ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ವಿರುದ್ಧ ವಾಗ್ದಾಳಿ ನಡೆಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಮಹಿಳೆಯರ ಮೇಲೆ ತಾಲಿಬಾನ್ ಹಾಗೂ ಆರ್‌ಎಸ್‌ಎಸ್ ಒಂದೇ ರೀತಿಯ ವಿಚಾರಧಾರೆ ಹೊಂದಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
"ಮಹಿಳೆಯರು ಮಂತ್ರಿಯಾಗಲು ಯೋಗ್ಯರಲ್ಲ ಎಂದು ತಾಲಿಬಾನ್ ಹೇಳುತ್ತದೆ. ಮಹಿಳೆಯರು ಮನೆಯಲ್ಲಿಯೇ ಗೃಹಸ್ಥೆಯಾಗಿರಬೇಕು, ಪುರುಷರು ಮಾತ್ರ ದುಡಿಯಲು ಹೋಗಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳುತ್ತಾರೆ. ಈ ವಿಚಾರಧಾರೆಗಳು ಒಂದೇ ಆಗಿಲ್ಲವೇ?" ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದಾರೆ.
-
तालीबान- महिलाएँ मंत्री बनाए जाने लायक़ नहीं हैं।
— digvijaya singh (@digvijaya_28) September 10, 2021 " class="align-text-top noRightClick twitterSection" data="
मोहन भागवत- महिलाओं को घर पर ही रह कर गृहस्थी सम्भालना चाहिए।
क्या विचारों में समानता है? https://t.co/BAm6xnkS1M
">तालीबान- महिलाएँ मंत्री बनाए जाने लायक़ नहीं हैं।
— digvijaya singh (@digvijaya_28) September 10, 2021
मोहन भागवत- महिलाओं को घर पर ही रह कर गृहस्थी सम्भालना चाहिए।
क्या विचारों में समानता है? https://t.co/BAm6xnkS1Mतालीबान- महिलाएँ मंत्री बनाए जाने लायक़ नहीं हैं।
— digvijaya singh (@digvijaya_28) September 10, 2021
मोहन भागवत- महिलाओं को घर पर ही रह कर गृहस्थी सम्भालना चाहिए।
क्या विचारों में समानता है? https://t.co/BAm6xnkS1M
ಅಲ್ಲದೇ "ಘೋಷಿತ ಭಯೋತ್ಪಾದಕ ಸಂಘಟನೆಯ ಸದಸ್ಯರು ಮಂತ್ರಿಗಳಾಗಿರುವ ತಾಲಿಬಾನ್ ಸರ್ಕಾರವನ್ನು ಭಾರತ ಗುರುತಿಸುತ್ತದೆಯೇ ಎಂದು ಮೋದಿ-ಶಾ ಸರ್ಕಾರವು ಈಗ ಸ್ಪಷ್ಟಪಡಿಸಬೇಕಾಗಿದೆ" ಎಂದು ಟ್ವೀಟ್ ಮಾಡುವ ಮೂಲಕ ದಿಗ್ವಿಜಯ ಸಿಂಗ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.
ಇದನ್ನೂ ಓದಿ: RSS -Taliban ಮನಸ್ಥಿತಿ ಒಂದೇ.. ಕಿಡಿ ಹೊತ್ತಿಸಿದ ಅಖ್ತರ್, ಕ್ಷಮೆಯಾಚನೆಗೆ ಬಿಜೆಪಿ ಪಟ್ಟು
"ಮಹಿಳೆಯರು ಸ್ವತಂತ್ರರಾಗಿ ಉಳಿಯಲು ಸಾಧ್ಯವಿಲ್ಲ" ಎಂದು ಈ ಹಿಂದೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ್ದ ಹೇಳಿಕೆಯನ್ನು ಪೋಸ್ಟ್ ಮಾಡಿರುವ ದಿಗ್ವಿಜಯ ಸಿಂಗ್, ಈ ಹೇಳಿಕೆ ನೀಡಿದ್ದು ಯೋಗಿ ಅವರೇನಾ? ಎಂದು ಪ್ರಶ್ನಿಸಿದ್ದಾರೆ.
-
Is it Yogi ji? Are you really serious? pic.twitter.com/xB8qBo78kZ
— digvijaya singh (@digvijaya_28) September 10, 2021 " class="align-text-top noRightClick twitterSection" data="
">Is it Yogi ji? Are you really serious? pic.twitter.com/xB8qBo78kZ
— digvijaya singh (@digvijaya_28) September 10, 2021Is it Yogi ji? Are you really serious? pic.twitter.com/xB8qBo78kZ
— digvijaya singh (@digvijaya_28) September 10, 2021
ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಕುರಿತು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಕವಿ, ಚಿತ್ರ ಸಾಹಿತಿ, ಮಾಜಿ ಸಂಸದ ಜಾವೇದ್ ಅಖ್ತರ್ ಅವರು ಆರ್‌ಎಸ್‌ಎಸ್ ಮತ್ತು ಬಜರಂಗ ದಳವನ್ನು ತಾಲಿಬಾನ್ಗೆ ಹೋಲಿಕೆ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.