ಸೂರತ್: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ತನಿಖೆ ಚುರುಕಾಗಿಯೇ ನಡೆಯುತ್ತಿದೆ. ಈಗ ಆರೋಪಿ ಅಫ್ತಾಬ್‌ಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಾದಕ ದ್ರವ್ಯ ದಂಧೆಕೋರ ಸೂರತ್ ನಿವಾಸಿ ಎಂದು ತಿಳಿದುಬಂದಿದೆ.
ಡ್ರಗ್ ಪೆಡ್ಲರ್ ಫೈಸಲ್ ಮೊಮಿನ್ ಆರೋಪಿ. ಈತನನ್ನು ಪಾಂಡೆಸರಾ ಮತ್ತು ಅಮ್ರೋಲಿಯಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಮೊಮಿನ್ ಅಫ್ತಾಬ್‌ಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದ ನಂತರ ಪೊಲೀಸರು ಫೈಸಲ್ ಮೊಮಿನ್ ಫೋನ್ ಕರೆ ದಾಖಲೆಗಳನ್ನು ತನಿಖೆ ಮಾಡಿದ್ದರು.
ಇದಾಗಿ ಫೈಸಲ್ನನ್ನು ಸೂರತ್ ಕ್ರೈಂ ಬ್ರಾಂಚ್ ನಾಲ್ಕು ದಿನಗಳ ಹಿಂದೆ ಬಂಧಿಸಿದೆ. ಪ್ರಸ್ತುತ ಫೈಸಲ್ ಮೊಮಿನ್ ಸೂರತ್‌ನ ಲಜ್‌ಪೋರ್ ಜೈಲಿನಲ್ಲಿದ್ದಾನೆ.
ಇದನ್ನೂ ಓದಿ: ಸೂರತ್ನಲ್ಲಿ ಪಿಎಂ ಮೋದಿ ಪ್ರಚಾರ: ಡೈಮಂಡ್ ವ್ಯಾಪಾರಿಗಳು, ಪಾಟಿದಾರ್ ಮುಖಂಡರ ಭೇಟಿ