ETV Bharat / bharat

ಕಲಬುರಗಿ, ಬಾಗಲಕೋಟೆಯಂತೆ ದೆಹಲಿಯಲ್ಲೂ ಹಾಲು ಕುಡಿದ ನಂದಿ ವಿಗ್ರಹ: ಕಾರಣವೇನು ಗೊತ್ತಾ? - Delhi temple

ಬೇಸಿಗೆಯಲ್ಲಿ ಕಲ್ಲು ಒಣಗುತ್ತದೆ. ಇದರಿಂದ ಯಾವುದೇ ಶಿಲೆಯಾಗಿದ್ದರೂ ನೀರು ಅಥವಾ ದ್ರವದ ರೂಪವನ್ನು ಹೀರಿಕೊಳ್ಳುತ್ತದೆ. ಇದನ್ನೇ ಜನರು ಪವಾಡ ಎಂದು ನಂಬುತ್ತಾರೆ ಎಂದು ಭಕ್ತರೊಬ್ಬರು ಹೇಳಿದ್ದಾರೆ.

idol
idol
author img

By

Published : Mar 8, 2022, 5:11 PM IST

ನವದೆಹಲಿ: ಕರ್ನಾಟಕದ ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ಬಸವಣ್ಣನ ವಿಗ್ರಹ ಹಾಲು ಕುಡಿದಿರುವ ಬಗ್ಗೆ ವರದಿಯಾಗಿದೆ. ಇದೇ ರೀತಿಯಾದ ವರದಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಆಗಿದ್ದು, ನೂರಾರು ಜನರು ಹಾಲು ಕುಡಿಯುವ ನಂದಿ ವಿಗ್ರಹ ನೋಡಲು ಧಾವಿಸಿ ಬರುತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಕಲ್ಲಿನ ಬಸವನಿಗೆ ಹಾಲು ಕುಡಿಸಲು ಮುಗಿಬಿದ್ದ ಜನ.. ಕ್ಷೀರ ಸೇವಿಸಿದನಾ ಬಸವಣ್ಣ!?

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಅರಳಿಕಟ್ಟಿ ಬಸವಣ್ಣನ ಮೂರ್ತಿಯು ಹಾಲು ಕುಡಿಯುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಇತ್ತ, ಕಲಬುರಗಿ ನಗರದ ಬ್ಯಾಂಕ್ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದ ಕಲ್ಲಿನ ಬಸವಣ್ಣನೂ ಹಾಲು ಕುಡಿದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ರೀತಿಯಲ್ಲೇ ದೆಹಲಿ ವಜೀರ್​ಬಾದ್​​ನ ಶಿವನ ಮಂದಿರದಲ್ಲೂ ನಂದಿ ವಿಗ್ರಹ ಕೂಡ ಹಾಲು ಕುಡಿದಿಯುವ ವರದಿಯಾಗಿದೆ. ಇದನ್ನು 'ಪವಾಡ' ಎಂದೇ ಜನರು ಭಾವಿಸಿದ್ದು, ತಂಡೋಪತಂಡವಾಗಿ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ 'ಹಾಲು ಕುಡಿಯುವ ಕಲ್ಲಿನ ಬಸವ'! ಹುಲಿಕಲ್ ನಟರಾಜ್ ಹೇಳಿದ್ದೇನು?

ನಂದಿ ವಿಗ್ರಹದ ಬಾಯಿ ಹತ್ತಿರ ಚಮಚದಿಂದ ಹಾಲು ಹಿಡಿದರೆ, ನಿಧಾನಕ್ಕೆ ಹಾಲು ಮಾಯವಾಗುತ್ತಿದೆ. ಇಂತಹ ಪವಾಡವನ್ನು ನಾವು ನೋಡಿದ್ದು ಇದೇ ಮೊದಲು ಎಂದು ಭಕ್ತರು ಹೇಳಿದ್ದಾರೆ. ದೇವಸ್ಥಾನದ ಅರ್ಚಕರ ಪತ್ನಿ ಸಹ ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು, ಈ ಹಿಂದೆ ಇಂತಹದ್ದನ್ನು ಕೇಳಿದ್ದೆ. ಆದರೆ, ನಾನು ನೋಡಿರಲಿಲ್ಲ. ಹೀಗಾಗಿ ನಾನು ಅದೃಷ್ಠಶಾಲಿ ಎಂದು ಆಕೆ ಹೇಳಿಕೊಂಡಿದ್ದಾರೆ.

ಇದೇ ವೇಳೆ ಭಕ್ತರೊಬ್ಬರು, ಬೇಸಿಗೆಯಲ್ಲಿ ಕಲ್ಲು ಒಣಗುತ್ತದೆ. ಇದರಿಂದ ಯಾವುದೇ ಶಿಲೆಯಾಗಿದ್ದರೂ ನೀರು ಅಥವಾ ದ್ರವದ ರೂಪವನ್ನು ಹೀರಿಕೊಳ್ಳುತ್ತದೆ. ಇದನ್ನೇ ಜನರು ಪವಾಡ ಎಂದು ನಂಬುತ್ತಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.