ETV Bharat / bharat

ಮುಂಬೈ: ಅಕ್ರಮ ಶೂಟಿಂಗ್ ಸ್ಟುಡಿಯೋ ಸಂಕೀರ್ಣ ತೆರವು - ಆದಿತ್ಯ ಠಾಕ್ರೆ

ಮುಂಬೈ ಮಹಾನಗರ ಪಾಲಿಕೆಯು ಅಕ್ರಮ ಶೂಟಿಂಗ್ ಸ್ಟುಡಿಯೋ ಸಂಕೀರ್ಣವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದೆ.

demolition of film studio complex  in mumbai
ಮುಂಬೈ: ಅಕ್ರಮ ಶೂಟಿಂಗ್ ಸ್ಟುಡಿಯೋ ಸಂಕೀರ್ಣ ತೆರವು
author img

By

Published : Apr 7, 2023, 4:28 PM IST

ಮುಂಬೈ (ಮಹಾರಾಷ್ಟ್ರ): ಮುಂಬೈನ ಮಧ್‌ ಮಾಲ್ವಾನಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೂಟಿಂಗ್ ಸ್ಟುಡಿಯೋ ಸಂಕೀರ್ಣದ ತೆರವು ಕಾರ್ಯಾಚರಣೆಯನ್ನು ಮುಂಬೈ ಮಹಾನಗರ ಪಾಲಿಕೆ ಆರಂಭಿಸಿದೆ. ಕಾನೂನು ಮತ್ತು ನಿಯಮ ಬಾಹಿರವಾಗಿ ಸ್ಟುಡಿಯೋ ನಿರ್ಮಿಸಲಾಗಿದೆ ಎಂದು ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ನ್ಯಾಯಾಧೀಕರಣವು ತೆರವಿಗೆ ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ಇದು ಶಾರುಖ್ ಖಾನ್ TIME! ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಕಿಂಗ್‌ ಖಾನ್‌

ಸ್ಟುಡಿಯೋ ಬಗ್ಗೆ ಆರೋಪಗಳೇನು?: ಹಿಂದಿನ ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಪರಿಸರ ಸಚಿವರಾಗಿದ್ದ ಆದಿತ್ಯ ಠಾಕ್ರೆ ಮತ್ತು ಅಸ್ಲಾಂ ಶೇಖ್ ಅವರ ಬೆಂಬಲದಿಂದಾಗಿ ಮಾಲ್ವಾನಿ ಪ್ರದೇಶದಲ್ಲಿ ಅನಧಿಕೃತವಾಗಿ ಬಾಲಾಜಿ ಶೂಟಿಂಗ್ ಸ್ಟುಡಿಯೋ ಸಂಕೀರ್ಣ ನಿರ್ಮಾನಿಸಲಾಗಿದೆ ಎಂದು ಕಿರಿಟ್ ಸೋಮಯ್ಯ ಆರೋಪಿಸಿದ್ದಾರೆ. ಇದರ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಮುಂಬೈ ಮಹಾನಗರ ಪಾಲಿಕೆಗೆ ಪದೇ ಪದೇ ದೂರು ನೀಡಿದ್ದರು. ಅಲ್ಲದೇ, ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸಿನಿಮಾ ಸೆಟ್‌ಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಇಲ್ಲಿ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು, ನಂತರ ಸಿಮೆಂಟ್ ಮತ್ತು ಕಾಂಕ್ರೀಟ್​ನ ಬಂಗಲೆಗಳು ಮತ್ತು ಸ್ಟುಡಿಯೋಗಳಾಗಿ ಪರಿವರ್ತಿಸಲಾಗಿದೆ. ಸಮುದ್ರ ತೀರದ ಮಧ್‌ ಮಾಲ್ವಾನಿ ಪ್ರದೇಶದಲ್ಲಿ ಇಂತಹ ಹಲವು ಅಕ್ರಮ ಸ್ಟುಡಿಯೋಗಳಿವೆ. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರು.

ನಕಲಿ ದಾಖಲೆಗಳ ಬಳಕೆ: ಅಲ್ಲದೇ, ಸಾವಿರಾರು ಚದರ ಮೀಟರ್‌ನಲ್ಲಿ ಹರಡಿರುವ ಈ ಸ್ಟುಡಿಯೋಗಳನ್ನು ನಕಲಿ ದಾಖಲೆಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಈ ಅಕ್ರಮದಲ್ಲಿ ಮುಂಬೈ ಪಾಲಿಕೆ ಅಧಿಕಾರಿಗಳು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (MCZMA) ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದೂ ಸೋಮಯ್ಯ ಆರೋಪಿಸಿದ್ದಾರೆ. ಕೊನೆಗೆ ಈ ವಿಷಯವು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದವರೆಗೂ ಹೋದ ನಂತರ ತೆರವು ಮಾಡುವಂತೆ ಪಾಲಿಕೆಗೆ ಆದೇಶಿಸಲಾಗಿತ್ತು. ಈ ಸ್ಟುಡಿಯೋಗಳನ್ನು ಕೊರೊನಾ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ 'ದಸರಾ' ಸಂಭ್ರಮ: ನ್ಯಾಚುರಲ್​ ಸ್ಟಾರ್ ನಾನಿ ಅಭಿಮಾನಿಗಳು ಖುಷ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.