ETV Bharat / bharat

ಭಾರತ್- ಪಾಕ್​ ಗಡಿಯಲ್ಲಿ 40 ಕಿ.ಮೀ ಬೆನ್ನಟ್ಟಿ ಡ್ರಗ್ಸ್​ ಕಳ್ಳಸಾಗಣೆದಾರನ ಹಿಡಿದ ಪೊಲೀಸರು - ಹೆರಾಯಿನ್​ ಜಪ್ತಿ

ಪಂಜಾಬ್​ನಲ್ಲಿ ಮತ್ತಿಬ್ಬರು ಡ್ರಗ್ಸ್​ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. 2 ಕೆಜಿ ಹೆರಾಯಿನ್​ ಜಪ್ತಿ ಮಾಡಲಾಗಿದೆ.

ಕಳ್ಳಸಾಗಣೆದಾರರ ಹಿಡಿದ ಪಂಜಾಬ್​ ಪೊಲೀಸರು
ಕಳ್ಳಸಾಗಣೆದಾರರ ಹಿಡಿದ ಪಂಜಾಬ್​ ಪೊಲೀಸರು
author img

By ETV Bharat Karnataka Team

Published : Nov 5, 2023, 10:20 PM IST

ತರನ್​ ತರನ್​ (ಪಂಜಾಬ್): ಪಂಜಾಬ್​ನಲ್ಲಿ ಮಾದಕವಸ್ತು ಮಾಫಿಯಾ ಜೋರಾಗಿದೆ. ಹೆರಾಯಿನ್​ ಸಾಗಿಸುತ್ತಿದ್ದ ಕಳ್ಳಸಾಗಣೆದಾರರನ್ನು ಪೊಲೀಸರು 40 ಕಿ.ಮೀ ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತರಿಂದ 2 ಕೆಜಿ ಡ್ರಗ್ಸ್​ ವಶಪಡಿಸಿಕೊಡಿದ್ದಾರೆ. ಈ ಘಟನೆ ತರನ್​ ತರನ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್​ ಅಕ್ರಮ ಸಾಗಣೆ ಮುಂದುವರಿದಿದೆ. ಇಂದು ಕಳ್ಳಸಾಗಣೆದಾರರು, 2 ಕೆಜಿ ಹೆರಾಯಿನ್​ ಅನ್ನು ಸಾಗಿಸುತ್ತಿದ್ದಾಗ, ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಇದನ್ನರಿತ ಡ್ರಗ್ಸ್​ ಸಾಗಣೆದಾರರು, ತಮ್ಮ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಆತನನ್ನು ಪೊಲೀಸರು ಬೆನ್ನತ್ತಿ ಸುಮಾರು 40 ಕಿ.ಮೀ ದೂರ ಚೇಸ್​ ಮಾಡಿದ್ದಾರೆ. ಬಳಿಕ ಎನ್​ಕೌಂಟರ್​ ನಡೆಸಲಾಗಿದ್ದು, ಆರೋಪಿ ಕಾಲಿಗೆ ಗುಂಡು ತಾಗಿದೆ. ಗಾಯಗೊಂಡ ಆತ ಕೆಳಕ್ಕೆ ಬಿದ್ದಾಗ ಬಂಧಿಸಲಾಗಿದ್ದು, ಆತನಿಂದ 2 ಕೆಜಿ ಹೆರಾಯಿನ್​ ವಶಕ್ಕೆ ಪಡೆಯಲಾಗಿದೆ.

  • In a major breakthrough, @TarnTaranPolice arrested 2 notorious smugglers after a chase of 40 Kms on Indo-Pak border and recovered 2 Kg Heroin

    During the chase 1 smuggler arrested after a brief encounter in which he got his leg injured (1/2) pic.twitter.com/BJDD45qoFI

    — DGP Punjab Police (@DGPPunjabPolice) November 5, 2023 " class="align-text-top noRightClick twitterSection" data=" ">

ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಂಜಾಬ್​ ಪೊಲೀಸರು, ಪ್ರಮುಖ ವಿದ್ಯಮಾನವೊಂದರಲ್ಲಿ ಭಾರತ-ಪಾಕ್ ಗಡಿಯಲ್ಲಿ 40 ಕಿಲೋಮೀಟರ್ ಬೆನ್ನಟ್ಟಿ ಆರೋಪಿ ಬಳಿ ಇದ್ದ ಡ್ರಗ್ಸ್​ ಜಪ್ತಿ ಮಾಡಲಾಗಿದೆ. ಇಬ್ಬರು ಕುಖ್ಯಾತ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಚೇಸಿಂಗ್​ ಸಮಯದಲ್ಲಿ ಒಬ್ಬ ಕಳ್ಳಸಾಗಣೆದಾರನ ಕಾಲಿಗೆ ಗುಂಡೇಟು ಬಿದ್ದಿದೆ. ಚೋಲಾ ಸಾಹಿಬ್‌ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ ಹೆಚ್ಚಾಗುತ್ತಿರುವ ಕಾರಣ ಸಿಎಂ ಭಗವಂತ್ ಮಾನ್ ಅವರ ಸೂಚನೆಯಂತೆ ಮಾಫಿಯಾವನ್ನು ಕಿತ್ತುಹಾಕಲು ಶ್ರಮಿಸಲಾಗುತ್ತಿದೆ. ಪಂಜಾಬ್ ಪೊಲೀಸರು ರಾಜ್ಯವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಬದ್ಧರಾಗಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

5 ದಿನದಲ್ಲಿ ಎರಡನೇ ಬೇಟೆ: ಅಮೃತಸರದ ಬಿಎಸ್‌ಎಫ್ ಪಡೆ ಮತ್ತು ಪೊಲೀಸರು ನವೆಂಬರ್ 1 ರಂದು ರಜತಾಲ್ ಗ್ರಾಮದ ಭತ್ತದ ಗದ್ದೆಯಲ್ಲಿ ಮೂರು ಪ್ಯಾಕೆಟ್ ಹೆರಾಯಿನ್ ಮತ್ತು ಡ್ರೋನ್ ಅನ್ನು ವಶಪಡಿಸಿಕೊಂಡ ಕೆಲ ದಿನಗಳಲ್ಲಿ ಈ ಘಟನೆ ನಡೆದಿದೆ. ವಶಪಡಿಸಿಕೊಂಡ ಹೆರಾಯಿನ್‌ನ ತೂಕ ಸುಮಾರು 3.242 ಕೆಜಿಯಷ್ಟಿತ್ತು.

ಆಗಸ್ಟ್‌ ತಿಂಗಳಲ್ಲಿ ತರನ್ ತರನ್‌ನ ಕಸಬಾ ಪಟ್ಟಿಯ ಕೈರೋನ್ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆದಾರನನ್ನು ಹತ್ಯೆ ಮಾಡಿ, ಇನ್ನೊಬ್ಬನನ್ನು ಬಂಧಿಸಲಾಯಿತು. ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಂಜಾಬ್ ಪೊಲೀಸರು ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಬೆನ್ನಟ್ಟಿದ್ದರು. ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಗುಂಡು ಹಾರಿಸಲು ಪ್ರಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದು, ಒಬ್ಬ ಕಳ್ಳಸಾಗಣೆದಾರನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಸ್ಥಳದಿಂದ ಮತ್ತೊಬ್ಬನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಒಂದಲ್ಲ, ಎರಡಲ್ಲ, 4 ತಿಂಗಳು; ಶವಾಗಾರದ ಮುಂದೆ ಮೃತ ಮಾಲೀಕನಿಗೋಸ್ಕರ ಎದುರು ನೋಡುತ್ತಿದೆ ಸಾಕು ನಾಯಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.