ETV Bharat / bharat

ಪ್ರಧಾನಿ ಕ್ಷಮೆಯಾಚಿಸೋದು ಬೇಡ, ವಿದೇಶದಲ್ಲಿ ಅವರ ಪ್ರತಿಷ್ಠೆ ಹಾಳಾಗೋದು ಬೇಡ : ರಾಕೇಶ್ ಟಿಕಾಯತ್

author img

By

Published : Dec 27, 2021, 7:16 PM IST

Rakesh Tikait statement on PM Modi : ಪ್ರಧಾನಿ ಕ್ಷಮೆ ಯಾಚಿಸುವುದು ನಮಗೆ ಇಷ್ಟವಿಲ್ಲ. ವಿದೇಶದಲ್ಲಿ ಅವರ ಹೆಸರು ಕೆಡಿಸಲು ನಾವು ಬಯಸುವುದಿಲ್ಲ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ರೈತರ ಒಪ್ಪಿಗೆಯಿಲ್ಲದೆ ಅದನ್ನು ಮಾಡಲಾಗುವುದಿಲ್ಲ..

Rakesh Tikait on PM Modi apologise
ರಾಕೇಶ್ ಟಿಕಾಯತ್

ನವದೆಹಲಿ : 'ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಲಿ ಎಂದು ನಾನು ಬಯಸಲ್ಲ. ಅವರಿಂದ ಕ್ಷಮೆಯಾಚಿಸಿ ವಿದೇಶದಲ್ಲಿ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಬಯಸುವುದಿಲ್ಲ' ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ವ್ಯಂಗ್ಯವಾಡಿದ್ದಾರೆ.

ರೈತರ ಪ್ರತಿಭಟನೆಗಳಿಗೆ ಮಣಿದು ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಕೆಲ ದಿನಗಳ ಬಳಿಕ ರಾಕೇಶ್ ಟಿಕಾಯತ್ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ರೈತರ ಒಪ್ಪಿಗೆಯಿಲ್ಲದೆ ಅದನ್ನು ಮಾಡಲಾಗುವುದಿಲ್ಲ. ನಾವು ಪ್ರಾಮಾಣಿಕವಾಗಿ ಹೊಲಗಳಲ್ಲಿ ಬೆಳೆಗಳನ್ನು ಬೆಳೆಸಿದ್ದೇವೆ. ಆದರೆ, ದೆಹಲಿ ನಮ್ಮ ಕಡೆ ಗಮನ ಹರಿಸಲಿಲ್ಲ. ನಮ್ಮ ಬೇಡಿಕೆಗಳಿಗೆ ಗಮನ ಕೊಡಿ ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

  • हम नहीं चाहते देश का प्रधानमंत्री माफी मांगे। हम उनकी प्रतिष्ठा विदेश में खराब नहीं करना चाहते। कोई फ़ैसला होगा तो बगैर किसानों की मर्ज़ी के भारत में फ़ैसला नहीं होगा। हमने ईमानदारी से खेत में हल चलाया लेकिन दिल्ली की कलम ने भाव देने में बेईमानी की ।#FarmersProtest

    — Rakesh Tikait (@RakeshTikaitBKU) December 26, 2021 " class="align-text-top noRightClick twitterSection" data=" ">

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೂರು ರದ್ದಾದ ಕೃಷಿ ಕಾನೂನುಗಳ ಕುರಿತ ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ ಮತ್ತು ಪ್ರಧಾನಿಯನ್ನು ಅವಮಾನಿಸುತ್ತದೆ. ಒಂದು ವೇಳೆ ಕೇಂದ್ರವು ಕೃಷಿ ಕಾನೂನುಗಳನ್ನು ಪುನಃ ತಂದರೆ ನಾವು ನಮ್ಮ ಆಂದೋಲನವನ್ನು ಪುನಾರಂಭಿಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ: 'ಕೃಷಿ ಸುಧಾರಣೆಯಲ್ಲಿ ಹಿಂದೆ ಸರಿದಿರಬಹುದು, ಮತ್ತೆ ಮುನ್ನುಗ್ಗುತ್ತೇವೆ': ನರೇಂದ್ರ ಸಿಂಗ್ ತೋಮರ್

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತೋಮರ್, 'ನಾವು ಕೃಷಿ ಕಾನೂನುಗಳನ್ನು ತಂದಿದ್ದೆವು, ಕೆಲವರು ಅದನ್ನು ಇಷ್ಟಪಡಲಿಲ್ಲ. ಆದರೆ, ಸರ್ಕಾರವೇನು ನಿರಾಶೆಗೊಂಡಿಲ್ಲ, ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ ಮತ್ತು ನಾವು ಮತ್ತೆ ಮುಂದುವರಿಯುತ್ತೇವೆ.

ಏಕೆಂದರೆ, ರೈತರು ಭಾರತದ ಬೆನ್ನೆಲುಬು. ಅವರಿಂದ ದೇಶವು ಬಲಗೊಳ್ಳುತ್ತದೆ' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾದ ಬಳಿಕ, 'ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಕೃಷಿ ಕಾನೂನುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ' ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಮರು ಜಾರಿ ಮಾಡುವುದಿಲ್ಲ: ಕೇಂದ್ರ ಕೃಷಿ ಸಚಿವ ತೋಮರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.