ETV Bharat / bharat

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 1.11 ಲಕ್ಷ ರೂ. ದೇಣಿಗೆ ನೀಡಿದ ದಿಗ್ವಿಜಯ್​​ ಸಿಂಗ್​!

ರಾಮ ಮಂದಿರ ವಿಚಾರವಾಗಿ ಈ ಹಿಂದೆ ಅನೇಕ ಸಲ ಬಿಜೆಪಿ ಹಾರೂ ಆರ್​ಎಸ್​ಎಸ್ ಮೇಲೆ ವಾಗ್ದಾಳಿ ನಡೆಸುತ್ತಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಇದೀಗ ತಾವೇ ದೇಗುಲ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ.

Digvijaya Singh
Digvijaya Singh
author img

By

Published : Jan 19, 2021, 1:58 AM IST

ಭೋಪಾಲ್​(ಮಧ್ಯಪ್ರದೇಶ): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ನಿರ್ಮಾಣಕ್ಕಾಗಿ ಮಧ್ಯಪ್ರದೇಶ ಕಾಂಗ್ರೆಸ್​ನ ಹಿರಿಯ ಮುಖಂಡ, ಸಂಸದ ದಿಗ್ವಿಜಯ್​ ಸಿಂಗ್​ 1,11,111 ರೂ. ದೇಣಿಗೆ ನೀಡಿದ್ದಾರೆ.

Digvijaya Singh Latter to modi
ಪ್ರಧಾನಿಗೆ ಪತ್ರ ಬರೆದ ದಿಗ್ವಿಜಯ್​ ಸಿಂಗ್​​

ತಾವು ನೀಡಿರುವ ದೇಣಿಗೆ ಹಣದ ಚೆಕ್​​ ಅನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದು, ನಿಧಿ ಸಂಗ್ರಹ ಸಾಮರಸ್ಯದ ವಾತಾವರಣದಲ್ಲಿ ನಡೆಯಲಿ ಎಂದು ಮನವಿ ಮಾಡಿದ್ದಾರೆ. ಯಾವ ಬ್ಯಾಂಕ್​ಗೆ ಹಣ ದಾನ ಮಾಡಬೇಕು ಎಂಬುದು ನನ್ನಲ್ಲಿ ಮಾಹಿತಿ ಇಲ್ಲದ ಕಾರಣ ರಾಮ ಮಂದಿರ ದೇವಾಲಯ ನಿರ್ಮಾಣಕ್ಕಾಗಿ ನನ್ನ ಕೊಡುಗೆ 1,11,111 ರೂ ಚೆಕ್​ ನಿಮಗೆ ಕಳುಹಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಓದಿ: ಏಷ್ಯಾ ಪೆಸಿಫಿಕ್ ಭಾಗದಲ್ಲಿ ಭಾರತ, ಚೀನಾದ ಕೋವಿಡ್ ವ್ಯಾಕ್ಸಿನ್​ಗಳ ಹವಾ

ವಿಶ್ವ ಹಿಂದೂ ಪರಿಷತ್​ ಜನವರಿ 15ರಿಂದ ದೇಶಾದ್ಯಂತ 44 ದಿನಗಳ ಸುದೀರ್ಘ ರಾಮ ಮಂದಿರ ನಿಧಿಸಂಗ್ರಹ ಅಭಿಯಾನ ಆರಂಭಿಸಿದೆ. ಈಗಾಗಲೇ ನೂರು ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಕೂಡ ದೇಣಿಗೆ ನೀಡಿದ್ದಾರೆ. ಇದಗೀ ಬಾಲಿವುಡ್ ನಟ ಅಕ್ಷಯ್ ಕುಮಾರ್​ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆ ಸಂಗ್ರಹ ಮಾಡುವಂತೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.