ಚೆನ್ನೈ (ತಮಿಳುನಾಡು): ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಡಿಎಂಕೆ ಪಕ್ಷದೊಂದಿಗೆ ನಡೆಸಿದ ಮೊದಲ ಸುತ್ತಿನ ಮಾತುಕತೆ ವಿಫಲಗೊಂಡಿದೆ ಎನ್ನಲಾಗುತ್ತಿದೆ.
ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಡಿಎಂಕೆ ಜೊತೆ ಮಾತುಕತೆ ನಡೆಸಿತ್ತು. ಈ ವೇಳೆ, ಎಡ ಪಕ್ಷಗಳು ಎರಡು ಅಂಕಿ ಸ್ಥಾನಗಳನ್ನು ನೀಡುವಂತೆ ಆಗ್ರಹಿಸಿದ್ದವು. ಆದರೆ, ಡಿಎಂಕೆ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಮೈತ್ರಿಕೂಟದಲ್ಲಿ ಎರಡನೇ ಪ್ರಮುಖ ಪಾಲುದಾರರಾಗಿರುವ ಕಾಂಗ್ರೆಸ್ ಕಳೆದ ಬಾರಿ 40 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಆದರೆ, ಈ ಬಾರಿ 35 ಸ್ಥಾನಗಳಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿದೆ. ಆದರೆ, ಡಿಎಂಕೆ ಕಾಂಗ್ರೆಸ್ಗೆ 25 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ನೀಡಲು ಹಿಂಜರಿಯುತ್ತದೆ ಎನ್ನಲಾಗುತ್ತಿದೆ.
ಆಡಳಿತಾರೂಢ ಎಐಎಡಿಎಂಕೆ ಮೈತ್ರಿಕೂಟದಲ್ಲೂ ಇದೇ ರೀತಿಯ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಪಟ್ಟಾಲಿ ಮಕ್ಕಲ್ ಕಚ್ಚಿ (ಪಿಎಂಕೆ) ಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಎಐಎಡಿಎಂಕೆ ಬಿಜೆಪಿ ಮತ್ತು ವಿಜಯಕಾಂತ್ ಅವರ ಡಿಎಂಡಿಕೆ ಜೊತೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಕಷ್ಟಕರವಾದ ಪರಿಸ್ಥಿತಿ ಇದೆ.
ಓದಿ: ಸರ್ಕಾರದ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯವನ್ನು "ದೇಶದ್ರೋಹ" ಎಂದು ಕರೆಯಲಾಗುವುದಿಲ್ಲ - ಸುಪ್ರೀಂ
ಮೂಲಗಳ ಪ್ರಕಾರ, ಕೇಂದ್ರದಲ್ಲಿನ ಆಡಳಿತ ಪಕ್ಷವು 30 ಕ್ಕೂ ಹೆಚ್ಚು ಸ್ಥಾನಗಳನ್ನು ಕೋರಿದೆ. ಆದರೆ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರಾ ಕಳಗಂ ಅವರು ಈ ಹಿಂದೆ ಪಿಎಂಕೆಗೆ ಹಂಚಿಕೆ ಮಾಡಿದ್ದ 23 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಲು ಸಿದ್ಧರಿಲ್ಲ. ಆದರೆ, ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷ 20 ಕ್ಕಿಂತ ಹೆಚ್ಚಿನ ಸಂಖ್ಯೆಗಳನ್ನು ತಳ್ಳುತ್ತಿದೆ. ಆದರೆ ಎಐಎಡಿಎಂಕೆ ಅವರ ಸಂಖ್ಯೆಯನ್ನು ಕೇವಲ 15 ಕ್ಕೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದೆ.
ತಮಿಳುನಾಡು ಚುನಾವಣಾ ಅಖಾಡ ದಿನದಿಂದ ದಿನಕ್ಕೆ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ತಮ್ಮ ಪಾಲುದಾರ ಪಕ್ಷಗಳಿಗೆ ಅಲ್ಪ ಸಂಖ್ಯೆಯ ಸ್ಥಾನಗಳನ್ನು ನೀಡಲು ನಿರ್ಧರಿಸಿವೆ ಎನ್ನಲಾಗುತ್ತಿದೆ.