ETV Bharat / bharat

ಒಡಿಶಾದ ಚಿಲಿಕಾ ಸರೋವರದಲ್ಲಿ ಡಾಲ್ಫಿನ್ ಗಣತಿ ಆರಂಭ - Dolphin census at Chilika lake

ಕಳೆದ ವರ್ಷ 188 ಡಾಲ್ಫಿನ್​ಗಳಿದ್ದ ಒಡಿಶಾದ ಚಿಲಿಕಾ ಸರೋವರದಲ್ಲಿ ಅವುಗಳ ಗಣತಿ ಆರಂಭವಾಗಿದ್ದು, 16 ತಂಡಗಳು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿವೆ.

Dolphin census begins at Chilika lake of Odisha
ಒಡಿಶಾದ ಚಿಲಿಕಾ ಸರೋವರದಲ್ಲಿ ಡಾಲ್ಫಿನ್ ಗಣತಿ ಆರಂಭ
author img

By

Published : Jan 9, 2022, 12:53 PM IST

ಖೋರ್ಧಾ (ಒಡಿಶಾ): ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿರುವ ಚಿಲಿಕಾ ಸರೋವರದಲ್ಲಿ ಇಂದು ಬೆಳಗ್ಗೆಯಿಂದ ಡಾಲ್ಫಿನ್ ಗಣತಿ ಶುರುವಾಗಿದೆ. ಈ ಎಣಿಕೆಯು ಬಲುಗಾಂವ್ ವನ್ಯಜೀವಿ ವಿಭಾಗ ಮತ್ತು ಚಿಲಿಕಾದ ಬಲುಗಾಂವ್ ಶ್ರೇಣಿಯಲ್ಲಿ ನಡೆಯುತ್ತದೆ.

ಈ 2 ಶ್ರೇಣಿಗಳನ್ನು 3 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡದಲ್ಲಿ 4 ಸದಸ್ಯರಂತೆ ಒಟ್ಟು 16 ತಂಡಗಳು ಡಾಲ್ಫಿನ್ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿವೆ. ಈ ತಂಡಗಳಲ್ಲಿ ಸಿಡಿಎ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಡಾಲ್ಫಿನ್ ತಜ್ಞರು, ಸ್ವಯಂಸೇವಕರು ಮತ್ತು ಪರಿಸರವಾದಿಗಳು ಸೇರಿದಂತೆ ಅನೇಕ ಬೋಟರ್‌ಗಳು ಇದ್ದಾರೆ. ಜಿಪಿಎಸ್, ಬೈನಾಕ್ಯುಲರ್, ರೇಂಜ್ ಫೈಂಡರ್ ಮೂಲಕ ಎಣಿಕೆ ನಡೆಸಲಾಗುತ್ತದೆ.

ಇದನ್ನೂ ಓದಿ: ಭಾರತದ ಮೊದಲ ಪುಂಗನೂರು ತಳಿಯ ಐವಿಎಫ್ ಕರು ಜನನ

ಕಳೆದ ವರ್ಷ ಚಿಲಿಕಾ ಸರೋವರದಲ್ಲಿ 188 ಡಾಲ್ಫಿನ್​ಗಳು ಇರುವುದು ತಿಳಿದುಬಂದಿತ್ತು. ಅಲ್ಲದೇ ಒಡಿಶಾ ರಾಜ್ಯದಲ್ಲಿ ಒಟ್ಟು 544 ಡಾಲ್ಫಿನ್​ಗಳಿದ್ದವು. ಎಲ್ಲಾ ಎಣಿಕೆ ತಂಡಗಳು ತಮ್ಮ ವರದಿಗಳನ್ನು ಸಲ್ಲಿಸಿದ ನಂತರ ಈ ವರ್ಷ ಚಿಲಿಕಾದಲ್ಲಿ ಡಾಲ್ಫಿನ್‌ಗಳ ಸಂಖ್ಯೆ ಎಷ್ಟು ಎಂಬುದು ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.