ನವದೆಹಲಿ: ಯುಕೆ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದ ಪ್ರಸ್ತಾಪ ವಿಳಂಬ ಆಗುತ್ತಿರುವ ಹಿನ್ನೆಲೆ ವ್ಯಕ್ತವಾಗುತ್ತಿರುವ ತೀವ್ರ ಟೀಕೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಈ ಕುರಿತು ಎಚ್ಚರಿಕೆಯ ಪರಿಶೀಲನೆ ಅಗತ್ಯವಿದೆ. ಕಾರಣ ಇದು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಅಂಶವಾಗಿದೆ ಎಂದಿದ್ದಾರೆ.
ಭಾರತ ಏಕೆ ಬೇಗ ಅಮೆರಿಕದ ಜೊತೆಗೆ ಎಫ್ಟಿಎಗೆ ಸಹಿ ಹಾಕುತ್ತಿಲ್ಲ. ಯುಕೆ ಯಾಕೆ ಭಾರತದೊಂದಿಗೆ ಈ ಒಪ್ಪಂದಕ್ಕೆ ಶೀಘ್ರ ಸಹಿ ಹಾಕುತ್ತಿಲ್ಲ ಎಂದು ಯಾರಾದರೂ ಹೇಳಿ? ಎಂಬ ಪ್ರಶ್ನೆಯನ್ನು ನಾನು ಕೇಳುತ್ತಿದ್ದೇನೆ ಎಂದು ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಅವರು ಕೇಳಿದರು.
ಭಾರತ ಮತ್ತು ಯುಕೆ ನಡುವಿನ ಮಹತ್ವಾಕಾಂಕ್ಷೆಯ ಎಫ್ಟಿಎ ಒಪ್ಪಂದಕ್ಕೆ ಮಾತುಕತೆ ನಡೆಸಲಾಗುತ್ತಿದೆ. ಎರಡು ಕಡೆಯಿಂದ ಎಫ್ಟಿಎಯ 26 ಮತ್ತು 20ಕ್ಕೂ ಹೆಚ್ಚಿನ ಅಧ್ಯಯನಗಳನ್ನು ಅಂತಿಮಗೊಳಿಸಲು ಮಾತುಕತಡೆ ನಡೆಯುತ್ತಿದೆ. ಜನರ ಚಲನಶೀಲತೆ ಮತ್ತು ಆಮದು ಸುಂಕದ ರಿಯಾಯಿತಿ ಸೇರಿದಂತೆ ಕೆಲವು ವಿವಾದಾತ್ಮಕ ವಿಷಯಗಳ ಮೇಲೆ ಭಿನ್ನಾಭಿಪ್ರಾಯ ನಿವಾರಿಸಿ ಅಂತ್ಯಗೊಳಿಸಲು ನೋಡಲಾಗುತ್ತಿದೆ ಎಂದಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಎರಡು ದೇಶಗಳು ದೀಪಾವಳಿ ಗಡಿ ವಿಧಿಸಿ ಈ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತ್ಯಗೊಳಿಸಲು ಗುರಿ ನಿಗದಿಸಿದ್ದವು. ಆದರೆ, ಈ ಒಪ್ಪಂದ ಕೆಲವು ವಿಷಯಗಳ ನಡುವೆ ಭಿನ್ನ ದೃಷ್ಟಿ ಹಿನ್ನೆಲೆ ಜೊತೆಗೆ ರಾಜಕೀಯ ಅಭಿವೃದ್ಧಿ ಹಿನ್ನೆಲೆ ಈ ಒಪ್ಪಂದ ಅಂತ್ಯ ತಡವಾಗಿದೆ.
ಇದೀಗ ನಾವು ಈ ಒಪ್ಪಂದ ಮಾತುಕತೆಯ ಮಧ್ಯದಲ್ಲಿದ್ದು, ಗಂಭೀರ ಸಹಭಾಗಿತ್ವದ ಕುರಿತು ಚರ್ಚೆ ನಡೆಯುತ್ತಿದೆ. ಈ ನಡುವೆ ಕೆಲವರು ಭಾರತ ಮತ್ತು ಯುಕೆ ಈ ಒಪ್ಪಂದಕ್ಕೆ ಬೇಗ ಸಹಿ ಹಾಕುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಯಾರೂ ಕೂಡ ಯುಕೆ ಯಾಕೆ ಭಾರತದೊಂದಿಗೆ ಸಹಿ ಹಾಕುತ್ತಿಲ್ಲ ಎಂದು ಕೇಳಿಲ್ಲ. ಹಾಗಾಗಿ ಎಲ್ಲೋ ಒಂದು ಕಡೆ ನಾವು ಇದಕ್ಕೆ ಸ್ಥಾನ ಕಲ್ಪಿಸಿಕೊಳ್ಳಬೇಕಿದೆ. ಎಲ್ಲೋ ಒಂದು ಕಡೆ ಇದನ್ನು ಹಿಡಿದಿಡುತ್ತಿರುವ ಜನರು ನಾವಾಗಿದ್ದೇವೆ. ನಾವು ಈಗ ಇದಕ್ಕೆ ವೇಗ ನೀಡಬೇಕಿದೆ. ಕಾರಣ ಪ್ರತಿ ಎಫ್ಟಿಎ ಮತ್ತು ಪ್ರತಿ ಒಂದು ಹೆಜ್ಜೆ ಸಾಧನೆ ಅಂತ ತಿಳಿಯಬೇಕಿದೆ ಎಂದಿದ್ದಾರೆ.
ಎಫ್ಟಿಎ ಪ್ರಯೋಜನಕಾರಿಯಾಗಿದೆ. ಆದರೆ ಇದೇ ವೇಳೆ ಇದರ ಕುರಿತು ಎಚ್ಚರಿಕೆಯ ಪರಿಶೀಲನೆ ಅಗತ್ಯವಿದೆ. ನ್ಯಾಯಾಂಗಿಕವಾಗಿ ಇದು ಹಲವು ಪ್ರಯೋಜನ ಮತ್ತು ಅಪಾಯವನ್ನು ಹೊಂದಿದೆ. ಈ ಸಂಬಂಧ ನಡೆಸುವ ಯಾವುದೇ ನಿರ್ಣಯವೂ ಮಿಲಿಯಂತರ ಜನರ ಮೇಲೆ ಪರಿಣಾಮ ಬೀರಲಿದೆ. ಇದು ಜನರ ಜೀವನೋಪಾಯವಾಗಿದೆ ಎಂದರು.
ಇದನ್ನೂ ಓದಿ: ಶೇ.6ರಷ್ಟು ಜಿಡಿಪಿ ಇದ್ದರೆ 2047ರಲ್ಲೂ ಭಾರತ ಕೆಳಮಧ್ಯಮ ಆರ್ಥಿಕತೆಯ ರಾಷ್ಟ್ರ: ರಘುರಾಮ್ ರಾಜನ್