ETV Bharat / bharat

ಚಿತೆಯಲ್ಲಿ ಬೇಯುತ್ತಿದ್ದ ಶವದ ಮಾಂಸ ಸೇವಿಸಿದ ಇಬ್ಬರು ಪಾನಮತ್ತರು!? - etv bharat kannda

ಸ್ಮಶಾನದಲ್ಲಿ ಅರೆಬೆಂದಿದ್ದ ಯುವತಿಯ ಶವವನ್ನು ಇಬ್ಬರು ಪಾನಮತ್ತ ವ್ಯಕ್ತಿಗಳು ಸೇವಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

drunk-men-eat-human-flesh-at-cremation-ground-in-mayurbhanj
ಚಿತೆಯಲ್ಲಿ ಬೇಯುತ್ತಿದ್ದ ಶವ ಸೇವಿಸಿದ ಇಬ್ಬರು ಪಾನಮತ್ತರು!
author img

By

Published : Jul 12, 2023, 7:07 PM IST

ಮಯೂರ್‌ಭಂಜ್(ಒಡಿಶಾ): ಸ್ಮಶಾನದ ಚಿತೆಯಲ್ಲಿ ಬೇಯುತ್ತಿದ್ದ ಶವದ ಮಾಂಸವನ್ನು ಇಬ್ಬರು ವ್ಯಕ್ತಿಗಳು ಸೇವಿಸಿರುವ ಆಘಾತಕಾರಿ ಘಟನೆ ಇಲ್ಲಿನ ದಂಟುನಿಬಿಂದಾ ಗ್ರಾಮದಲ್ಲಿ ನಡೆದಿದೆ. ಅನಾರೋಗ್ಯದಿಂದ ಸಾವನ್ನಪ್ಪಿದ 25 ವರ್ಷದ ಯುವತಿಯ ಶವವನ್ನು ಗ್ರಾಮಸ್ಥರು ದಹನ ಮಾಡಿದ್ದರು. ಈ ವೇಳೆ ಪಾನಮತ್ತರಾಗಿದ್ದ ಇಬ್ಬರು ವ್ಯಕ್ತಿಗಳು ಅರೆಬೆಂದ ಶವವನ್ನು ತೆಗೆದುಕೊಂಡು ಹೋಗಿ ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವಿಷಯ ಗ್ರಾಮಸ್ಥರಿಗೆ ತಿಳಿದು ಇಬ್ಬರನ್ನು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮೃತ ಯುವತಿಯ ಸಂಬಂಧಿಯೊಬ್ಬರು ಮಾತನಾಡಿ, " ದಹನ ಸಂಸ್ಕಾರ ಮಾಡಿದ್ದ ಶವ ಸಂಪೂರ್ಣವಾಗಿ ಸುಟ್ಟುಹೋಗಿರಲಿಲ್ಲ, ಆಗ ಇಲ್ಲಿಗೆ ಬಂದ ಇಬ್ಬರು ವಕ್ತಿಗಳು ಚಿತೆಯಲ್ಲಿ ಅರೆಬೆಂದ ಶವವನ್ನು ತೆಗೆದುಕೊಂಡು ಹೋಗಿ ಸೇವಿಸಿದ್ದಾರೆ" ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಬಡಸಾಹಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಸಂಜಯ್ ಕುಮಾರ್ ಪರಿದಾ ಪ್ರತಿಕ್ರಿಯಿಸಿ, " ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಸುಂದರ್ ಮೋಹನ್ ಸಿಂಗ್ ಒಬ್ಬ ಮಾಂತ್ರಿಕನಾಗಿದ್ದಾನೆ. ಅವರು ಮದ್ಯದ ಅಮಲಿನಲ್ಲಿ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ " ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಸಂಬಂಧಿಕರಿಂದಲೇ ಮಹಿಳೆ ಬರ್ಬರ ಹತ್ಯೆ: ರಕ್ಷಣೆಗೆ ಧಾವಿಸಿದ ನಾಲ್ವರು ಮಕ್ಕಳಿಗೆ ಗಂಭೀರ ಗಾಯ

ವ್ಯಕ್ತಿಯ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ: ಇತ್ತೀಚಿಗೆ, ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಕತ್ತು ಕೊಯ್ದು ರಕ್ತ ಕುಡಿದಿರುವ ಬೀಭತ್ಸಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿತ್ತು. ವ್ಯಕ್ತಿಯೊಬ್ಬನ ಕತ್ತಿನ ರಕ್ತ ಕುಡಿಯುತ್ತಿವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿತ್ತು. ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ನಿವಾಸಿ ವಿಜಯ್ ಎಂಬಾತ ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ್ ಮೇಲೆ ಹಲ್ಲೆ ಮಾಡಿ, ರಕ್ತ ಕುಡಿದಿದ್ದ. ತೀವ್ರವಾಗಿ ಗಾಯಗೊಂಡಿರುವ ಮಾರೇಶ್​​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿ ವಿಜಯ್​ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾರೇಶ್​ನನ್ನು ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ವಿಜಯ್ ಕರೆಸಿಕೊಂಡಿದ್ದ. ಬಳಿಕ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಮಾರೇಶ್​ನ ಕತ್ತಿಗೆ ಚಾಕುವಿನಿಂದ ವಿಜಯ್ ಇರಿದು ಹಲ್ಲೆ ಮಾಡಿದ್ದ. ಬಳಿಕ ಹಲ್ಲೆಯಿಂದ ಅಸ್ವಸ್ಥನಾಗಿ ಕೆಳಗೆ ಬಿದ್ದ ಮಾರೇಶ್​ನ ಕತ್ತಿನಿಂದ ವಿಜಯ್ ರಕ್ತ ಕುಡಿದಿದ್ದ. ಈ ಕೃತ್ಯವನ್ನು ಅಲ್ಲೆ ಇದ್ದ ವ್ಯಕ್ತಿಯೊಬ್ಬ ವಿಡಿಯೋದಲ್ಲಿ ಸೆರೆ ಹಿಡಿದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.