ETV Bharat / bharat

ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಸಜ್ಜನರ್​​ ಖಡಕ್​ ಮಾತು​

author img

By

Published : Dec 31, 2020, 9:33 PM IST

Updated : Dec 31, 2020, 10:07 PM IST

ಕುಡಿದು ವಾಹನ ಚಲಾಯಿಸುವವರಲ್ಲಿ ಹೆಚ್ಚಿನವರು ವಿದ್ಯಾವಂತರು, ಉದ್ಯೋಗದಲ್ಲಿರುವವರು ಎಂದು ತಿಳಿದು ಬರುತ್ತದೆ. ಆಘಾತಕಾರಿ ಸಂಗತಿಯೆಂದರೆ, ಅವರಲ್ಲಿ ಹಲವರು ನ್ಯೂಯಾರ್ಕ್, ಮೆಲ್ಬೋರ್ನ್, ಸಿಂಗಾಪುರ್, ದುಬೈ ಮುಂತಾದ ಕೆಲವು ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದಾರೆ.

drunk-drivers-are-terrorists-cyberabad-top-cop
ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು

ಹೈದರಾಬಾದ್: ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಭಯೋತ್ಪಾದರು ಎಂದು ಇಲ್ಲಿನ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ ಸಜ್ಜನರ್​ ಹೇಳಿಕೆ ನೀಡಿದ್ದಾರೆ.

ಕುಡಿದು ವಾಹನ ಚಲಾವಣೆ ಮಾಡಿ ರಸ್ತೆಯಲ್ಲಿ ಅಮಾಯಕರ ಪ್ರಾಣಹಾನಿಗೆ ಕಾರಣವಾಗುವ ಚಾಲಕರು ಭಯೋತ್ಪಾದಕರಿಗಿಂತ ಕಡಿಮೆ ಏನಲ್ಲ ಎಂದಿದ್ದಾರೆ.

ಪೊಲೀಸರು ಇರಲಿ ಇಲ್ಲದಿರಲಿ ರಸ್ತೆಯ ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಿ ತಮ್ಮ ಹಾಗೂ ಬೇರೆಯವರ ಜೀವದ ಬಗ್ಗೆ ಕಾಳಜಿ ಹೊಂದಿರುವವರೇ ನಿಜವಾದ ದೇಶ ಭಕ್ತರು ಎಂದಿದ್ದಾರೆ.

ಕುಡಿದು ವಾಹನ ಚಲಾಯಿಸುವವರಲ್ಲಿ ಹೆಚ್ಚಿನವರು ವಿದ್ಯಾವಂತರು, ಉದ್ಯೋಗದಲ್ಲಿರುವವರು ಎಂದು ತಿಳಿದು ಬರುತ್ತದೆ. ಆಘಾತಕಾರಿ ಸಂಗತಿಯೆಂದರೆ, ಅವರಲ್ಲಿ ಹಲವರು ನ್ಯೂಯಾರ್ಕ್, ಮೆಲ್ಬೋರ್ನ್, ಸಿಂಗಾಪುರ್, ದುಬೈ ಮುಂತಾದ ಕೆಲವು ದೊಡ್ಡ ನಗರಗಳಲ್ಲಿ ವಾಸಿಸುತ್ತಿದ್ದಾರೆ ಅಥವಾ ಉಳಿದುಕೊಂಡಿದ್ದಾರೆ. ಅಲ್ಲಿ ಅವರು ಯಾವುದೇ ಸಂಚಾರ ನಿಯಮ ಉಲ್ಲಂಘನೆ ಮಾಡುವ ಬಗ್ಗೆ ಯೋಚಿಸುವುದಿಲ್ಲ. ಆದರೆ, ಇಲ್ಲಿ ತಮ್ಮ ಸ್ವಂತ ನಗರಕ್ಕೆ ಬಂದಾಗ ತಮ್ಮ ಮತ್ತು ಇತರ ಮುಗ್ಧ ಜನರ ಸುರಕ್ಷತೆಯನ್ನು ಮರೆತು ಅಪಾಯಕಾರಿ ಕೃತ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹವರಿಗೆ ಸ್ವಯಂ ಆತ್ಮಾವಲೋಕನದ ಅಗತ್ಯವಿದೆ ಎಂದಿದ್ದಾರೆ.

ಕುಡಿದು ವಾಹನ ಚಲಾಯಿಸುವುದು ರಸ್ತೆ ಅಪಘಾತಗಳಿಗೆ ಬಹುಮುಖ್ಯ ಕಾರಣವಾಗಿದೆ. ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುವ ಯುವ ಜೀವಗಳು ಹೆಚ್ಚಿನದಾಗಿ ಮಾನಸಿಕ ಒತ್ತಡ ಮತ್ತು ಜೀವನೋಪಾಯದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದಿದ್ದಾರೆ.

ನೀವು ಅಮೆರಿಕ, ಆಸ್ಟ್ರೇಲಿಯಾ, ಸಿಂಗಪೂರ್, ದುಬೈ ಯಂತಹ ನಗರದಲ್ಲಿ ಕುಡಿದು ವಾಹನ ಚಲಾಯಿಸುವ ಧೈರ್ಯ ಮಾಡುವುದಿಲ್ಲ. ನೀವು ನಿಜವಾದ ದೇಶಭಕ್ತರಾಗಿದ್ದರೆ ನೀವು ಎಲ್ಲಿ ಬೇಕಾದರೂ ಸಂಚಾರಿ ನಿಯಮಗಳನ್ನು ಪಾಲಿಸುತ್ತೀರಿ ಎಂದಿದ್ದಾರೆ.

Last Updated : Dec 31, 2020, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.