ಗುವಾಹಟಿ(ಅಸ್ಸೋಂ): ಕೊರೊನಾ ಸೋಂಕಿತನೋರ್ವ ಮೃತಪಟ್ಟಿದ್ದು, ಸಂಬಂಧಿಕರು ವೈದ್ಯನ ನಿರ್ಲಕ್ಷ್ಯವೆಂದು ಆರೋಪಿಸಿ ಮನಬಂದಂತೆ ಥಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಅಸ್ಸೋಂನ ಹೊಜೈ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಕೊರೊನಾದಿಂದ ತೀವ್ರ ಅಸ್ವಸ್ಥರಾಗಿದ್ದ ವ್ಯಕ್ತಿಯೊಬ್ಬರು ಉದಾಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಾ ಮಂಗಳವಾರ ನಿಧನರಾಗಿದ್ದರು. ವಿಷಯ ತಿಳಿದ ಮೃತನ ಸಂಬಂಧಿಕರು ಆಸ್ಪತ್ರೆಗೆ ಬಂದು ವೈದ್ಯ ಸೂಯೆಜ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ 24 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಗಿಯು ಬೆಳಗ್ಗೆಯಿಂದ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಾಗ ಚಿಕಿತ್ಸೆ ನೀಡಲು ಹೋಗಿದ್ದೆ. ಅಷ್ಟೊತ್ತಿಗಾಗಲೇ ರೋಗಿ ಮೃತಪಟ್ಟಿದ್ದ ಎಂದು ಹಲ್ಲೆಗೊಳಗಾದ ಡಾ. ಸೂಯೆಜ್ ಕುಮಾರ್ ತಿಳಿಸಿದ್ದಾರೆ.
ಅನಾಗರಿಕ ಕೃತ್ಯ:
ಘಟನೆ ಕುರಿತು ಮುಖ್ಯಮಂತ್ರಿ ಹಿಮಂತ ಬಿಶ್ವಾ ಶರ್ಮಾ ಪ್ರತಿಕ್ರಿಯಿಸಿದ್ದು, ವೈದ್ಯರ ಮೇಲಿನ ದಾಳಿಯನ್ನು ಅನಾಗರಿಕ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವೈದ್ಯರು ಮತ್ತು ಫ್ರಂಟ್ಲೈನ್ ವಾರಿಯರ್ಸ್ ಮೇಲಿನ ಇಂತಹ ದಾಳಿಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.
-
Such barbaric attacks on our frontline workers won't be tolerated by our administration. @gpsinghassam @assampolice Ensure that the culprits brought to justice. https://t.co/HwQfbWwYmn
— Himanta Biswa Sarma (@himantabiswa) June 1, 2021 " class="align-text-top noRightClick twitterSection" data="
">Such barbaric attacks on our frontline workers won't be tolerated by our administration. @gpsinghassam @assampolice Ensure that the culprits brought to justice. https://t.co/HwQfbWwYmn
— Himanta Biswa Sarma (@himantabiswa) June 1, 2021Such barbaric attacks on our frontline workers won't be tolerated by our administration. @gpsinghassam @assampolice Ensure that the culprits brought to justice. https://t.co/HwQfbWwYmn
— Himanta Biswa Sarma (@himantabiswa) June 1, 2021
ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಅಡಿಯಲ್ಲಿ ವೈದ್ಯರ ಮೇಲಿನ ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಏಮ್ಸ್ ವೈದ್ಯರು ಒತ್ತಾಯಿಸಿದರು.