ನವದೆಹಲಿ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆ ವಲಯಕ್ಕೆ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ, ಮೇಲ್ವಿಚಾರಣಾ ಸಿಬ್ಬಂದಿಯೂ ಕ್ಲಾಸ್ 1 ಹುದ್ದೆಗಳಿಗೆ ನೇರ ಬಡ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ನಿಯಮದಡಿಯಲ್ಲಿ, ರೈಲ್ವೆ ಗ್ರೇಡ್-6 ನೌಕರರು ಸಹ ನೇರ ಬಡ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ 80,000 ಮೇಲ್ವಿಚಾರಕರು ಇದ್ದಾರೆ. ಕಳೆದ 16 ವರ್ಷಗಳಿಂದ (2006 ರಿಂದ) ಮೇಲ್ವಿಚಾರಣಾ ಸಿಬ್ಬಂದಿಯನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಇತ್ತು. ಹೊಸ ನಿಯಮದಂತೆ ಶೇ 50 ರಷ್ಟು ಉದ್ಯೋಗಿಗಳಿಗೆ 7 ನೇ ಹಂತದಿಂದ 8ನೇ ಹಂತಕ್ಕೆ ಬಡ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ. 8ನೇ ಹಂತದಿಂದ 9ನೇ ಹಂತಕ್ಕೆ 4 ವರ್ಷ ಕಾರ್ಯನಿರ್ವಹಿಸಿದ 50 ಜನರಿಗೆ ಬಡ್ತಿ ಒದಗಿಸಲಾಗಿದೆ ಎಂದು ತಿಳಿಸಿದರು. ಇದರಿಂದಾಗಿ 40,000 ಮೇಲ್ವಿಚಾರಕರು ನೇರ ಪ್ರಯೋಜನ ಪಡೆಯುತ್ತಾರೆ. ಎಲ್ಲರೂ ತಿಂಗಳಿಗೆ ಸರಾಸರಿ 2,500-4,000 ರೂ.ಗಳ ಹೆಚ್ಚುವರಿ ವೇತನ ಪಡೆಯುತ್ತಾರೆ ಎಂದು ಸಚಿವರು ತಿಳಿಸಿದರು.
ಬಡ್ತಿಯ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳನ್ನು ಗುರುತಿಸಲು ರೈಲ್ವೇ ಇಲಾಖೆ ಪ್ರಾರಂಭಿಸಿದೆ. ಸಿವಿಲ್ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಸ್ & ಟಿ ಟ್ರಾಫಿಕ್, ಕೆಮಿಕಲ್ ಮತ್ತು ಮೆಟಲರ್ಜಿಕಲ್, ಸ್ಟೋರ್ಸ್ ಮತ್ತು ವಾಣಿಜ್ಯ ಇಲಾಖೆಗಳ ಮೇಲ್ವಿಚಾರಕರಿಗೆ ಇದರ ಲಾಭ ಸಿಗಲಿದೆ.
ಇದನ್ನೂ ಓದಿ: ಮೈಸೂರಿಗೆ ತಲುಪಿದ ವಂದೇ ಭಾರತ್ ಎಕ್ಸ್ಪ್ರೆಸ್: ಜರ್ನಿ ಚೆನ್ನಾಗಿತ್ತು ಎಂದ ಪ್ರಯಾಣಿಕರು