ಸೋನಿಪತ್(ಹರಿಯಾಣ): ಸೋನಿಪತ್ನಲ್ಲಿ ಮಹಿಳೆಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರವೆಸದ್ದಾನೆ. ವ್ಯಕ್ತಿಯೋರ್ವನ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಈ ದುಷ್ಕೃತ್ಯ ನಡೆದಿದೆ.
ಸಂತ್ರಸ್ತೆ ಮೂಲತಃ ದೆಹಲಿ ಮೂಲದವಳೆಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಹರಿಯಾಣದ ಸೋನಿಪತ್ನಲ್ಲಿ ಈಕೆ ವಾಸವಾಗಿದ್ದಾಳೆ. ಪರಿಚಿತ ವ್ಯಕ್ತಿಯೋರ್ವನ ಹುಟ್ಟುಹಬ್ಬದಲ್ಲಿ ಭಾಗಿಯಾಗಲು ಈಕೆ ಹೋಟೆಲ್ಗೆ ತೆರಳಿದ್ದಾಳೆ. ಈ ವೇಳೆ ಆಕೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ.
ಈ ಹಿಂದೆ ಫೇಸ್ಬುಕ್ ಮೂಲಕ ಮಹಿಳೆ ಹಾಗೂ ವ್ಯಕ್ತಿ ಪರಿಚಯವಾಗಿದ್ದರು. ಇದಾದ ಬಳಿಕ ಮೇಲಿಂದ ಮೇಲೆ ಚಾಟಿಂಗ್ ಮಾಡುತ್ತಿದ್ದರಂತೆ. ಇದೀಗ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿರುವ ಕಾಮುಕ ಈ ದುಷ್ಕೃತ್ಯ ವೆಸಗಿದ್ದಾನೆ.
ಇದನ್ನೂ ಓದಿರಿ: Digital Indiaಗೆ ಆರು ವರ್ಷ: ಟೆಕ್ನಾಲಜಿ ಕುರಿತು ಪ್ರಧಾನಿ ಮೋದಿ ಹೇಳಿದ್ದಿಷ್ಟು?
ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗೋಸ್ಕರ ಶೋಧಕಾರ್ಯ ನಡೆಸುತ್ತಿದ್ದಾರೆ. ಜತೆಗೆ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.