ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಇಂದು 2021-22ರ ಮಧ್ಯಂತರ ಬಜೆಟ್ ಮಂಡನೆ ಮಾಡಲಾಯಿತು. ಇದಕ್ಕೆ ಪ್ರತಿಪಕ್ಷ ಡಿಎಂಕೆ ವಿರೋಧಿಸಿದ್ದು, ಬಜೆಟ್ ಮಂಡನೆ ಬಹಿಷ್ಕರಿಸಿ ಸದನದಿಂದ ಹೊರನಡೆದಿದೆ.
ಡಿಸಿಎಂ ಒ ಪನ್ನೀರ್ಸೆಲ್ವಂ ಅವರಿಗೆ ಸ್ಪೀಕರ್ ಮಧ್ಯಂತರ ಬಜೆಟ್ ಮಂಡನೆ ಮಾಡಲು ಅವಕಾಶ ನೀಡುತ್ತಿದ್ದಂತೆ, ಇದಕ್ಕೆ ಡಿಎಂಕೆ ಆಕ್ಷೇಪ ವ್ಯಕ್ತಪಡಿಸಿತು. ಡಿಎಂಕೆ ಉಪನಾಯಕ ದುರೈ ಮುರುಗನ್, ಈ ಬಗ್ಗೆ ಪಕ್ಷದ ನಿಲುವುಗಳನ್ನ ಮಂಡಿಸಲು ಅವಕಾಶ ನೀಡುವಂತೆ ಕೋರಿದರು. ಆದರೆ ಇದಕ್ಕೆ ಸ್ಪೀಕರ್ ಅವಕಾಶ ನೀಡಲಿಲ್ಲ, ಆಗ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ಅತ್ತ ಡಿಸಿಎಂ ಪನ್ನೀರ್ಸೆಲ್ವಂ ಬಜೆಟ್ ಮಂಡನೆ ಶುರು ಮಾಡುತ್ತಿದ್ದಂತೆ ಡಿಎಂಕೆ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಸದನವನ್ನ ಬಹಿಷ್ಕರಿಸಿ ಹೊರ ನಡೆದರು.
ಇದನ್ನೂ ಓದಿ: ಭಾರತದ ಆರೋಗ್ಯ ಕ್ಷೇತ್ರ ಅಗ್ನಿ ಪರೀಕ್ಷೆ ಗೆದ್ದಿದೆ: ಪಿಎಂ ಮೋದಿ