ಸೂರತ್(ಗುಜರಾತ್): 14 ವರ್ಷದ ಬಾಲಕ ಮೃತಪಟ್ಟಿದ್ದು, ಆತ ಆರು ಜನರಿಗೆ ಪ್ರಾಣದಾನ ಮಾಡಿರುವ ಘಟನೆ ಸೂರತ್‌ನಲ್ಲಿ ನಡೆದಿದೆ. ಅಧಿಕ ರಕ್ತದೊತ್ತಡದ ಕಾರಣ ಮೆದುಳಿನಲ್ಲಿ ರಕ್ತನಾಳಗಳು ಛಿದ್ರಗೊಂಡ ಹಿನ್ನೆಲೆ ಧಾರ್ಮಿಕ್ ಕಾಕಡಿಯಾ ಎಂಬ ಬಾಲಕನನ್ನು ಅಕ್ಟೋಬರ್ 27ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎರಡು ದಿನಗಳ ಚಿಕಿತ್ಸೆ ನಂತರ ಧಾರ್ಮಿಕ್‌ನನ್ನು ಬದುಕಿಸುವುದು ಅಸಾಧ್ಯವೆಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಧಾರ್ಮಿಕ್ ಕುಟುಂಬಸ್ಥರು ಬಾಲಕನ ಅಂಗಾಂಗಳನ್ನು ದಾನ ಮಾಡಿದ್ದಾರೆ. ಇದರಿಂದಾಗಿ ಆರು ಜನರ ಪ್ರಾಣ ಉಳಿದಂತಾಗಿದೆ.
ಬಾಲಕನ ಹೃದಯ, ಎರಡು ಕೈಗಳು, ಶ್ವಾಸಕೋಶಗಳನ್ನು ಮುಂಬೈ, ಚೆನ್ನೈ, ಅಹ್ಮದಾಬಾದ್ಗೆ ರಫ್ತು ಮಾಡಲಾಯಿತು. ಅಲ್ಲಿ ‘ಗ್ರೀನ್ ಕಾರಿಡಾರ್’ ಮೂಲಕ ಸಕಾಲಕ್ಕೆ ಬಾಲಕ ಅಂಗಾಂಗಳನ್ನು ತಲುಪಿಸಲಾಯಿತು. ಧಾರ್ಮಿಕ್ ಹೃದಯವನ್ನು ಅಹ್ಮದಾಬಾದ್‌ನ 11 ನೇ ತರಗತಿ ವಿದ್ಯಾರ್ಥಿಗೆ, ಶ್ವಾಸಕೋಶಗಳನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಂಧ್ರಪ್ರದೇಶ ನಿವಾಸಿಗೆ ನೀಡಲಾಯಿತು.
ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಒಬ್ಬರಿಗೆ ಲಿವರ್ ಮತ್ತು ಕಲೀರಿಯನ್ನು, ಸೂರತ್‌ನಲ್ಲಿ ಇನ್ನೊಬ್ಬರಿಗೆ ಕಣ್ಣುಗಳನ್ನು ಬಾಲಕ ದಾನ ಮಾಡಿದ್ದಾನೆ. 2 ಕೈಗಳನ್ನು ಮುಂಬೈನ ಆಸ್ಪತ್ರೆವೊಂದಕ್ಕೆ ಕಳುಹಿಸಲಾಗಿದ್ದು, ಅಗತ್ಯವಿರುವವರಿಗೆ ಕೈ ಜೋಡಣೆ ಮಾಡಲಾಗುವುದು. 292 ಕಿ.ಮೀ. ದೂರವನ್ನು ಕೇವಲ 105 ನಿಮಿಷಗಳಲ್ಲಿ ತಲುಪಲು ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಬಾಲಕನ ಅಂಗಾಂಗ ದಾನದಿಂದ ಒಟ್ಟು ಆರು ಜನರ ಪ್ರಾಣ ಉಳಿದಂತಾಗಿದೆ.