ETV Bharat / bharat

ಭಯದಲ್ಲಿ ಮನೆಯಿಂದ ಆಸ್ಪತ್ರೆ, ಆಸ್ಪತ್ರೆಯಿಂದ ಮನೆಗೆ ಓಡಾಡಬೇಡಿ: ಹರ್ಷವರ್ಧನ್ ಮನವಿ​

ಕೊರೊನಾ ಭಯದಲ್ಲಿ ಮನೆಯಿಂದ ಆಸ್ಪತ್ರೆ, ಆಸ್ಪತ್ರೆಯಿಂದ ಮನೆಗೆ ಓಡಾಡಬೇಡಿ ಎಂದು ದೇಶದ ಜನತೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಮನವಿ ಮಾಡಿದ್ದಾರೆ.

Minister Harsh Vardhan
Minister Harsh Vardhan
author img

By

Published : Apr 29, 2021, 3:56 PM IST

ನವದೆಹಲಿ: ಕೊರೊನಾ ವೈರಸ್​ನಿಂದ ಭಯಭೀತರಾಗಿ ಇಲ್ಲಿ, ಅಲ್ಲಿ(ಆಸ್ಪತ್ರೆ, ಮನೆ) ಓಡಾಡಬೇಡಿ. ವೈದ್ಯರೊಂದಿಗೆ ಸಂಪರ್ಕದಲ್ಲಿರುವಾಗ ಹೆಚ್ಚಿನ ರೋಗಿಗಳು ಮನೆಯಲ್ಲೇ ಚೇತರಿಸಿಕೊಳ್ಳಬಹುದು. ನಾನು ಇದನ್ನ ಓರ್ವ ಆರೋಗ್ಯ ಸಚಿವನಾಗಿ ಮಾತ್ರವಲ್ಲ, ವೈದ್ಯನಾಗಿ ಹೇಳುತ್ತಿದ್ದೇನೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ವ್ಯಾಕ್ಸಿನೇಷನ್​ ವಿಷಯದಲ್ಲಿ ರಾಜ್ಯಗಳ ಕಾರ್ಯಕ್ಷಮತೆ ಅನುಗುಣವಾಗಿ ಲಸಿಕೆ ನೀಡುತ್ತಿದ್ದೇವೆ. ಈಗಾಗಲೇ ರಾಜ್ಯಗಳಿಗೆ 16 ಕೋಟಿಗಿಂತಲೂ ಹೆಚ್ಚಿನ ಪ್ರಮಾಣದ ವ್ಯಾಕ್ಸಿನ್​ ನೀಡಿದ್ದೇವೆ. ಈಗಲೂ ರಾಜ್ಯಗಳಲ್ಲಿ 1 ಕೋಟಿಗೂ ಅಧಿಕ ಪ್ರಮಾಣದ ವ್ಯಾಕ್ಸಿನ್ ಉಳಿದುಕೊಂಡಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಮತ್ತಷ್ಟು ಲಕ್ಷ ವ್ಯಾಕ್ಸಿನ್​ಗಳು ರಾಜ್ಯಗಳಿಗೆ ರವಾನೆಯಾಗಲಿವೆ. ಇಲ್ಲಿಯವರೆಗೆ ನಾವು ಯಾವುದೇ ರಾಜ್ಯಕ್ಕೂ ಲಸಿಕೆ ರವಾನೆ ಮಾಡುವುದನ್ನ ವಿಳಂಬ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ವೀಕೆಂಡ್​ ಲಾಕ್​ಡೌನ್​ ಮಂಗಳವಾರ ಮುಂಜಾನೆವರೆಗೆ ವಿಸ್ತರಣೆ

ಮೊದಲಿನಿಂದಲೂ ಆಮ್ಲಜನಕ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿತ್ತು. ಇದೀಗ ಮತ್ತಷ್ಟು ಮೂಲಗಳಿಂದ ಲಭ್ಯವಾಗುತ್ತಿದೆ. ವಿದೇಶ ಹಾಗೂ ಉದ್ಯಮಗಳಿಂದಲೂ ಆಕ್ಸಿಜನ್​ ಟ್ಯಾಂಕರ್​ಗಳು ರವಾನೆಯಾಗುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ಆಮ್ಲಜನಕದ ಬಳಕೆ ಬಹಳ ನಿರ್ಣಾಯಕವಾಗಿದ್ದು, ಯಾವುದೇ ರೀತಿಯ ಗೊಂದಲಗಳಿಗೆ ಒಳಗಾಗಿ ಆಸ್ಪತ್ರೆಗೆ ಧಾವಿಸುವ ಅಗತ್ಯವಿಲ್ಲ. ಆಮ್ಲಜನಕದ ಅಗತ್ಯವಿರುವವರು ಮಾತ್ರ ಅದನ್ನ ಪಡೆದುಕೊಳ್ಳಿ ಎಂದು ಕೇಂದ್ರ ಆರೋಗ್ಯ ಸಚಿವರು ಜನತೆಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.