ETV Bharat / bharat

ಮುಂಬೈ ವಿಮಾನ ನಿಲ್ದಾಣದಲ್ಲಿ 2.58 ಕೆಜಿ ಕೊಕೇನ್ ವಶಕ್ಕೆ ಪಡೆದ ಡಿಆರ್​ಐ ತಂಡ, ಇಬ್ಬರ ಬಂಧನ - ಇಬ್ಬರ ಬಂಧನ

ಇಥಿಯೋಪಿಯಾ ಅಡಿಸ್ ಅಬಾಬಾದಿಂದ ಮುಂಬೈಗೆ ಕಳ್ಳಸಾಗಣೆ ಮೂಲಕ ಸಾಗಿಸುತ್ತಿದ್ದ ಅಂದಾಜು ₹ 25 ಕೋಟಿ ಮೌಲ್ಯದ 2.58 ಕೆಜಿ ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತಂಡ ವಶಕ್ಕೆ ಪಡೆದಿದೆ.

Mumbai Chhatrapati Shivaji Maharaj Airport
ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣ
author img

By

Published : Mar 1, 2023, 4:49 PM IST

ಮುಂಬೈ: ಇಥಿಯೋಪಿಯಾದಿಂದ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನಿಂದ ಸೋಪ್ ಬಾರ್‌ಗಳಲ್ಲಿ ಬಚ್ಚಿಟ್ಟಿದ್ದ ಅಂದಾಜು ₹ 25 ಕೋಟಿ ಮೌಲ್ಯದ 2.58 ಕೆಜಿ ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತಂಡ ವಶಕ್ಕೆ ಪಡೆದಿದೆ. ಕೋಕೆನ್ ಕಳ್ಳಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಆರ್​ಐ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಅಡಿಸ್ ಅಬಾಬಾ (ಇಥಿಯೋಪಿಯಾ) ದಿಂದ ಮುಂಬೈಗೆ ಮಾದಕ ವಸ್ತು ಕೊಕೇನ್ ಕಳ್ಳಸಾಗಣೆ ಮಾಡುತ್ತಿರುವ ನಿರ್ದಿಷ್ಟ ಮಾಹಿತಿ ಅರಿತ ಡಿಆರ್‌ಐ ತಂಡ,ಈ ಕಳ್ಳಸಾಗಣೆ ಜಾಲ ಭೇದಿಸಲೂ ನಗರದ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ನಿರಂತರ ಕಣ್ಗಾವಲು ಇರಿಸಿದೆ.

ಫೆಬ್ರವರಿ 27 ರಂದು ಬೆಳಗ್ಗೆ ಅಡಿಸ್ ಅಬಾಬಾ (ಇಥಿಯೋಪಿಯಾ) ದಿಂದ ಮುಂಬೈಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶಂಕಿತ ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳ ತಂಡವು ತಡೆಹಿಡಿದು ಪರಿಶೀಲಿಸಿದೆ. ನಂತರ ಶಂಕಿತ ಪ್ರಯಾಣಿಕರ ಟ್ರಾಲಿ ಬ್ಯಾಗ್​ನಲ್ಲಿದ್ದ ಸಾಮಾನುಗಳನ್ನು ಕೂಲಂಕಷವಾಗಿ ಶೋಧಿಸಿದಾಗ 12 ಸೋಪ್ ಬಾರ್‌ಗಳಲ್ಲಿ ಬಚ್ಚಿಟ್ಟಿದ್ದ 2.58 ಕೆಜಿ ಕೊಕೇನ್ ಇರುವುದು ಪತ್ತೆಯಾಗಿದೆ.

ಡಿಆರ್‌ಐ ತಂಡವೂ 2.58 ಕೆಜಿ ಕೊಕೇನ್ ವಶಪಡಿಸಿಕೊಂಡು, ತಕ್ಷಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಕ್ಷಣ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ. ನಂತರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಇನ್ನೊಬ್ಬ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಡಿಆರ್‌ಐ ತಂಡ ಯಶಸ್ವಿಯಾಗಿದೆ. ಪ್ರಸ್ತುತ ಸಿಕ್ಕಿರುವ ಕೊಕೇನ್ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 25 ಕೋಟಿ ರೂ.ಕ್ಕಿಂತ ಹೆಚ್ಚು ಎಂದು ಡಿಆರ್ ಐ ಅಂದಾಜಿಸಿದೆ.

ಇಬ್ಬರು ಆರೋಪಿಗಳನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಡಿಆರ್​​ಐ ತಂಡವೂ, ಇನ್ನು ಹೆಚ್ಚಿನ ತನಿಖೆಗಾಗಿ ತನ್ನ ಕಸ್ಟ್​ಡಿಗೆ ತೆಗೆದುಕೊಂಡಿದೆ. ಈ ಮಾದಕ ದ್ರವ್ಯ ಯಾರಿಂದ ಬಂದವು? ಅದನ್ನು ಎಲ್ಲಿಗೆ ಕಳುಹಿಸಲಾಗುತ್ತಿತ್ತು? DRI ಈಗ ಅದನ್ನು ಪರಿಶೀಲಿಸುತ್ತಿದೆ. ಮತ್ತಷ್ಟು ತನಿಖೆ ಡಿಆರ್​ಐ ಮುಂದುವರಿಸಿದೆ.

ಮುಂಬೈನಲ್ಲಿ ಯುವತಿಯರಿಗೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯ - ಹೈದರಾಬಾದ್​(ತೆಲಂಗಾಣ): ಮುಂಬೈನಲ್ಲಿ ಯುವತಿಯರಿಗೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಗ್ಯಾಂಗ್​​ವೊಂದನ್ನು ಹೈದರಾಬಾದ್​ನ ನಾರ್ಕೋಟಿಕ್​ ಜಾರಿ ನಿರ್ದೇಶನಾಲಯ ದಳ (ಎಚ್​ಎನ್​ಯು) ಬಂಧಿಸಿದೆ. ಜತಿನ್​ ಬಾಲಚಂದ್ರ ಭಲೆರಾಂ (36), ಜಾವೇದ್​ ಶಂಶೇರ್​ ಆಲಿ ಸಿದ್ಧಿಕಿ (34), ಜುನೈದ್​ ಶೇಕ್​ ಶಂಶುದ್ದಿನ್​(28) ಮತ್ತು ವಿಕಾಸ್​ ಮೋಹನ್​ ಕುಮಾರ್​ ಆಲಿಯಾಸ್​​ ವಿಕ್ಕಿ(28) ಬಂಧಿತರು.

ಇವರೆಲ್ಲಾ ಮುಂಬೈನವರಾಗಿದ್ದು, ಇವರ ಬಳಿ ಇದ್ದ 204 ಗ್ರಾಂ ಮಾದಕ ವಸ್ತುವನ್ನು ಅನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆಯೊಬ್ಬರು ಡ್ರಗ್ಸ್​ ಮಾರಾಟ ಮಾಡುತ್ತಿದ್ದರ ತನಿಖೆಗೆ ಮುಂದಾದಾಗ ಈ ಗ್ಯಾಂಗ್​ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಬಂಜಾರ ಹಿಲ್ಸ್​ ಪೊಲೀಸ್​ ಕಮಾಂಡ್​ ಕಂಟ್ರೋಲ್​ ಕೇಂದ್ರದಲ್ಲಿ ಎಚ್​ಎನ್​ಯು ಡಿಸಿಪಿ ಗುಮ್ಮಿ ಚಕ್ರವರ್ತಿ ಅವರೊಂದಿಗೆ ನಡೆಸಿದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ನಗರ ಪೊಲೀಸ್​ ಕಮಿಷನರ್​​ ಸಿ ವಿ ಆನಂದ್​ ತಿಳಿಸಿದ್ದಾರೆ.

ಇದನ್ನೂಓದಿ:ಕೊರೊನಾ ವೈರಾಣು ಪಸರಿಸಿದ್ದು ಚೀನಾದ ವುಹಾನ್​ ಲ್ಯಾಬ್​ನಿಂದ: ಅಮೆರಿಕದ ಎಫ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.