ETV Bharat / bharat

ದೇವಿ ವಿಗ್ರಹ ಸಿಗುತ್ತೆ ಅಂತ 30 ಅಡಿಯ ಬಾವಿ ಕೊರೆಸಿದ ಆಂಧ್ರ ಮಹಿಳೆ!! - ಆಂಧ್ರ ಪ್ರದೇಶ

ಇನ್ನೆರಡ್ಮೂರು ದಿನಗಳಲ್ಲಿ ವಿಗ್ರಹ ಸಿಕ್ಕೇ ಸಿಗುತ್ತೆ, ನಾನು ದೇವಾಲಯವನ್ನು ಕಟ್ಟಿಸುತ್ತೇನೆ. ಇದಕ್ಕಾಗಿ ತಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದರೂ ಸರಿಯೇ ಎಂದು ಹೇಳಿದ್ದಾರಂತೆ. ಮಹಿಳೆಯ ಈ ನಡೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ..

DIGGING IN FARMLANDS FOR GODDESS IDOLS BY WOMEN PRIDICTION
ದೇವಿ ವಿಗ್ರಹ ಸಿಗುತ್ತೆ ಅಂತ 30 ಅಡಿಯ ಬಾವಿ ಕೊರೆಸಿದ ಆಂಧ್ರ ಮಹಿಳೆ
author img

By

Published : Jun 14, 2021, 8:55 PM IST

ಆಂಧ್ರ ಪ್ರದೇಶ : ದೇವರ ವಿಗ್ರಹ ಸಿಗುತ್ತೆ ಎಂದು ಮಹಿಳೆಯೊಬ್ಬರು 30 ಅಡಿ ಆಳದ ಬಾವಿ ಕೊರೆಸಿರುವ ಘಟನೆ ವಿಜ್ಯಾನಗರಂ ಜಿಲ್ಲೆಯಲ್ಲಿ ನಡೆದಿದೆ. ಚೀಪುರುಪಲ್ಲಿ ಮಂಡಲಕ್ಕೆ ಸೇರಿದ ಪುರೀವಲಸ ಗ್ರಾಮಕ್ಕೆ ಸೇರಿ ಕಂಡಿ ಲಕ್ಷ್ಮಿ ಎಂಬುವವರೇ ವಿಗ್ರಹಕ್ಕಾಗಿ ದೊಡ್ಡ ಬಾವಿಯಾಕಾರದ ಆಳವನ್ನು ಕೊರೆಸುತ್ತಿರುವ ಮಹಿಳೆ.

ದೇವಿ ವಿಗ್ರಹ ಸಿಗುತ್ತೆ ಅಂತ 30 ಅಡಿಯ ಬಾವಿ ಕೊರೆಸಿದ ಆಂಧ್ರ ಮಹಿಳೆ..

ತನ್ನ ಕನಸಿನಲ್ಲಿ ಬಂದಿದ್ದ ರಾಜರಾಜೇಶ್ವರಿ ದೇವಿ, ನನಗಾಗಿ ನೀನು ಒಂದು ದೇವಾಲಯವನ್ನು ನಿರ್ಮಿಸಬೇಕು ಎಂದು ಹೇಳಿದ್ದರಂತೆ. ಇದೇ ಮಾತುಗಳನ್ನು ದೇವಿ ಈಕೆಯ ಪುತ್ರನಿಗೂ ಹೇಳಿದ್ದಳಂತೆ. ಹೀಗಾಗಿ, ದೇವರ ವಿಗ್ರಹಕ್ಕಾಗಿ 1 ಲಕ್ಷ 50 ಸಾವಿರ ರೂಪಾಯಿ ಖರ್ಚು ಮಾಡಿ ಕೂಲಿ ಆಳುಗಳನ್ನು ಇಟ್ಟು ಕೃಷಿ ಭೂಮಿಯಲ್ಲಿ 30 ಅಡಿ ಆಳವನ್ನು ತೋಡಿಸಿದ್ದಾರೆ.

ಇನ್ನೆರಡ್ಮೂರು ದಿನಗಳಲ್ಲಿ ವಿಗ್ರಹ ಸಿಕ್ಕೇ ಸಿಗುತ್ತೆ, ನಾನು ದೇವಾಲಯವನ್ನು ಕಟ್ಟಿಸುತ್ತೇನೆ. ಇದಕ್ಕಾಗಿ ತಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದರೂ ಸರಿಯೇ ಎಂದು ಹೇಳಿದ್ದಾರಂತೆ. ಮಹಿಳೆಯ ಈ ನಡೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.