ETV Bharat / bharat

ದೇಶಕ್ಕಾಗಿ ದೇಣಿಗೆ: ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ - ಕಾಂಗ್ರೆಸ್​ನಿಂದ ನಿಧಿ ಸಂಗ್ರಹ ಅಭಿಯಾನ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ದೇಶಕ್ಕಾಗಿ ದೇಣಿಗೆ' ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.

donate-for-desh-congress-president-mallikarjun-kharge-launches-crowdfunding-campaign
ದೇಶಕ್ಕಾಗಿ ದೇಣಿಗೆ : ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
author img

By ETV Bharat Karnataka Team

Published : Dec 18, 2023, 7:31 PM IST

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೇಶಕ್ಕಾಗಿ ದೇಣಿಗೆ (Donate for Desh) ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲ್ಲಿನ 10 ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ದೇಶವಾಸಿಗಳಿಂದ ನಿಧಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಖಜಾಂಚಿ ಅಜಯ್​ ಮಾಕನ್​, ಕಾಂಗ್ರೆಸ್​ ಮುಖಂಡರಾದ ಕೆ ಸಿ ವೇಣುಗೋಪಾಲ್​, ಜೈರಾಮ್​ ರಮೇಶ್​ ಮುಂತಾದವರು ಉಪಸ್ಥಿತರಿದ್ದರು.

  • ‘Donate for Desh’ अभियान, हाशिए पर रहने वाले समुदायों के अधिकारों को बनाए रखने, असमानताओं को पाटने और गिने-चुने पूंजीवाद लोगों का पक्ष लेने वाली, तानाशाही सरकार के ख़िलाफ़ एक मजबूत विपक्ष बनने की प्रतिबद्धता है।

    ▶️ https://t.co/r4e7oDRJhN पर लॉग ऑन कर, अपना महत्वपूर्ण योगदान… pic.twitter.com/jb2HITzT2J

    — Mallikarjun Kharge (@kharge) December 18, 2023 " class="align-text-top noRightClick twitterSection" data=" ">

ಕಾಂಗ್ರೆಸ್​ನಿಂದ ನಿಧಿ ಸಂಗ್ರಹ ಅಭಿಯಾನ : ದೇಶಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ 1.38 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಬಳಿಕ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಜನರಿಂದ ದೇಣಿಗೆ ನೀಡುವಂತೆ ಕೇಳುತ್ತಿದೆ. ಇದು ಕಾಂಗ್ರೆಸ್​ ಪಕ್ಷಕ್ಕಾಗಿ ಅಲ್ಲ. ಇದು ದೇಶಕ್ಕಾಗಿ ಎಂದು ಹೇಳಿದರು. ದೇಣಿಗೆ ಸಂಗ್ರಹ ಅಭಿಯಾನವು ಹಿಂದುಳಿದ ಸಮುದಾಯಗಳ ಹಕ್ಕುಗಳನ್ನು ಎತ್ತಿ ಹಿಡಿಯುವ, ಸಮಾಜದಲ್ಲಿನ ಅಸಮಾನತೆ ನಿವಾರಿಸುವ, ಆಯ್ದ ಬಂಡವಾಳಶಾಹಿಗಳನ್ನು ಬೆಂಬಲಿಸುವ ನಿರಂಕುಶ ಸರ್ಕಾರವನ್ನು ವಿರೋಧಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಖಜಾಂಚಿ ಅಜಯ್​ ಮಾಕನ್​, ನಮ್ಮ ಈ ನಿಧಿ ಸಂಗ್ರಹ ಅಭಿಯಾನವು ಕಾಂಗ್ರೆಸ್​ನ 138 ವರ್ಷಗಳ ಪ್ರಯಾಣ ಮತ್ತು ಇತಿಹಾಸವನ್ನು ನೆನಪಿಸುತ್ತದೆ. ಈ ಸಂಬಂಧ ನಾವು ನಮ್ಮ ಬೆಂಬಲಿಗರಲ್ಲಿ 138 ರೂ, ಅಥವಾ 1380 ರೂ, 13,800 ಅದಕ್ಕಿಂದ ಹೆಚ್ಚಿನ ಹಣವನ್ನು ದೇಣಿಗೆ ನೀಡುವಂತೆ ಕೋರುತ್ತೇವೆ. ಈ ಮೂಲಕ ಉತ್ತಮ ಭಾರತಕ್ಕಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.

ನಿಧಿ ಸಂಗ್ರಹ ಮಾಡಲು ಎರಡು ವಿಧಾನಗಳನ್ನು ಅಳವಡಿಸಲಾಗಿದೆ. ಒಂದು ಆನ್​ಲೈನ್​ ಪೋರ್ಟಲ್​ donateinc.in ಅಲ್ಲಿ ದೇಣಿಗೆ ನೀಡಬಹುದು. ಇನ್ನೊಂದು ಕಾಂಗ್ರೆಸ್​ನ ಅಧಿಕೃತ ವೆಬ್​ಸೈಟ್​ www.inc.in.ನಲ್ಲಿ ದೇಣಿಗೆ ನೀಡಬಹುದು. ನಾವು ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಡಿಸಿಸಿ ಅಧ್ಯಕ್ಷರು, ಪಿಸಿಸಿ ಅಧ್ಯಕ್ಷರು ಮತ್ತು ಎಐಸಿಸಿ ಪದಾಧಿಕಾರಿಗಳನ್ನು ಈ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೋರುತ್ತೇವೆ ಎಂದರು.

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್​ ಮಾತನಾಡಿ, 1,380 ಮತ್ತು 13,800 ರೂ.ಗೆ ದೇಣಿಗೆ ನೀಡುವ ಪಕ್ಷದ ಹಿತೈಷಿಗಳು, ಕಾರ್ಯಕರ್ತರು ಹಾಗೂ ಸಂಭಾವ್ಯ ದಾನಿಗಳನ್ನು ಗುರುತಿಸಲು ಪಕ್ಷದ ರಾಜ್ಯಾಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

2024ರ ಏಪ್ರಿಲ್​ - ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ದೇಶಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾಗಿದೆ. ಈ ಕಾರ್ಯಕ್ರಮವು ಮಹಾತ್ಮ ಗಾಂಧಿಯವರು ಅಸಹಕಾರ ಚಳವಳಿ ಸಂಬಂಧ ಮಾಡಿದ ತಿಲಕ್​ ಸ್ವರಾಜ್​ ನಿಧಿ ಸಂಗ್ರಹ ಕಾರ್ಯಕ್ರಮದಿಂದ ಪ್ರೇರಿತವಾಗಿದೆ ಎಂದು ಕಾಂಗ್ರೆಸ್​ ತಿಳಿಸಿದೆ.

ಇದನ್ನೂ ಓದಿ :ಪೊಲೀಸ್​ ಭದ್ರತೆ ನಿರಾಕರಿಸಿ ಜನನಿಬಿಡ ರಸ್ತೆಗಳಲ್ಲಿ ಓಡಾಡಿದ ಕೇರಳ ರಾಜ್ಯಪಾಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.