ETV Bharat / bharat

ವರದಕ್ಷಿಣೆ ಕಿರುಕುಳ: ಪತ್ನಿ ಮೇಲೆ ಹಲ್ಲೆ ಮಾಡಿ ತ್ರಿವಳಿ ತಲಾಖ್ ನೀಡಿದ ಪತಿ..! - ಕಾರ್​​ ಸಿಗದಿದ್ದಕ್ಕೆ ತ್ರಿವಳಿ ತಲಾಖ್ ಕೊಟ್ಟ ಪತಿ

ವರದಕ್ಷಿಣೆ ಕಿರುಕುಳ ನೀಡಿ ಮಹಿಳೆ ಮೇಲೆ ಹಲ್ಲೆ - ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಮನೆಯಿಂದ ಹೊರ ಹಾಕಿದ ಪತಿ - ರಾಜ್ಯ ಮಹಿಳಾ ಆಯೋಗ ಸೂಚನೆ ಮೇರೆಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು.

dowry harassment case registered
ವರದಕ್ಷಿಣೆ ಕಿರುಕುಳ: ಪತ್ನಿ ಮೇಲೆ ಮಾಡಿ ತ್ರಿವಳಿ ತಲಾಖ್ ನೀಡಿದ ಪತಿ..!
author img

By

Published : Mar 10, 2023, 10:24 PM IST

Updated : Mar 11, 2023, 7:30 AM IST

ಲಕ್ಸಾರ್(ಉತ್ತರಾಖಂಡ): ಅತ್ತೆಯು ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಮನಬಂದಂತೆ ಥಳಿಸಿ ಮನೆಯಿಂದ ಹೊರಗೆ ಹಾಕಿರುವ ಅಮಾನವೀಯ ಘಟನೆ ನಡೆಯಿದೆ. ಇದೇ ವಿಚಾರಕ್ಕೆ ತನ್ನ ಪತ್ನಿಗೆ ಪತಿಯು ಕೂಡಾ ತ್ರಿವಳಿ ತಲಾಖ್ ನೀಡಿದ್ದಾರೆ. ಸಂತ್ರಸ್ತೆಯು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆರೋಪಿ ಅತ್ತೆ ಹಾಗೂ ಪತಿ ವಿರುದ್ಧ ಪ್ರಕರಣ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ ನೀಡಿದ ಆರೋಪ: ಲಕ್ಸರ್ ಕೊತ್ವಾಲಿ ಪ್ರದೇಶದ ಸುಲ್ತಾನಪುರ ಗ್ರಾಮದ ನಿವಾಸಿ ಮಹಿಳೆಯೊಬ್ಬರು, ವರದಕ್ಷಿಣೆ ಕಿರುಕುಳ ನೀಡಿ ತಮ್ಮ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಹರಿದ್ವಾರ ಜಿಲ್ಲೆಯ ರಾಣಿಪುರ ಕೊಟ್ವಾಲಿ ಪ್ರದೇಶದ ಗಢ್‌ಗಾಂವ್‌ನ ನಿವಾಸಿ ಮೊಹ್ತಾರಾಮ್ ಅವರನ್ನು ಐದು ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಮದುವೆಯಲ್ಲಿ ಮಹಿಳೆ ಸಂಬಂಧಿಕರು ತಮ್ಮ ಸ್ಥಾನಮಾನಕ್ಕಿಂತ ಹೆಚ್ಚಿನ ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು. ಆದರೆ, ಆಕೆಯ ಅತ್ತೆಗೆ ಇದರಿಂದ ತೃಪ್ತರಾಗಿರಲಿಲ್ಲ.

ಒಂದು ಲಕ್ಷ ರೂಪಾಯಿ ಹಾಗೂ ಕಾರ್​ ಕೇಳುತ್ತಿದ್ದರು: ಮದುವೆಯಾದಾಗಿನಿಂದ ತನ್ನ ಪತಿ ಮತ್ತು ಅತ್ತೆ ವರದಕ್ಷಿಣೆಯಾಗಿ ಒಂದು ಲಕ್ಷ ನಗದು ಮತ್ತು ಕಾರ್​ಗೆ ಒತ್ತಾಯಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಬೇಡಿಕೆ ಈಡೇರದ ಕಾರಣ ಮದುವೆಯಾದಾಗಿನಿಂದ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಅಷ್ಟರಲ್ಲಿ ಈ ಮಹಿಳಗೆ ಒಂದು ಗಂಡು ಮಗು ಜನಿಸಿದೆ. ಇದಾದ ನಂತರವೂ ಅತ್ತಿಗೆಯ ವರ್ತನೆ ಮಾತ್ರ ಬದಲಾಗಲಿಲ್ಲ. ಅವರಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದರು.

ಕಾರ್​​ ಸಿಗದಿದ್ದಕ್ಕೆ ತ್ರಿವಳಿ ತಲಾಖ್ ಕೊಟ್ಟ ಪತಿ: 2022ರ ಮಾರ್ಚ್ 25ರಂದು ತನ್ನ ಪತಿ ಮೊಹ್ತಾರಾಮ್, ಮಾವ ಯಾಕೂಬ್, ಅತ್ತೆ ಸಬ್ರೀಮ್, ಸೊಸೆ ಶಬಾನಾ, ನಂದೋಯ್ ಫುರ್ಕನ್ ಮತ್ತು ಅಯೂಬ್ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವರದಕ್ಷಿಣೆ ನೀಡಿದ ನಂತರವೇ ಈ ಮನೆಯಲ್ಲಿ ಇರಬೇಕು ಎಂದು ಎಲ್ಲರೂ ಆಕೆಗೆ ಹೇಳಿದ್ದಾರೆ. ಕುಟುಂಬದೊಂದಿಗೆ ಜಗಳವಾಡುತ್ತಲೇ ಈ ಮಹಿಳೆಯನ್ನು ಮನೆಯಿಂದ ಹೊರ ಹಾಕಲಾಗಿದೆ. ಈ ವೇಳೆ ಆಕೆಯ ಪತಿ ಮೂರು ಬಾರಿ ತಲಾಖ್ ಹೇಳುವ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ.

ಪತಿ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲು: ಸಂತ್ರಸ್ತೆ ಹೇಗೋ ತನ್ನ ತಾಯಿಯ ಮನೆಗೆ ತಲುಪಿ, ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಪೋಷಕರು ಆರೋಪಿದರು. ಈ ಹಿನ್ನೆಲೆಯಲ್ಲಿ ಅವರು, ರಾಜ್ಯ ಮಹಿಳಾ ಆಯೋಗಕ್ಕೆ ಮೊರೆ ಹೋದರು. ಮಹಿಳಾ ಆಯೋಗದ ಆದೇಶದ ಮೇರೆಗೆ ಪೊಲೀಸರು, ಆಕೆಯ ಪತಿ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯ ಮಹಿಳಾ ಆಯೋಗದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಅತ್ಯಾಚಾರ ಎಸಗಿದಾಗ ಮುಚ್ಚಿ ಹಾಕಿಸಿದ್ರು: ತಿಂಗಳಲ್ಲಿ ಎರಡನೇ ಸಲ ಕೃತ್ಯ ಎಸಗಿದ ಬಾಲಕ!?

Last Updated : Mar 11, 2023, 7:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.