ETV Bharat / bharat

ಡಿಆರ್​ಡಿಒದಿಂದ ಕೊರೊನಾ ಗುರುತಿಸುವ ಸಾಧನ: 75 ನಿಮಿಷಗಳಲ್ಲಿ ಸೋಂಕು ಪತ್ತೆ - ಡಿಆರ್​ಡಿಒ ಕೋವಿಡ್ ಸೋಂಕು ಪತ್ತೆ ಸಾಧಕ

ಕೋವಿಡ್​ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಈಗಾಗಲೇ ಲಸಿಕೆ ಕಂಡು ಹಿಡಿದಿರುವ ಡಿಆರ್​ಡಿಓ ಇದೀಗ ಮತ್ತೊಂದು ಸಾಧಕ ಅಭಿವೃದ್ಧಿ ಪಡಿಸಿದೆ.

DRDO
DRDO
author img

By

Published : May 21, 2021, 8:25 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ಗೆ ಈಗಾಗಲೇ ಮದ್ದು ಕಂಡು ಹಿಡಿದಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ), ಸದ್ಯ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಎಲ್ಲವೂ ಅಂದುಕೊಂಡತೆ ನಡೆದರೆ ಮುಂದಿನ ತಿಂಗಳು ಇದು ರಿಲೀಸ್​ ಆಗಲಿದೆ.

ರೋಗನಿರೋಧಕ ಹಾಗೂ ಕೊರೊನಾ ಸೋಂಕು ಪತ್ತೆ ಮಾಡುವ ಸಾಧನ ಡಿಪಿ ಕೊವಾನ್​(DIPCOVAN) ಅಭಿವೃದ್ಧಿಪಡಿಸಲಾಗ್ತಿದ್ದು, ಮುಂದಿನ ತಿಂಗಳು ಇಂದು ಮಾರುಕಟ್ಟೆಗೆ ರಿಲೀಸ್ ಆಗುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿ ಕೆಲಸಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್​) ಇದಕ್ಕೆ ಅನುಮೋದನೆ ಸಹ ನೀಡಿದೆ.

ವ್ಯಕ್ತಿಗಳ ದೇಹದಲ್ಲಿನ ಸಾರ್ಸ್​ ಕೋವ್​-2 ಪತ್ತೆ ಮಾಡುವ ಸಾಮರ್ಥ್ಯ ಈ ಕಿಟ್​ಗೆ ಇದೆ. ಕೇವಲ 75 ನಿಮಿಷಗಳಲ್ಲಿ ಕೋವಿಡ್​ ಗುಣಲಕ್ಷಣ ಪತ್ತೆ ಹಚ್ಚಬಹುದಾಗಿದೆ. ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 1000ಕ್ಕೂ ಅಧಿಕ ಕೋವಿಡ್​ ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದ್ದು, ಅದರ ಫಲಿತಾಂಶದ ಆಧಾರದ ಮೇಲೆ ಮುಂದಿನ ತಿಂಗಳು ಬಿಡುಗಡೆ ಮಾಡಲು ನಿರ್ಧರಿಸಿದೆ.

ಇದನ್ನೂ ಓದಿ: ಡಿಆರ್​ಡಿಒ ಅಭಿವೃದ್ಧಿಪಡಿಸಿದ ಕೋವಿಡ್ ಔಷಧಕ್ಕೆ ಡಿಸಿಜಿಐ ಅನುಮೋದನೆ

ಕಳೆದ ಒಂದು ವರ್ಷದಿಂದ ಈ ಉತ್ಪನ್ನದ ಮೂರು ಬ್ಯಾಚ್​ನಲ್ಲಿ ಪ್ರಯೋಗ ನಡೆದಿತ್ತು ಎಂದು ಡಿಆರ್​ಡಿಒ ತಿಳಿಸಿದ್ದು, ಇತರ ಕಾಯಿಲೆಗಳೊಂದಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ತಿಳಿಸಿದೆ. ಪ್ರತಿ ಪರೀಕ್ಷೆಯ ರೂ. 75 ಅಗಿದೆ. ಕೋವಿಡ್ ನಿರೋಧಕ ಔಷಧ 2-ಡಿಯೋಕ್ಸಿ-ಡಿ-ಗ್ಲೂಕೋಸ್ ಔಷಧವನ್ನ ಈಗಾಗಲೇ ಡಿಆರ್​ಡಿಒ ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ರಿಲೀಸ್ ಮಾಡಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.