ಶ್ರೀನಗರ: ನ್ಯಾಯ ನಿರಾಕರಣೆಯು ಅಂತಿಮವಾಗಿ ಅರಾಜಕತೆ ಉಂಟು ಮಾಡಬಹುದು ಎಂದು ಸಿಜೆಐ ಎನ್.ವಿ.ರಮಣ ಹೇಳಿದರು. ವಿವಾದಗಳಿಗೆ ಸಂಬಂಧಿಸಿದಂತೆ ನ್ಯಾಯನಿರ್ಣಯ ವ್ಯವಸ್ಥೆಯನ್ನು ತ್ವರಿತಗೊಳಿಸುವುದು ಸದೃಢ ಪ್ರಜಾಪ್ರಭುತ್ವದ ಶ್ರೇಷ್ಠತೆ. ನ್ಯಾಯ ನಿರಾಕರಣೆಯು ಅಂತಿಮವಾಗಿ ಅರಾಜಕತೆಯನ್ನು ಸೃಷ್ಟಿಸುತ್ತದೆ. ನ್ಯಾಯಾಂಗ ಸಂಸ್ಥೆಗಳನ್ನು ಅತಂತ್ರಗೊಳಿಸಿದರೆ ಜನರು ನ್ಯಾಯೇತರ ವ್ಯವಸ್ಥೆಗಳತ್ತ ಚಿತ್ತ ಹರಿಸುವರು ಎಂದು ಅವರು ಎಚ್ಚರಿಸಿದರು.
ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಸಿಜೆಐ, ಪ್ರಜಾಪ್ರಭುತ್ವ ವ್ಯವಸ್ಥೆಯು ಆರೋಗ್ಯದಾಯಕವಾಗಿರಲು ಜನರ ಗೌರವ, ಘನತೆ ಹಾಗು ಹಕ್ಕುಗಳನ್ನು ಗುರುತಿಸುವುದು ಮತ್ತು ಸಂರಕ್ಷಿಸುವ ಕೆಲಸವಾಗಬೇಕು. ಹಾಗಿದ್ದಲ್ಲಿ ಮಾತ್ರವೇ ಸಮಾಜ, ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎಂದರು.
ದೇಶದಲ್ಲಿ ನ್ಯಾಯ ವಿತರಣೆ ವ್ಯವಸ್ಥೆ ಸಂಕೀರ್ಣ ಹಾಗು ದುಬಾರಿಯಾಗಿದೆ. ವೇಗ ಮತ್ತು ಕೈಗೆಟುಕುವ ದರದಲ್ಲಿ ನ್ಯಾಯ ನೀಡಲು ಸಾಧ್ಯವಾಗದೇ ಇರುವುದು ದೇಶದಲ್ಲಿ ಕಾನೂನನ್ನು ಎತ್ತಿ ಹಿಡಿಯವುದು ಮತ್ತು ನಾಗರಿಕರ ಹಕ್ಕುಗಳ ರಕ್ಷಣೆ ಸವಾಲಿನ ಕೆಲಸವಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಅಶ್ವತ್ಥ್ ನಾರಾಯಣ್ ಸಮರ್ಥಿಸಿಕೊಳ್ಳದ ಬಿಜೆಪಿ ಪ್ರ.ಕಾರ್ಯದರ್ಶಿ, ವಕ್ತಾರರಿಗೆ ಅರುಣ್ ಸಿಂಗ್ ಕ್ಲಾಸ್