ETV Bharat / bharat

ದಿವ್ಯಾಂಗ್​ ನವರಾತ್ರಿ ಮಹೋತ್ಸವ: ಅಹಮದಾಬಾದ್‌ನಲ್ಲಿ 700 ಕ್ಕೂ ಹೆಚ್ಚು ವಿಶೇಷಚೇತನರಿಂದ ವ್ಹೀಲ್ ​ಚೇರ್​ನಲ್ಲೇ ಗರ್ಬಾ ನೃತ್ಯ - ಗುಜರಾತ್

ಗುಜರಾತ್​ನ ಅಹಮದಾಬಾದ್​ನಲ್ಲಿ ವಿಶೇಷಚೇತನರಿಗಾಗಿ 6 ವರ್ಷದಿಂದ ಗರ್ಬಾ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದ್ದು, ಈ ಬಾರಿ 700ಕ್ಕೂ ಹೆಚ್ಚು ವಿಶೇಷಚೇತನರು ಪಾಲ್ಗೊಂಡರು.

ಗರ್ಬಾ ನೃತ್ಯ
ಗರ್ಬಾ ನೃತ್ಯ
author img

By ANI

Published : Oct 22, 2023, 11:26 AM IST

ಅಹಮದಾಬಾದ್ (ಗುಜರಾತ್)​: ದೇಶಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಅಹಮದಾಬಾದ್​ನಲ್ಲಿ ವಿಶೇಷಚೇತನರಿಗಾಗಿ ದಿವ್ಯಾಂಗ್ ನವರಾತ್ರಿ ಮಹೋತ್ಸವವು ಗರ್ಬಾ ಫೆಸ್ಟ್​ನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಆರು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಸಂಪ್ರದಾಯವಾಗಿದೆ. ಕಾರ್ಯಕ್ರಮದಲ್ಲಿ 700ಕ್ಕೂ ಹೆಚ್ಚು ವಿಶೇಷಚೇತನರು, ಹಿರಿಯರು, ಯುವಕರು ದೇವಿ ಅಂಬಾಗೆ ಪೂಜೆ ಸಲ್ಲಿಸಿ ಗರ್ಬಾ ನೃತ್ಯ ಮಾಡಿ ಸಂಭ್ರಮಿಸಿದರು.

ದಿವ್ಯಾಂಗ್ ಗರ್ಬಾ ಮಹೋತ್ಸವದ ಆಯೋಜಕರಾದ ವಿಪುಲ್ಭಾಯಿ ಈ ಕುರಿತು ಮಾತನಾಡಿದ್ದಾರೆ. ನಾನು ಸುಮಾರು ಒಂದು ದಶಕದ ಹಿಂದೆ ಮೈದಾನದಲ್ಲಿ ನನ್ನ ಸ್ನೇಹಿತರೊಂದಿಗೆ ಗರ್ಬಾ ಆಡುತ್ತಿದ್ದಾಗ ಅಂಗವಿಕಲ ವ್ಯಕ್ತಿಯನ್ನು ಆ ಸ್ಥಳದಲ್ಲಿ ನೋಡಿದೆ. ನಾನು ಅವರನ್ನು ನೋಡಿ ಭಾವುಕನಾದೆ ಮತ್ತು ಅಂಗವಿಕಲರಿಗಾಗಿ ಗರ್ಬಾವನ್ನು ಆಯೋಜಿಸಲು ಆ ದಿನವೇ ನಿರ್ಧರಿಸಿದೆ. ಇದೀಗ ಆ ಹಬ್ಬ ನಡೆದುಕೊಂಡು ಬಂದು 6 ವರ್ಷಗಳು ತುಂಬಿವೆ. ಈ ಬಾರಿ ಗರ್ಬಾದಲ್ಲಿ ಸಂಭ್ರಮಿಸಲು ಗುಜರಾತ್ ಮತ್ತು ಸುತ್ತಮುತ್ತಲಿನ ಸುಮಾರು 700 ವಿಶೇಷಚೇತನರು ಇಲ್ಲಿ ಸೇರಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಶೇಷ ಚೇತನರೊಬ್ಬರು ಮಾತನಾಡಿ ವಿಶೇಷ ಗರ್ಬಾದ ಕುರಿತು ಸಂತಸ ವ್ಯಕ್ತಪಡಿಸಿದರು. ಈ ಗರ್ಬಾವನ್ನು ವಿಪುಲ್ಭಾಯಿ ಅವರು 6 ವರ್ಷದಿಂದ ಆಯೋಜಿಸುತ್ತಿದ್ದಾರೆ. ನಾವು ಇಲ್ಲಿಗೆ ಬಂದು ಹಬ್ಬವನ್ನು ಆನಂದಿಸುತ್ತಾ, ಸಂಭ್ರಮಿಸುತ್ತಿದ್ದೇವೆ. ಪ್ರತಿ ವರ್ಷ ಗರ್ಬಾವನ್ನು ಆಚರಿಸುತ್ತೇವೆ. ನಾವು ಅನೇಕ ಹೊಸ ಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದೇವೆ. ನಾವು ಗಾಲಿಕುರ್ಚಿಯ ಮೇಲೆ ಕುಳಿತಿರುವುದರಿಂದ ಗಾರ್ಬಾವನ್ನು ನೃತ್ಯವನ್ನು ಆಡಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ, ಈ ಕಾರ್ಯಕ್ರಮದ ಆಯೋಜಕರು ಆ ರೀತಿ ಯೋಚಿಸದೆ, ನಮ್ಮ ನಡುವೆ ಒಬ್ಬರಾಗಿ ಕಾರ್ಯಕ್ರಮವನ್ನು ನಡೆಸುತ್ತಾರೆ. ಹಬ್ಬಕ್ಕೆ ಎಲ್ಲರಂತೆ ನಾವು ಕೂಡ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುತ್ತೇವೆ ಮತ್ತು ಎಲ್ಲರನ್ನೂ ಈ ದಿನ ಭೇಟಿಯಾಗುತ್ತೇವೆ ಎಂದು ತಿಳಿಸಿದರು.

ನವರಾತ್ರಿ ವಿಶೇಷವೇನು?: ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಪೂಜಾ-ಪುರಸ್ಕಾರ, ಸಂಭ್ರಮದಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದಲ್ಲಿ, ಭಕ್ತರು ಮಾತೆ ದುರ್ಗೆಯ ಒಂಬತ್ತು ಅವತಾರಗಳನ್ನು ಆಕೆಯ ಆಶೀರ್ವಾದವನ್ನು ಪಡೆಯಲು ಪೂಜಿಸುತ್ತಾರೆ. ನವರಾತ್ರಿಯ ಪ್ರತಿ ದಿನವೂ ಒಂದೊಂದು ದೇವಿಯ ಅವತಾರವನ್ನು ಭಯ-ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಜನರು ಉಪವಾಸ, ವ್ರತ ಆಚರಿಸುತ್ತಾರೆ. ಪ್ರತಿ ದೇವತೆಗೆ ಸಮರ್ಪಿತವಾದ ಶ್ಲೋಕಗಳನ್ನು ಪಠಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ.

ಇದನ್ನೂ ಓದಿ: ಗರ್ಬಾ ನೃತ್ಯ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಬಾಲಕ ಸಾವು.. ಸಂಭ್ರಮದ ಮಧ್ಯೆ ಮಡುಗಟ್ಟಿದ ಶೋಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.