ನವದೆಹಲಿ: ತೀವ್ರ ಹಣಕಾಸು ಬಿಕ್ಕಟ್ಟಿನಿಂದಾಗಿ ದಿವಾಳಿಯಾಗಿರುವ ಗೋ ಫಸ್ಟ್ ಏರ್ಲೈನ್ಸ್ ತನ್ನ ವಿಮಾನಗಳ ಹಾರಾಟವನ್ನು ಮೇ 9 ರವರೆಗೂ ರದ್ದುಗೊಳಿಸಿದೆ. ಇದಕ್ಕೂ ಮೊದಲು ವಿಮಾನಯಾನ ಸಂಸ್ಥೆ ಮೇ 5 ರವರೆಗೂ ಹಾರಾಟ ನಡೆಸಲಾಗುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೇ, ಶೀಘ್ರವೇ ಪ್ರಯಾಣಿಕರಿಗೆ ಟಿಕೆಟ್ನ ಸಂಪೂರ್ಣ ಹಣವನ್ನು ಪಾವತಿ ಮಾಡಲಾಗುವುದು ಎಂದು ತಿಳಿಸಿತ್ತು.
ವಿವಿಧ ಕಾರಣಗಳಿಗಾಗಿ ಮೇ 9 ರವರೆಗೆ ನಿಗದಿಪಡಿಸಲಾದ ಗೋ ಫಸ್ಟ್ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದು ಭಾರತೀಯ ವಿಮಾನಯಾನ ಸಂಸ್ಥೆ ಗೋ ಫಸ್ಟ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮೂಲ ಪಾವತಿ ವಿಧಾನದಲ್ಲೇ ಹಣವನ್ನು ಮರಳಿಸಲಾಗುವುದು ಎಂದು ಅದು ಹೇಳಿದೆ. ಅಲ್ಲದೇ, ಗ್ರಾಹಕರ ಪ್ರಯಾಣ ರದ್ದಾಗಿದ್ದಕ್ಕೆ ವಿಷಾದಿಸುತ್ತೇವೆ. ಅಗತ್ಯವಿರುವ ಎಲ್ಲ ನೆರವು ನೀಡಲು ಸಂಸ್ಥೆ ಪ್ರಯತ್ನಿಸಲಿದೆ ಎಂದು ತಿಳಿಸಿದೆ.
-
Due to operational reasons, Go First flights until 9th May 2023 are cancelled: Go First pic.twitter.com/8AXbgyeY2o
— ANI (@ANI) May 4, 2023 " class="align-text-top noRightClick twitterSection" data="
">Due to operational reasons, Go First flights until 9th May 2023 are cancelled: Go First pic.twitter.com/8AXbgyeY2o
— ANI (@ANI) May 4, 2023Due to operational reasons, Go First flights until 9th May 2023 are cancelled: Go First pic.twitter.com/8AXbgyeY2o
— ANI (@ANI) May 4, 2023
ಏರ್ಲೈನ್ಸ್ ಸಂಸ್ಥೆ, ದೆಹಲಿಯ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್‌ಸಿಎಲ್‌ಟಿ) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಿದೆ. ಅಲ್ಲದೇ, ಮೇ 3 ರಿಂದ ಮೇ 5 ರವರೆಗೆ ತನ್ನ ವಿಮಾನ ಕಾರ್ಯಾಚರಣೆಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿತ್ತು. ಸಂಸ್ಥೆಯ ವಿಮಾನಗಳು ಮೇ 15 ರವರೆಗೂ ಕಾರ್ಯಾಚರಣೆ ಸ್ಥಗಿತಗೊಳಿಸಬಹುದು ಎಂದು ಕೆಲ ವರದಿಗಳು ಹೇಳಿವೆ.
ಗೋ ಫಸ್ಟ್ ಕಂಪನಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಡಾಯ್ಚ ಬ್ಯಾಂಕ್ಗಳಲ್ಲಿ ಸಾಲವನ್ನು ಹೊಂದಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಸಾಲದ ಪ್ರಮಾಣ ಹೆಚ್ಚಾಗಿ ವಿಮಾನಗಳ ಕಾರ್ಯಾಚರಣೆಗೆ ಆರ್ಥಿಕ ತೊಡಕು ಉಂಟಾದ ಕಾರಣ ಹಾರಾಟ ನಿಲ್ಲಿಸಿದೆ.
ಗೋ ಫಸ್ಟ್ ಏರ್ಲೈನ್ಸ್ ಕ್ಯಾಶ್ ಆ್ಯಂಡ್ ಕ್ಯಾರಿ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಅಂದರೆ, ಅದು ತನ್ನ ಪ್ರತಿದಿನದ ವಿಮಾನ ಹಾರಾಟವನ್ನು ಆಧರಿಸಿ ತೈಲ ಕಂಪನಿಗಳಿಗೆ ಪೇಮೆಂಟ್ ಮಾಡುತ್ತದೆ. ಎಂಜಿನ್ ಸಮಸ್ಯೆಯ ಕಾರಣದಿಂದ ವಿಮಾನಗಳ ಹಾರಾಟ ನಿಂತು ಹೋಗಿದ್ದರಿಂದ ಈಗ ಕಂಪನಿಗೆ ಹಣಕಾಸು ಬಿಕ್ಕಟ್ಟು ಎದುರಾಗಿದೆ. ಈ ಕಾರಣದಿಂದ ತೈಲ ಕಂಪನಿಗಳಿಗೆ ಪೇಮೆಂಟ್ ಮಾಡಲು ಕಂಪನಿಗೆ ಸಾಧ್ಯವಾಗುತ್ತಿಲ್ಲ.
ದಿವಾಳಿಯಾದ ಬಗ್ಗೆ ಎನ್ಸಿಎಲ್ಟಿಗೆ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಒಪ್ಪಿಕೊಂಡರೆ, ನಂತರ ವಿಮಾನಗಳನ್ನು ಪುನರಾರಂಭಿಸಲಾಗುವುದು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಗೋ ಫಸ್ಟ್ ಏರ್ಲೈನ್ಸ್ 5,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಎಂಜಿನ್ ಸಮಸ್ಯೆ, ತೈಲ ಬಿಕ್ಕಟ್ಟಿನ ಕಾರಣ ತನ್ನೆಲ್ಲಾ 28 ವಿಮಾನಗಳನ್ನು ಮೇ 3 ಮತ್ತು 4 ರವರೆಗೆ ಹಾರಾಟ ನಿಲ್ಲಿಸಲಾಗುವುದು ಎಂದು ಸಂಸ್ಥೆ ಮೊದಲು ಹೇಳಿತ್ತು. ಇದಾದ ಬಳಿಕ 5 ರವರೆಗೂ ಅದನ್ನು ವಿಸ್ತರಿಸಿತ್ತು. ಇದೀಗ ಮೇ 9 ರವರೆಗೂ ಹಾರಾಟ ಸಾಧ್ಯವಿಲ್ಲ ಎಂದು ಹೇಳಿದೆ.
ಓದಿ: 3 ದಿನ ಗೋ ಫಸ್ಟ್ ವಿಮಾನ ಸೇವೆ ರದ್ದು; ಟಿಕೆಟ್ ಖರೀದಿಸಿದ ಪ್ರಯಾಣಿಕರಿಗೆ ಫಜೀತಿ