ನವದೆಹಲಿ: ರಾಷ್ಟ್ರ ರಾಜಧಾನಿ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಶುಕ್ರವಾರ ಬೆಳಗ್ಗೆ ಮಳೆಯಾಗಿದ್ದು, ತಾಪಮಾನ ಕಡಿಮೆಯಾಗಿದೆ.
ಭಾರತ ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಬೆಳಗ್ಗೆ 8: 30 ಕ್ಕೆ 20.4 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಬೆಳ್ಳಂ ಬೆಳಗ್ಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿರುವುದರಿಂದ ಮತ್ತಷ್ಟು ತಾಪಮಾನ ಕಡಿಮೆಯಾಗಿದೆ.
ಶ್ರೀನಗರ, ದೆಹಲಿ, ಪ್ಯಾರಡೀಪ್ ಮತ್ತು ಉಪಗ್ರಹ ಚಿತ್ರಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಉತ್ತರಾಖಂಡ್, ಪಂಜಾಬ್, ಚಂಡೀಗಢ ಸೇರಿದಂತೆ ಕೆಲವು ಭಾಗಗಳಲ್ಲಿ ಮೋಡಗಳು ಕವಿದಿರುವುದಾಗಿ ಐಎಂಡಿ ಹೇಳಿದೆ.
ದೆಹಲಿ, ಮಧ್ಯಪ್ರದೇಶ, ಪೂರ್ವ ಮತ್ತು ಉತ್ತರ ರಾಜಸ್ಥಾನ, ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ, ಕೇರಳ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಕೆಲ ಭಾಗಗಳಲ್ಲಿ ಮುಂದಿನ 3-4 ಗಂಟೆಗಳಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.