ETV Bharat / bharat

2029ರಲ್ಲಿ ದೇಶದಲ್ಲಿ ಹಿಂದೂಗಳಲ್ಲದವರು ಪ್ರಧಾನಿಗಳಾಗುತ್ತಾರೆ: ಹರಿದ್ವಾರದ ಧರ್ಮ ಸಂಸದ್ ಭವಿಷ್ಯ - ಸ್ವಾಮಿ ಯತಿ ನರಸಿಂಹಾನಂದ ಗಿರಿ ಭವಿಷ್ಯ

2029ರ ವೇಳೆಗೆ ಭಾರತದಲ್ಲಿ ಹಿಂದೂಗಳಲ್ಲದವರು ಪ್ರಧಾನ ಮಂತ್ರಿಗಳಾಗುತ್ತಾರೆ ಎಂದು ಧರ್ಮ ಸಂಸದ್​ನಲ್ಲಿ , ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದ ಗಿರಿ ಭವಿಷ್ಯ ನುಡಿದಿದ್ದಾರೆ.

'Dharma Sansad' begins in Haridwar, to promote Sanatan Dharma
2029ರಲ್ಲಿ ದೇಶದಲ್ಲಿ ಹಿಂದೂಗಳಲ್ಲದವರು ಪ್ರಧಾನಿಗಳಾಗುತ್ತಾರೆ: ಹರಿದ್ವಾರದ ಧರ್ಮ ಸಂಸದ್ ಭವಿಷ್ಯ
author img

By

Published : Dec 17, 2021, 10:57 PM IST

ಹರಿದ್ವಾರ(ಉತ್ತರಾಖಂಡ): ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದ ಗಿರಿ ಅವರ ನೇತೃತ್ವದಲ್ಲಿ ಮೂರು ದಿನಗಳ 'ಧರ್ಮ ಸಂಸದ್' ಶುಕ್ರವಾರ ಉದ್ಘಾಟನೆಗೊಂಡಿದೆ.

ಈ ಧಾರ್ಮಿಕ ಸಂಸತ್ತಿನಲ್ಲಿ ನೂರಾರು ಸಂತರು ಮತ್ತು ಸಾಮಾನ್ಯ ಜನರು ಭಾಗವಹಿಸುತ್ತಿದ್ದಾರೆ. ಮೂರನೇ ದಿನ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ಧರ್ಮ ಸಂಸದ್ ನೀಡುತ್ತದೆ. ಮೊದಲ ದಿನ ಮಾತನಾಡಿದ ಸ್ವಾಮಿ ಯತಿ ನರಸಿಂಹಾನಂದ ಗಿರಿ, 2029ರ ವೇಳೆಗೆ ಭಾರತದಲ್ಲಿ ಹಿಂದೂಗಳಲ್ಲದವರು ಪ್ರಧಾನ ಮಂತ್ರಿಗಳಾಗುತ್ತಾರೆ. ಇದನ್ನು ತಪ್ಪಿಸಲು ಹಿಂದೂ ಧರ್ಮದ ರಕ್ಷಣೆಗೆ ಏನು ಮಾಡಬೇಕು ಎಂಬುದನ್ನು ಪರಿಗಣಿಸಲು 'ಧರ್ಮ ಸಂಸದ್' ಅನ್ನು ಆಯೋಜಿಸಲಾಗಿದೆ ಎಂದರು.

ಇದರ ಜೊತೆಗೆ ಮೂರು ದಿನಗಳ ಸಭೆಯ ನಂತರ ಕೆಲವೊಂದು ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತದೆ. ಇದರಿಂದ ಸನಾತನ ಧರ್ಮವನ್ನು ಉಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಯತಿ ನರಸಿಂಹಾನಂದ ಗಿರಿ ಅಭಿಪ್ರಾಯಪಟ್ಟಿದ್ದಾರೆ. ಧರ್ಮ ಸಂಸದ್​ಗೆ ಬಂದಿದ್ದ ಸ್ವಾಮಿ ಆನಂದ್ ಬಾಬಾ, ಈಗ ದೇಶದಲ್ಲಿ ಮಾನವೀಯತೆ ಅಥವಾ ಬಂಡಾಯ ನೆಲೆಯೂರಲಿದೆ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ವೈರಲ್ ಆದ ರ್‍ಯಾಪರ್​​ ಸಾನಿಯಾ ಮಿಸ್ತ್ರಿ: ಮನೆ ಪರಿಸ್ಥಿತಿ, ಬಡತವನೇ ಈಕೆಯ ರ್‍ಯಾಪ್ ಕಂಟೆಂಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.