ನವದೆಹಲಿ : ಹಿಂದೂ ಮಹಾಸಾಗರದಲ್ಲಿನ (ಐಒಆರ್) ಮಿಲಿಟರಿ ಯುದ್ಧನೌಕೆಗಳು ಮತ್ತು ವ್ಯಾಪಾರ ಚಟುವಟಿಕೆಯ ಮೇಲ್ವಿಚಾರಣೆ ಮಾಡಲು ದೇಶದ ಕಣ್ಗಾವಲು ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಯುವ ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದ 'ಸಿಂಧು ನೇತ್ರ' ಉಪಗ್ರಹ ( ಡಿಆರ್‌ಡಿಒ)ವನ್ನು ಭಾನುವಾರ ಬಾಹ್ಯಾಕಾಶಕ್ಕೆ ಹಾರಿದೆ.
ಇಂದು ಬೆಳಗ್ಗೆ 10:30ಕ್ಕೆ ಆಂಧ್ರದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪಿಎಸ್‌ಎಲ್‌ವಿ-ಸಿ51 ಬಳಸಿ ಈ ಉಪಗ್ರಹ ಉಡಾಯಿಸಲಾಯಿತು.
ಸಿಂಧು ನೇತ್ರ ಉಪಗ್ರಹವನ್ನು ಡಿಆರ್‌ಡಿಒದ ಯುವ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಮತ್ತು ಐಒಆರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯುದ್ಧನೌಕೆಗಳು ಹಾಗೂ ವ್ಯಾಪಾರಿ ಹಡಗುಗಳನ್ನು ಸ್ವಯಂಚಾಲಿತವಾಗಿ ಗುರುತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಉಪಗ್ರಹವು ನೆಲದ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಓದಿ: ಚುನಾವಣಾ ಭದ್ರತೆಗಾಗಿ ತಮಿಳುನಾಡಿಗೆ 1,130 ಬಿಎಸ್‌ಎಫ್ ಯೋಧರ ಆಗಮನ
ಅಗತ್ಯವಿದ್ದರೆ ಉಪಗ್ರಹವು ದಕ್ಷಿಣ ಚೀನಾ ಸಮುದ್ರದಂತಹ ನಿರ್ದಿಷ್ಟ ಪ್ರದೇಶಗಳಲ್ಲಿ, ಕಡಲ್ಗಳ್ಳರು ಇರುವ ಪ್ರದೇಶದಲ್ಲಿ, ಅಡೆನ್ ಕೊಲ್ಲಿ ಮತ್ತು ಆಫ್ರಿಕನ್ ಕರಾವಳಿಯ ಸಮೀಪ ಕಣ್ಗಾವಲು ನಡೆಸಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಚೀನಾ ಜೊತೆಗಿನ ಲಡಾಖ್ ಪ್ರದೇಶ ಮತ್ತು ಪಾಕಿಸ್ತಾನದ ಗಡಿ ಪ್ರದೇಶಗಳಂತಹ ಪ್ರದೇಶಗಳಲ್ಲಿ ಭೂಮಿಯಲ್ಲಿ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ರಾಷ್ಟ್ರಕ್ಕೆ ಸಹಾಯ ಮಾಡುವ ಉಪಗ್ರಹಗಳ ಸರಣಿಯಲ್ಲಿ ಸಿಂಧು ನೇತ್ರ ಮೊದಲನೆಯದು ಎಂದು ಅಧಿಕಾರಿಗಳು ಹೇಳಿದ್ದಾರೆ.
4,000 ಕಿಲೋಮೀಟರ್ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್‌ಎಸಿ) ದ ಉದ್ದಕ್ಕೂ ಚೀನಾದ ಮಿಲಿಟರಿಯ ಚಟುವಟಿಕೆಗಳನ್ನು ಭಾರತೀಯ ಭೂಪ್ರದೇಶದ ಸಮೀಪ ಮತ್ತು ಅದರ ಆಳವಾದ ಪ್ರದೇಶಗಳ ಮೇಲೆ ಸೂಕ್ಷ್ಮವಾಗಿ ಗಮನಿಸಲು ಇದು ಸಹಾಯ ಮಾಡುತ್ತದೆ.