ETV Bharat / bharat

8 ವಾರ ಶೇ 50 ರಷ್ಟು ವಿಮಾನಗಳೊಂದಿಗೆ ಕಾರ್ಯ ನಿರ್ವಹಿಸುವಂತೆ ಸ್ಪೈಸ್​ಜೆಟ್‌ಗೆ ಡಿಜಿಸಿಎ ಆದೇಶ

ಸ್ಪೈಸ್ ಜೆಟ್ ಏರ್​ಲೈನ್​​ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆ ನೀಡುವಲ್ಲಿ ವಿಫಲವಾಗುತ್ತಿದ್ದು, ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತಿಳಿಸಿದೆ.

Spicejet Airline
ಸ್ಪೈಸ್​ಜೆಟ್​ ಏರ್​ಲೈನ್​
author img

By

Published : Jul 28, 2022, 9:30 AM IST

ನವದೆಹಲಿ: ಕಳೆದ 18 ದಿನಗಳಲ್ಲಿ ಹಲವು ಬಾರಿ ತಾಂತ್ರಿಕ ದೋಷಗಳಿಂದಾಗಿ ಸ್ಪೈಸ್​ಜೆಟ್​ ಏರ್​ಲೈನ್​​​ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿವೆ. ಹೀಗಾಗಿ ಮುಂದಿನ 8 ವಾರಗಳವರೆಗೆ ಶೇ.50 ರಷ್ಟು ವಿಮಾನಗಳನ್ನು ಮಾತ್ರ ಕಾರ್ಯಾಚರಣೆಗೆ ಇಳಿಸುವಂತೆ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಆದೇಶಿಸಿದೆ.

ಆಫ್​ ಸೀಸನ್​ ಅವಧಿಯಾಗಿರುವುದರಿಂದ ಇತರ ಏರ್‌ಲೈನ್​​ಗಳಂತೆ ಸ್ಪೈಸ್‌ಜೆಟ್ ಈಗಾಗಲೇ ವಿಮಾನ ಹಾರಾಟದ ವೇಳಾಪಟ್ಟಿಯನ್ನು ಮರುಹೊಂದಿಸಿದೆ. ಹಾಗಾಗಿ ಈ ಆದೇಶ ತನ್ನ ವಿಮಾನಯಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗೂ ಯಾವುದೇ ವಿಮಾನಗಳನ್ನು ರದ್ದುಗೊಳಿಸುವುದಿಲ್ಲ. ಎಂಟು ವಾರಗಳವರೆಗೆ ಆದೇಶದಂತೆ ವಿಮಾನಗಳು ಕಾರ್ಯನಿರ್ವಹಿಸಲಿದ್ದು, ಬೇಸಿಗೆ ವೇಳಾಪಟ್ಟಿಯಲ್ಲಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸ್ಪೈಸ್​ಜೆಟ್ ಏರ್​ಲೈನ್​ ತಿಳಿಸಿದೆ.

ವಿವಿಧ ಸ್ಪಾಟ್ ಚೆಕ್‌ಗಳು, ತಪಾಸಣೆಗಳು ಮತ್ತು ಸ್ಪೈಸ್‌ಜೆಟ್ ಸಲ್ಲಿಸಿದ ಶೋಕಾಸ್ ನೋಟಿಸ್‌ಗೆ ಉತ್ತರವಾಗಿ, ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆ ದೃಷ್ಟಿಯಿಂದ ಸ್ಪೈಸ್‌ಜೆಟ್‌ನ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಎಂಟು ವಾರಗಳ ಅವಧಿಗೆ ಈ ಅನುಮೋದನೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಆದೇಶದಲ್ಲಿ ತಿಳಿಸಿದ್ದಾರೆ.

ಸ್ಪೈಸ್ ಜೆಟ್ ಏರ್​ಲೈನ್​​ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆಯನ್ನು ನೀಡುವಲ್ಲಿ ವಿಫಲವಾಗಿದೆ. ಈ ಎಂಟು ವಾರಗಳಲ್ಲಿ, ಸಂಸ್ಥೆಯ​ ವಿಮಾನಯಾನದ ಮೇಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹೆಚ್ಚಿನ ಕಣ್ಗಾವಲು ಇರಿಸಲಿದೆ. ವಿಮಾನಯಾನಗಳ ಸಂಖ್ಯೆಯನ್ನು ಶೇ. 50ಕ್ಕಿಂತ ಹೆಚ್ಚು ಮಾಡಬೇಕಾದರೆ ಸ್ಪೈಸ್​ಜೆಟ್​, ಸುರಕ್ಷತೆಯನ್ನು ಪರಿಣಾಮವಾಗಿ ಕೈಗೊಳ್ಳಲು ಸಾಕಷ್ಟು ತಾಂತ್ರಿಕ ಬೆಂಬಲ ಹಾಗೂ ಆರ್ಥಿಕ ಸಂಪನ್ಮೂಲ ಹೊಂದಿದೆ ಎಂಬುದನ್ನು ಮಹಾನಿರ್ದೇಶನಾಲಯಕ್ಕೆ ಸಾಬೀತು ಮಾಡಬೇಕಿದೆ ಎಂದು ಹೇಳಿದೆ.

ಇದನ್ನೂ ಓದಿ: ದೆಹಲಿಯಿಂದ ಜಬಲ್​ಪುರಕ್ಕೆ ಹೊರಟಿದ್ದ ವಿಮಾನದಲ್ಲಿ ಹೊಗೆ.. ತುರ್ತು ಭೂಸ್ಪರ್ಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.