪನ ಶಾಸ್ತ್ರ ಕೇಂದ್ರ ಟ್ವೀಟ್ ಮಾಡಿ ​ತಿಳಿಸಿತ್ತು.

ಇದನ್ನೂ ಓದಿ : ಪಪುವಾ ನ್ಯೂಗಿನಿಯಾದಲ್ಲಿ ಪ್ರಬಲ ಭೂಕಂಪ .. 300ಕ್ಕೂ ಹೆಚ್ಚು ಮನೆಗಳು ನಾಶ, ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.