ಕಛ್/ಹೈದರಾಬಾದ್: ಗುಜರಾತ್ನಲ್ಲಿ ಎಟಿಎಸ್ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆ ನಡೆಸಿ ಮತ್ತೊಂದು ಭರ್ಜರಿ ಬೇಟೆಯಾಡಿದೆ. ಕಛ್ ಕರಾವಳಿಯಲ್ಲಿ ಪಾಕಿಸ್ತಾನದಿಂದ ಸಾಗಿಸಲಾಗುತ್ತಿದ್ದ 50 ಕೆಜಿ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ. ಇನ್ನೊಂದೆಡೆ ಹೈದರಾಬಾದ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದಿಂದ ಅಕ್ರಮವಾಗಿ ಗುಜರಾತ್ನ ಕಛ್ ಬಂದರಿನಿಂದ 50 ಕೆಜಿ ಕೆಜಿ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಟಿಎಸ್ ಮತ್ತು ಭಾರತೀಯ ಕೋಸ್ಟ್ ಗಾರ್ಡ್ 350 ಕೋಟಿ ರೂಪಾಯಿ ಮೌಲ್ಯದ ಅಫೀಮುಅನ್ನು ಜಪ್ತಿ ಮಾಡಿದೆ. ಜೊತೆಗೆ ಪಾಕಿಸ್ತಾನದ 6 ಪ್ರಜೆಗಳನ್ನು ಬಂಧಿಸಿ, ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ತಿಂಗಳು ಸೆಪ್ಟೆಂಬರ್ 14 ರಂದು ಅರಬ್ಬಿ ಸಮುದ್ರದಲ್ಲಿ ಭಾರತೀಯ ಜಲಪ್ರದೇಶದಲ್ಲಿ 200 ಕೋಟಿ ಮೌಲ್ಯದ 40 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು.
ಹೈದರಾಬಾದ್ನಲ್ಲಿ ಚಿನ್ನ ಬೇಟೆ: ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ದಾಳಿಯಲ್ಲಿ 4 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕ ಸುಳಿವಿನ ಆಧಾರದ ಮೇಲೆ ದುಬೈನಿಂದ ಬಂದ ಪ್ರಯಾಣಿಕರನ್ನು ತಡೆದು ತಪಾಸಿಸಿದಾಗ 4.895 ಕೆಜಿ ಚಿನ್ನ ಏರ್ ಕಂಪ್ರೆಸರ್‌ನಲ್ಲಿ ಸಿಕ್ಕಿದೆ. ಇದು 2.57 ಕೋಟಿ ಮೌಲ್ಯವುಳ್ಳದ್ದಾಗಿದೆ.
ಮತ್ತೊಂದು ದಾಳಿಯಲ್ಲಿ ದುಬೈನಿಂದ ಬಂದ ಇಬ್ಬರು ಪ್ರಯಾಣಿಕರ ಬ್ಯಾಗ್ನಲ್ಲಿ ಬಚ್ಚಿಟ್ಟಿದ್ದ 1.4 ಕೋಟಿ ರೂಪಾಯಿ ಮೌಲ್ಯದ 2.8 ಕೆಜಿ ಚಿನ್ನದ ತುಂಡುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಓದಿ: ಗುಜರಾತ್ನಲ್ಲಿ ಅಕ್ರಮ ಮಸೀದಿ ಕಟ್ಟಡ ತೆರವು.. ಭುಗಿಲೆದ್ದ ಪ್ರತಿಭಟನೆ, ಐವರು ಪೊಲೀಸರಿಗೆ ಗಾಯ