ಐಜ್ವಾಲ್(ಮಿಜೋರಾಂ) : ಭಾರತದಲ್ಲಿ ಶೇ.7ರಷ್ಟು ಜನ ಮಾದಕ ವ್ಯಸನಿಗಳಾಗಿದ್ದಾರೆ. ಅದರಲ್ಲೂ ಮಿಜೋರಾಂನಲ್ಲಿಯೇ ಅತಿ ಹೆಚ್ಚು ಡ್ರಗ್ಸ್ ಬಳಕೆಯಾಗುತ್ತಿದೆ ಅನ್ನೋದು ಮತ್ತೊಂದು ಆಘಾತಕಾರಿ ಸಂಗತಿ.
ಐಜ್ವಾಲ್ನಲ್ಲಿ ಶೇ.27.8ರಷ್ಟು, ಲಾಂಗ್ಟ್ಲೈನಲ್ಲಿ ಶೇ.5.9ರಷ್ಟು ಜನರು ಡ್ರಗ್ಸ್ ಸೇವಿಸುತ್ತಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.
ಅಸ್ಸೋಂ ರೈಫಲ್ಸ್ ತಂಡ ವಿವಿಧೆಡೆ ದಾಳಿ ನಡೆಸಿ ಜನವರಿ 7, 16, 18, 21, 27 ಮತ್ತು 29 ರಂದು 4,87,24,000 ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
1984 ರಿಂದ ಮಿಜೋರಾಂನಲ್ಲಿ ಡ್ರಗ್ಸ್ ಸೇವಿಸಿ 131 ಮಹಿಳೆಯರು ಸೇರಿ 1,630 ಜನರು ಮೃತಪಟ್ಟಿದ್ದಾರೆ. 2020ರಲ್ಲಿ 50 ಜನರು ಮೃತಪಟ್ಟಿದ್ದಾರೆಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಜನವರಿ 2, 2021ರಂದು ಅಸ್ಸೋಂ ರೈಫಲ್ಸ್‌ನ ಐಜಾಲ್ ಬೆಟಾಲಿಯನ್, ಡ್ರಗ್ಸ್ ವಿರೋಧಿ ಅಭಿಯಾನದ ಮೊದಲ ಹಂತವನ್ನು ಆರಂಭಿಸಿತ್ತು. 2ನೇ ಅಭಿಯಾನವು ಜನವರಿ 15ರಂದು ಪ್ರಾರಂಭವಾಯಿತು.
ಡ್ರಗ್ಸ್ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಜನತೆಗೆ ತಿಳಿಸುವಲ್ಲಿ ಈ ಅಭಿಯಾನ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.