ETV Bharat / bharat

ಜನಗಣತಿ ನಂತರ ಮಹಿಳಾ ಮೀಸಲಾತಿ ಜಾರಿ: ಅಸಿಂಧು ತುಂಬಾ ಕಷ್ಟ ಎಂದ ಸುಪ್ರೀಂ ಕೋರ್ಟ್​

author img

By ETV Bharat Karnataka Team

Published : Nov 3, 2023, 11:03 PM IST

Womens Reservation Bill: ಜನಗಣತಿ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಹೇಳುವ ಕಾನೂನಿನ ಒಂದು ಭಾಗವನ್ನು ರದ್ದುಗೊಳಿಸುವುದು ಕಷ್ಟ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ.

Etv Bharat
Etv Bharat

ನವದೆಹಲಿ: ಜನಗಣತಿ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಹೇಳುವ ಕಾನೂನಿನ ಒಂದು ಭಾಗವನ್ನು ರದ್ದುಗೊಳಿಸುವುದು ತುಂಬಾ ಕಷ್ಟ ಎಂದು ಸುಪ್ರೀಂ ಕೋರ್ಟ್​ ಶುಕ್ರವಾರ ಹೇಳಿದೆ. ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿದ ಮನವಿಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ನೋಟಿಸ್ ನೀಡಲು ನಿರಾಕರಿಸಿದೆ.

ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಕಾಂಗ್ರೆಸ್ ನಾಯಕಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಜನಗಣತಿ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಹೇಳುವ ಕಾನೂನಿನ ಒಂದು ಭಾಗವನ್ನು ಅಸಿಂಧುಗೊಳಿಸಬೇಕೆಂದು ವಾದ ಮಂಡಿಸಿದರು. ಈ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ ನ್ಯಾಯಪೀಠವು, ಇದು ತುಂಬಾ ಒಳ್ಳೆಯ ಹೆಜ್ಜೆ ಎಂದು ಕಾನೂನಿನ ವಿಷಯವಾಗಿ ತಿಳಿಸಿದೆ. ಅಲ್ಲದೇ, ಇದೇ ವಿಷಯದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಬಾಕಿ ಉಳಿದಿದ್ದು, ನವೆಂಬರ್ 22ರಂದು ಈ ಮನವಿಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ.

ಇದೇ ವೇಳೆ, ಈ ಅರ್ಜಿ ಸಂಬಂಧ ನೋಟಿಸ್ ನೀಡುವಂತೆ ಮತ್ತು ಮನವಿಯನ್ನು ಇತರ ವಿಷಯದೊಂದಿಗೆ ಪಟ್ಟಿ ಮಾಡುವಂತೆ ಅರ್ಜಿದಾರರ ವಕೀಲ ಸಿಂಗ್ ಕೇಳಿಕೊಂಡರು. ಈ ಅರ್ಜಿಗೆ ನೋಟಿಸ್ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅಲ್ಲದೇ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ದತ್ತಾಂಶ ಸಂಗ್ರಹಣೆಗೆ ಜನಗಣತಿಯ ಅಗತ್ಯವಿದೆ. ಮಹಿಳಾ ಮೀಸಲಾತಿ ಕಾನೂನಿನ ಸಂದರ್ಭದಲ್ಲಿ ಜನಗಣತಿಯ ಪ್ರಶ್ನೆಯು ಹೇಗೆ ಉದ್ಭವಿಸುತ್ತದೆ ಎಂದು ವಕೀಲ ಸಿಂಗ್​ ಪ್ರಶ್ನಿಸಿದರು.

ಇದನ್ನೂ ಓದಿ: 2034ರಲ್ಲಿ ಮಹಿಳಾ ಮೀಸಲಾತಿ ಬಿಲ್​ ಜಾರಿಯಾಗಬಹುದು : ಕಪಿಲ್ ಸಿಬಲ್

ಆದ್ದರಿಂದ ಜನಗಣತಿಯ ನಂತರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳುವ ಕಾನೂನಿನ ಭಾಗವನ್ನು ನ್ಯಾಯಾಲಯವು ರದ್ದು ಮಾಡಬೇಕೆಂದು ಸಿಂಗ್ ಒತ್ತಿ ಹೇಳಿದರು. ಆಗ ನ್ಯಾಯ ಪೀಠವು, ಅದನ್ನು ಮಾಡುವುದು ನ್ಯಾಯಾಲಯಕ್ಕೆ ತುಂಬಾ ಕಷ್ಟಕರವಾಗುತ್ತದೆ ಎಂದು ತಿಳಿಸಿತು. ಜೊತೆಗೆ ಮಹಿಳಾ ಮೀಸಲಾತಿಗಾಗಿ ಜನಗಣತಿ ಅಗತ್ಯವಿಲ್ಲ ಎಂಬ ನಿಮ್ಮ ವಾದವನ್ನು ನ್ಯಾಯಾಲಯ ಅರ್ಥಮಾಡಿಕೊಂಡಿದೆ. ಆದರೆ, ಬಹಳಷ್ಟು ಸಮಸ್ಯೆಗಳಿವೆ. ಈ ಮನವಿಯನ್ನು ವಜಾಗೊಳಿಸುವುದಿಲ್ಲ. ಬಾಕಿ ಉಳಿದಿರುವ ವಿಷಯದೊಂದಿಗೆ ಸೇರಿಸುತ್ತದೆ ಎಂದು ವಕೀಲ ಸಿಂಗ್‌ ಅವರಿಗೆ ಪೀಠವು ತಿಳಿಸಿತು.

2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕು. ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆಯೊಂದಿಗೆ ಶಾಸನವನ್ನು ಕಾನೂನಾಗಿ ಪರಿವರ್ತಿಸಲಾಗಿದೆ. ಅಧಿಕೃತವಾಗಿ 'ನಾರಿ ಶಕ್ತಿ ವಂದನ್ ಅಧಿನಿಯಮ್' ಎಂದು ಕರೆಯಲ್ಪಡುವ ಕಾನೂನು ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಪ್ರಸ್ತಾಪಿಸುತ್ತದೆ. ಸಂವಿಧಾನದ ತಿದ್ದುಪಡಿಯನ್ನು ಅನಿಶ್ಚಿತ ಅವಧಿಗೆ ತಡೆಹಿಡಿಯಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದು ಇಂಡಿಯಾ ಒಕ್ಕೂಟದ ಗುರಿ : ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.