ನವದೆಹಲಿ: ಚಿನ್ನದ ಕಳ್ಳಸಾಗಣೆ ವಿರುದ್ಧ ಸಮರ ಸಾರಿರುವ ಕಂದಾಯ ಗುಪ್ತಚರ ಇಲಾಖೆ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ 66 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡು, ಈ ಸಂಬಂಧ ಐವರನ್ನು ಬಂಧಿಸಿದೆ.
ಡಿಆರ್‌ಐನ ದೆಹಲಿ ವಲಯ ಘಟಕದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 400 ಚಿನ್ನದ ಸರಗಳಿದ್ದು, ಪ್ರತಿಯೊಂದೂ 166 ಗ್ರಾಂ. ಮತ್ತು 2 ಟ್ರಕ್ ತೂಕ ಹೊಂದಿವೆ, ವಿದೇಶಿ ಮೂಲದ ಚಿನ್ನದ ಮೌಲ್ಯ 35 ಕೋಟಿ ರೂ.ಯಷ್ಟಿದೆ.
ವಿದೇಶಿ ಮೂಲದ ಚಿನ್ನಕಳ್ಳ ಸಾಗಾಣಿಕೆದಾರರು ಎರಡು ಟ್ರಕ್‌ಗಳನ್ನು ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದರು. ಚಿನ್ನ ಸಮೇತ ಆರೋಪಿಗಳನ್ನು ಹಿಡಿಯಲಾಗಿದೆ ಎಂದು ಅಧಿಕೃತ ಮೂಲವೊಂದು ಈಟಿವಿ ಭಾರತಗೆ ತಿಳಿಸಿದೆ.
ಅಧಿಕಾರಿಗಳು ಈ ಎರಡು ಟ್ರಕ್‌ಗಳನ್ನು ಡಿಆರ್‌ಐ ಕಚೇರಿಗೆ ತಂದು, ಕೂಲಂಕಷ ಶೋಧಿಸಿದಾಗ 66.4 .ಕೆ.ಜಿ ಕಳ್ಳಸಾಗಣೆ ಮಾಡಿದ ಚಿನ್ನ ಇರುವುದು ತಿಳಿದುಬಂದೆ. ಈ ಎರಡು ಟ್ರಕ್‌ಗಳ ಇಂಧನ ಟ್ಯಾಂಕ್‌ನಲ್ಲಿ ಮರೆಮಾಡಲಾಗಿತ್ತು ಎಂದರು.
ಆಗಸ್ಟ್‌ನಲ್ಲಿ ಡಿಆರ್‌ಐನ ದೆಹಲಿ ವಲಯ ಘಟಕದ ಅಧಿಕಾರಿಗಳು ನವದೆಹಲಿ ರೈಲ್ವೆ ನಿಲ್ದಾಣದಿಂದ 83.6 ಕೆ.ಜಿ. ಕಳ್ಳಸಾಗಣೆ ಮಾಡಿದ ಚಿನ್ನ ವಶಪಡಿಸಿಕೊಂಡಿದ್ದರು. ಈ ಬಳಿಕೆ ಮತ್ತೊಂದು ದೊಡ್ಡ ಜಾಲ ಪತ್ತೆ ಹಚ್ಚಿದ್ದಾರೆ.
ಇಂಡೋ-ಮ್ಯಾನ್ಮಾರ್ ಗಡಿಯಿಂದ ಕಳ್ಳಸಾಗಣೆ ಮಾಡಲಾಗುತ್ತಿದ್ದು, ಕಳ್ಳಸಾಗಾಣಿಕೆದಾರರು ಮಣಿಪುರದ ಮೊರೆಹ್ನಲ್ಲಿರುವ ಅಂತಾರಾಷ್ಟ್ರೀಯ ಭೂ ಗಡಿ ಮೂಲಕ ದೇಶಕ್ಕೆ ನುಸುಳಿದ್ದಾರೆ. ಹಿಂದಿನ ಪ್ರಕರಣದಲ್ಲಿ ಕಳ್ಳಸಾಗಾಣಿಕೆದಾರರು ರೈಲ್ವೆ ಮಾರ್ಗವನ್ನು ವಿದೇಶಿ ಮೂಲದ ಚಿನ್ನ ದೆಹಲಿಗೆ ತರಲು ಬಳಸಿದರು.