ನವದೆಹಲಿ: ಭಯೋತ್ಪಾದನೆ, ಆತಂಕವಾದಗಳ ವಿರುದ್ಧ ಶ್ರಮಿಸುವ ಸಂಸ್ಥೆಯಾದ ಎನ್ಐಎಗೆ ಹೊಸ ಬಾಸ್ ನೇಮಕ ಮಾಡಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ದಳದ ನೂತನ ಮಹಾನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ಗುರುವಾರ ನೇಮಿಸಿ ಆದೇಶಿಸಿದೆ.
-
The Government of India appoints IPS Dinkar Gupta as Director General, National Investigation Agency pic.twitter.com/42jtktGG3R
— ANI (@ANI) June 23, 2022 " class="align-text-top noRightClick twitterSection" data="
">The Government of India appoints IPS Dinkar Gupta as Director General, National Investigation Agency pic.twitter.com/42jtktGG3R
— ANI (@ANI) June 23, 2022The Government of India appoints IPS Dinkar Gupta as Director General, National Investigation Agency pic.twitter.com/42jtktGG3R
— ANI (@ANI) June 23, 2022
ಗುಪ್ತಾ ಅವರು ಪಂಜಾಬ್ ಕೇಡರ್‌ನ 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಇವರನ್ನು ಮಾರ್ಚ್ 31, 2024 ರವರೆಗೆ ಎನ್ಐಎ ಮಹಾನಿರ್ದೇಶಕರನ್ನಾಗಿ ನೇಮಿಸಿದೆ ಎಂದು ಸಿಬ್ಬಂದಿ ಸಚಿವಾಲಯ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಮತ್ತೊಂದು ಬೆಳವಣಿಗೆಯಲ್ಲಿ, ಗುಪ್ತಚರ ಇಲಾಖೆ ವಿಶೇಷ ನಿರ್ದೇಶಕರಾಗಿದ್ದ ಸ್ವಾಗತ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಯನ್ನಾಗಿ(ಆಂತರಿಕ ಭದ್ರತೆ) ನೇಮಕ ಮಾಡಲಾಗಿದೆ. ಇವರು 1987 ರ ಬ್ಯಾಚ್‌ನ ಛತ್ತೀಸ್‌ಗಢ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ನಿವೃತ್ತಿ ಅವಧಿ ನವೆಂಬರ್ 30, 2024 ರವರೆಗೆ ಇರಲಿದೆ.
ಇದನ್ನೂ ಓದಿ: ಯುನಿಟೆಕ್ ಪ್ರಕರಣ: 257 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ