ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
ಈಗಾಗಲೇ ಇರುವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ( ಲುಕ್ ಪಾರ್ವರ್ಡ್ -ಮುಂದೆ ಸಾಗು ) ಕುರಿತು ಮಾತುಕತೆ ನಡೆಸಲು ಶನಿವಾರ ಭಾರತಕ್ಕೆ ಭೇಟಿ ನೀಡಿರುವ ಅಲೆಕ್ಸಾಂಡರ್ ಶಾಲೆನ್‌ಬರ್ಗ್ ಅವರನ್ನು ವಿದೇಶಾಂಗ ಸಚಿವ ಜೈಶಂಕರ್ ಸ್ವಾಗತಿಸಿದರು.
ಇದಕ್ಕೂ ಮುನ್ನ ಶುಕ್ರವಾರ ಭಾರತ ಮತ್ತು ಆಸ್ಟ್ರಿಯಾ ನಡುವಣ ಆರನೇ ಸುತ್ತಿನ ವಿದೇಶಾಂಗ ಸಚಿವರ ಮಟ್ಟದ ಮಾತುಕತೆಗಳು ನಡೆದವು. ರಾಜಕೀಯ, ಆರ್ಥಿಕ, ವಾಣಿಜ್ಯ ಸಂಬಂಧಗಳು ಮತ್ತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಮಾತುಕತೆ ನಡೆದವು.
ದ್ವಿಪಕ್ಷೀಯ ಮಾತುಕತೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿ (ಯುರೋಪ್ ಮತ್ತು ಕೋವಿಡ್ 19) ದಮ್ಮು ರವಿ ಅವರು ಭಾರತದ ಕಡೆಯ ನೇತೃತ್ವ ವಹಿಸಿದ್ದರು ಮತ್ತು ಆಸ್ಟ್ರಿಯನ್ ಫೆಡರಲ್ ಸಚಿವಾಲಯದ ರಾಜಕೀಯ ವ್ಯವಹಾರಗಳ ಮಹಾನಿರ್ದೇಶಕ ರಾಯಭಾರಿ ಗ್ರೆಗರ್ ಕೋಸ್ಲರ್ ನೇತೃತ್ವ ವಹಿಸಿದ್ದರು ಎಂದು ಎಂಇಎ ತಿಳಿಸಿದೆ.
ದ್ವಿಪಕ್ಷೀಯ ಮಾತುಕತೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಮತ್ತು ಲಸಿಕೆಗಳು ಸೇರಿದಂತೆ ಸಾಂಕ್ರಾಮಿಕ ರೋಗ ಹರಡಿದ ನಂತರ ಚೇತರಿಕೆಯ ಕುರಿತು ಎರಡು ದೇಶಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡವು. ಇಂಡೋ - ಪೆಸಿಫಿಕ್, ನೆರೆಹೊರೆ ನೀತಿ, ಭಯೋತ್ಪಾದನೆ ಮತ್ತು ಭಾರತ-EU ಸಂಬಂಧಗಳಲ್ಲಿನ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ.
ವಿಶ್ವಸಂಸ್ಥೆಯ ಸುಧಾರಣೆಗಳು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಅವಧಿಯಲ್ಲಿ ಭಾರತದ ಆದ್ಯತೆಗಳಂತಹ ಬಹುಪಕ್ಷೀಯ ವಿಷಯಗಳನ್ನೂ ಈ ಚರ್ಚೆಗಳು ಒಳಗೊಂಡಿವೆ ಎಂದು ಸಚಿವಾಲಯ ತಿಳಿಸಿದೆ.