ETV Bharat / bharat

ವಿಶೇಷ ಅಂಕಣ.. ಕೋವಿಡ್ ಕಾಲಘಟ್ಟದಲ್ಲಿ ತಾಯಿ ಆರೋಗ್ಯ ನಿಭಾಯಿಸಲು ಹೊಸ ತಂತ್ರಜ್ಞಾನಗಳ ಬಳಕೆ - ಕೋವಿಡ್ ಕಾಲಘಟ್ಟದಲ್ಲಿ ತಾಯಿ ಆರೋಗ್ಯ ನಿಭಾಯಿಸಲು ಹೊಸ ತಂತ್ರಜ್ಞಾನಗಳ ಬಳಕೆ

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ತಾಯಿಯ ಆರೋಗ್ಯಕ್ಕೆ ಸಂಪನ್ಮೂಲಗಳ ಕೊರತೆಯಿಂದಾಗಿ, ಗರ್ಭಿಣಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ದೇಶಾದ್ಯಂತ ವ್ಯಾಪಕ ರೀತಿಯಲ್ಲಿ ತಂತ್ರಜ್ಞಾನ ಆಧಾರಿತ ಆರೋಗ್ಯ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತು ಭಾರತ ಮುಂದಾಗಬೇಕಾದ ಅಗತ್ಯವಿದೆ..

COVID19
ತಾಯಿ
author img

By

Published : Nov 10, 2020, 7:01 PM IST

ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದಾಗಿನಿಂದ, ವಿಶ್ವದಾದ್ಯಂತ ಹೆಚ್ಚಿನ ದೇಶಗಳ ಆರೋಗ್ಯ ಸಂಪನ್ಮೂಲಗಳು ಮತ್ತು ಕೊವಿಡ್ ವಾರಿಯರ್ಸ್​ಗಳನ್ನು ಕೋವಿಡ್ ಸೋಂಕಿತರ ಆರೈಕೆಗಾಗಿ ಮುಖ್ಯವಾಗಿ ನಿಯೋಜಿಸಲಾಗಿದೆ. ನಾಗರಿಕರ ಮನೆ-ಮನೆ ಪರೀಕ್ಷೆ ಮತ್ತು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ನೇಮಿಸಲಾಗಿದೆ. ಅಂತಹ ಸನ್ನಿವೇಶದಲ್ಲಿ, ದುರ್ಬಲ ಮತ್ತು ತಳಮಟ್ಟದಲ್ಲಿರುವ ಆರೋಗ್ಯ ಮೂಲಸೌಕರ್ಯ ಹೊಂದಿರುವ ಭಾರತದಂತಹ ದೇಶಗಳು ತಾಯಿಯ ಆರೋಗ್ಯದಂತಹ ಆರೋಗ್ಯ ರಕ್ಷಣೆಯ ಇತರ ಪ್ರಮುಖ ಕ್ಷೇತ್ರಗಳಲ್ಲಿ ಸಂಪನ್ಮೂಲಗಳ ಕೊರತೆಯ ಸಮಸ್ಯೆ ಎದುರಿಸುತ್ತಿದೆ.

ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಅಗತ್ಯ ಸೇವೆಯ ಕೊರತೆಯಿಂದಾಗಿ ಕೋವಿಡ್-19 ಆರಂಭಿಕ ಘಟ್ಟದಲ್ಲಿ ತಾಯಿಯ ಮತ್ತು ನವಜಾತ ಶಿಶುಗಳ ಮರಣದಲ್ಲಿ ತೀವ್ರ ಏರಿಕೆಗೆ ಕಾರಣವಾಯಿತು. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ) ಅಂದಾಜಿನ ಪ್ರಕಾರ ಬಿಕ್ಕಟ್ಟಿನ ಪರಿಣಾಮದಿಂದಾಗಿ ವಿಶ್ವಾದ್ಯಂತ 7 ದಶಲಕ್ಷ ಅನಪೇಕ್ಷಿತ ಗರ್ಭಧಾರಣೆಗಳು ಘಟಿಸಿರಬಹುದು.

ತುರ್ತು ಆರೋಗ್ಯದ ಅಲಭ್ಯತೆಯಿಂದಾಗಿ ಅಸುರಕ್ಷಿತ ಗರ್ಭಪಾತ ಮತ್ತು ಶಿಶು ಜನನ ಸಮಯದಲ್ಲಿ ಉಂಟಾಗುವ ತೊಂದರೆಗಳಿಂದ ಸಾವಿರಾರು ಸಾವು ಸಂಭವಿಸಬಹುದು ಎಂದು ಅಂದಾಜಿಲಾಗಿದೆ. ಯುನಿಸೆಫ್ ಪ್ರಕಾರ, ಮಾರ್ಚ್ ಮತ್ತು ಡಿಸೆಂಬರ್ ನಡುವೆ ಭಾರತದಲ್ಲಿ 20 ಮಿಲಿಯನ್ ಶಿಶುಗಳ ಜನನ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ವಿಶ್ವದಾದ್ಯಂತ ಕೋವಿಡ್ ಸಂದರ್ಭದಲ್ಲಿ ಗರ್ಭಿಣಿ ತಾಯಂದಿರು ಮತ್ತು ನವಜಾತ ಶಿಶುಗಳು ಆರೋಗ್ಯ ಬಿಕ್ಕಟ್ಟು ಎದರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಎಚ್ಚರಿಸಿದೆ.

ಇದರರ್ಥ ಭಾರತವು ಕೊವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ತಾಯಿಯ ಆರೋಗ್ಯದಲ್ಲಿ ದೀರ್ಘಕಾಲದವರೆಗೆ ಕಂಡು ಬರುವ ಸಮಸ್ಯೆಗಳನ್ನು ಪರಿಹರಿಸಲು ದೇಶಾದ್ಯಂತ ಅಳವಡಿಸಿಕೊಳ್ಳಬಹುದಾದ ತಕ್ಷಣದ ಪರಿಹಾರಗಳ ಅಗತ್ಯವಿರುತ್ತದೆ. ದೀರ್ಘಕಾಲಿಕ ಸಮಸ್ಯೆಗಳಾದ ಗರ್ಭಿಣಿಯರ ಸಮಯೋಚಿತ ಡಯಗ್ನಿಸಿಸ್ ಕೊರತೆ, ಹೆಚ್ಚಿನ ಸಂಖ್ಯೆಯ ತಾಯಿಯ ಮತ್ತು ನವಜಾತ ಶಿಶು ಮರಣ ಪ್ರಮಾಣ ಇತ್ಯಾದಿ ವಿಚಾರಗಳ ಕುರಿತು ಭಾರತ ಗಮನಹರಿಸಬೇಕಾಗಿದೆ.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ತಾಯಿಯ ಆರೋಗ್ಯಕ್ಕೆ ಸಂಪನ್ಮೂಲಗಳ ಕೊರತೆಯಿಂದಾಗಿ, ಗರ್ಭಿಣಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ದೇಶಾದ್ಯಂತ ವ್ಯಾಪಕ ರೀತಿಯಲ್ಲಿ ತಂತ್ರಜ್ಞಾನ ಆಧಾರಿತ ಆರೋಗ್ಯ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಕುರಿತು ಭಾರತ ಮುಂದಾಗಬೇಕಾದ ಅಗತ್ಯವಿದೆ. ಅಂತಹ ಕೆಲವು ನವ- ನವೀನ ತಂತ್ರಜ್ಷಾನಗಳನ್ನು ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ಬಳಸಲಾಗುತ್ತಿದೆ.

ಉದಾಹರಣೆಗೆ, ಮೂತ್ರ-ಪ್ರಸೂತಿ ತಜ್ಞೆ ಅಪರ್ಣಾ ಹೆಗ್ಡೆ ಅಭಿವೃದ್ಧಿಪಡಿಸಿದ ಆರೋಗ್ಯ ಸಖಿ ಎಂಬ ಮೊಬೈಲ್ ಅಪ್ಲಿಕೇಶನ್ ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರಿಗೆ ಸಹಾಯ ಮಾಡುತ್ತಿದೆ. ಆಸ್ಪತ್ರೆಗಳ ಸೇವೆ ಪಡೆಯಲು ಸಾಧ್ಯವಾಗದ ತಾಯಂದಿರಿಗೆ ಆಶಾ ಕಾರ್ಯಕರ್ತರು ಡಯಗ್ನಿಸಿಸ್ ಮಾಡಲು ಮತ್ತು ಪ್ರಸವಪೂರ್ವ ಆರೈಕೆಯನ್ನು ಒದಗಿಸಲು ‘ಆರೋಗ್ಯ ಸಖಿ’ ಸಹಾಯಕವಾಗಿದೆ.

ಭಾರತದಲ್ಲಿ ತಾಯಿಯ ಆರೋಗ್ಯ ರಕ್ಷಣೆಯಲ್ಲಿನ ತಂತ್ರಜ್ಞಾನದ ಆವಿಷ್ಕಾರದ ಮತ್ತೊಂದು ಉದಾಹರಣೆಯೆಂದರೆ ತಾಯಿಂದಿರ ರಕ್ಷಣೆ ಮತ್ತು ನವಜಾತ ಶಿಶುಗಳ ಒಕ್ಕೂಟ (ASMAN), ಇದು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಳಸುತ್ತಿರುವ ಆರೋಗ್ಯ ರಕ್ಷಣೆಗೆ ಸಹಾಯ ಒದಗಿಸುವ ಡಿಜಿಟಲ್ ವೇದಿಕೆಯಾಗಿದೆ. (ತಾಯಿಯ ಮತ್ತು ನವಜಾತ ಶಿಶು ಮರಣ ಪ್ರಮಾಣ ಹೆಚ್ಚು ಇರುವ ರಾಜ್ಯಗಳು) ತಾಯಂದಿರ ಮತ್ತು ನವಜಾತ ಶಿಶುಗಳ ಜೀವ ಉಳಿಸಲು ತಂತ್ರಜ್ಞಾನ ಆಧರಿತ ಬಳಸಲಾಗುತ್ತಿದೆ.

ಇದಲ್ಲದೆ, ದೂರದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕ ಮಹಿಳೆಯರು ಮತ್ತು ಅವರಿಗೆ ಆರೋಗ್ಯ ಕೇಂದ್ರದಲ್ಲಿ ಸೇವೆ ಅಲಭ್ಯವಾಗಿದೆ. ಈ ಸಮಯದಲ್ಲಿ ಮಹಿಳಾ ಕಾರ್ಮಿಕರ ಚಲವಲನಗಳ ಕುರಿತು ಗಮನ ಹರಿಸಲು ಇ-ಪಾರ್ಟೋಗ್ರಾಫ್ ಮೂಲಕ ಕಾರ್ಮಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು ನಿರ್ಣಾಯಕವಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವ್ಯವಸ್ಥಾಪಕರಿಗೆ ನೈಜ ಡ್ಯಾಶ್‌ಬೋರ್ಡ್ ಸಹಾಯ ಮಾಡುತ್ತದೆ. ಈ ಮೂಲಕ ಆರೋಗ್ಯ ಕಾರ್ಯಕರ್ತರು ಎಲ್ಲಾ ಪ್ರಕರಣಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ಸಹಾಯವಾಗುತ್ತದೆ.

ಅಲ್ಲದೆ ಹೆಚ್ಚಿನ ಅಪಾಯದ ಪ್ರಕರಣಗಳನ್ನು ಗುರುತಿಸಿ ಮತ್ತು ನಿರ್ವಹಿಸಿ, ಹೆಚ್ಚಿನ ಚಿಕಿತ್ಸೆಗೆ ಉನ್ನತ ಮಟ್ಟದ ಆರೈಕೆ ಕೇಂದ್ರಗಳಿಗೆ ಪ್ರಕರಣಗಳನ್ನು ವರ್ಗಾಯಿಸಬಹುದು ಮತ್ತು ಅಗತ್ಯವಿದ್ದರೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ಈ ರೀತಿಯ ಸೇವೆಗಳು ದೇಶಾದ್ಯಂತ ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಲಭ್ಯವಾದರೆ ಜೀವ ಉಳಿಸಲು ಸಹಾಯ ಮಾಡುತ್ತದೆ.

ಪ್ರಸ್ತುತ ಸನ್ನಿವೇಶದಲ್ಲಿ, ಆಶಾ ಮತ್ತು ಎಎನ್‌ಎಂ ಕಾರ್ಯಕರ್ತರ ಮನೆ- ಮನೆ ಭೇಟಿಗೆ ಹೆಚ್ಚು ಒತ್ತು ನೀಡಬೇಕಾಗಿರುವುದು ಕಡ್ಡಾಯವಾಗಿದೆ ಮತ್ತು ಗರ್ಭಿಣಿಯರ ಆರೈಕೆಗಾಗಿ ದೂರಸಂಪರ್ಕ ಮತ್ತು ಸಮಾಲೋಚನೆ ಮಾಡಿ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ನೆರವಾಗುವುದು. ಹಾಗೆಯೇ ಕೋವಿಡ್ ಸಮಯದಲ್ಲಿ ಸ್ಥಿರವಾದ ತಾಯಿಯ ಆರೋಗ್ಯ ಸೇವೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಟೆಕ್-ಚಾಲಿತ ಪರಿಹಾರಗಳು ಸಹಕಾರಿಯಾಗುತ್ತವೆ.

ಆರೋಗ್ಯೇತರ ಕೆಲಸ ಮತ್ತು ಸೂಕ್ಷ್ಮ ರೀತಿಯ ಕೆಲಸದ ಹೊರೆ ಕಡಿಮೆ ಮಾಡಲು ಹೆಚ್ಚುವರಿಯಾಗಿ ಕೋರಿದ ಆರೋಗ್ಯ ಕಾರ್ಯಪಡೆಗೆ ಇ-ತರಬೇತಿ ಕಾರ್ಯವಿಧಾನಗಳು ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಆದರೆ ಕೊವಿಡ್ -19 ಸಂಬಂಧಿತ ಕೆಲಸಗಳಿಗೆ ತಾಯಿಯ ಮತ್ತು ನವಜಾತ ಶಿಶುವಿನ ಆರೈಕೆಯಲ್ಲಿ ನೈಪುಣ್ಯತೆ ಹೊಂದಿರುವ ಆರೋಗ್ಯ ಕಾರ್ಯಕರ್ತರನ್ನು ಬಳಸಬಾರದು.

ಆರೋಗ್ಯ ಮಾಹಿತಿ ಸೂಚಕಗಳು, ವ್ಯಾಪ್ತಿ, ಬಳಕೆ, ರೋಗಗಳ ಕಣ್ಗಾವಲು, ಗುಣಮಟ್ಟದ ಸೇವಾ ವಿತರಣಾ ಮೇಲ್ವಿಚಾರಣೆ, ವರದಿ ಮಾಡುವುದು, ಸಾಕಷ್ಟು ಹಣವನ್ನು ಖಾತರಿಪಡಿಸುವುದು ಇತ್ಯಾದಿಗಳ ಬಗ್ಗೆ ಸಾಕ್ಷ್ಯ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಉತ್ತೇಜಿಸಲು ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಆರೋಗ್ಯ ಮಾಹಿತಿ ವ್ಯವಸ್ಥೆಗಳನ್ನು ಬಲಪಡಿಸಲು ತಾಂತ್ರಿಕ ಪರಿಹಾರಗಳನ್ನು ಸಹ ಬಳಸಬಹುದು.

ಅಂತಿಮವಾಗಿ, ಭಾರತವು ಕೊವಿಡ್ -19 ಕಾಲಘಟ್ಟದಲ್ಲಿ ತನ್ನ ಕೆಳಮಟ್ಟದ ಆರೋಗ್ಯ ರಕ್ಷಣೆಯ ಮೂಲಸೌಕರ್ಯದ ನಡುವೆಯೂ ದೇಶಾದ್ಯಂತ ನವೀನ ತಾಂತ್ರಿಕ ಪರಿಹಾರಗಳ ಮೂಲಕ ತಾಯಿಯ ಆರೋಗ್ಯ ಸೇವೆಯ ಖಾತ್ರಿ ಮತ್ತು ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.