ETV Bharat / bharat

Delhi Murder: ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.. ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆ - ETV Bharath Kannada news

ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ನೆನಪು ಮಾಸುವ ಮುನ್ನ ಮತ್ತೊಂದು ಭೀಕರ ಹತ್ಯೆಯಾಗಿದೆ. 16 ವರ್ಷದ ಯುವತಿಯನ್ನು ಚಾಕುವಿನಿಂದ ಚುಚ್ಚಿ ಕೊಲೆಮಾಡಲಾಗಿದೆ.

delhi shahbad dairy minor girl murder
ಅಪ್ರಾಪ್ತ ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ.
author img

By

Published : May 29, 2023, 3:21 PM IST

Updated : May 29, 2023, 4:36 PM IST

ಅಪ್ರಾಪ್ತ ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನ ದಿನಕ್ಕೂ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದ ಕ್ಯಾಪಿಟಲ್​ ಸಿಟಿಯಲ್ಲಿ ಶದ್ಧಾ ವಾಕರ್​​ ಪ್ರಕರಣ ಮಾಸುವ ಮುನ್ನ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳನ್ನು ಪ್ರಿಯಕರ 21 ಬಾರಿ ಚುಚ್ಚಿದ್ದಲ್ಲದೇ 5 ಬಾರಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಮೃತಳನ್ನು ಸಾಕ್ಷಿ ಎಂದೂ, ಹತ್ಯೆ ಮಾಡಿದವನನ್ನು ಸಾಹಿಲ್​ ಎಂದು ಗುರುತಿಸಲಾಗಿದೆ.

ಘಟನೆಯ ಸಿಸಿಟಿವಿ ದೃಶ್ಯ ಆಧರಿಸಿ ದೂರು ದಾಖಲಿಸಿಕೊಂಡ ಪೊಲೀಸರು. ಹಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ಯೆ ಮಾಡಿದವ ಉತ್ತರ ಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ. ದೆಹಲಿ ಪೊಲೀಸರು ಸೋಮವಾರ ಮಧ್ಯಾಹ್ನ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಆರೋಪಿ ಸಾಹಿಲ್‌ನನ್ನು ಬಂಧಿಸಿದ್ದಾರೆ.

ಘಟನೆ: ಭಾನುವಾರ ರಾತ್ರಿ ದೆಹಲಿಯ ಶಹಬಾದ್ ಡೈರಿಯ ಇ ಬ್ಲಾಕ್‌ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಬಾಲಕಿ ತನ್ನ ಸ್ನೇಹಿತೆ ಜೊತೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದರು. ಪಾರ್ಟಿ ಹೋಗುವ ವೇಳೆಯೇ ಅಪ್ರಾಪ್ತೆಯನ್ನು ಹತ್ಯೆ ಮಾಡಲಾಗಿದೆ. ಕೊಲೆ ಮಾಡುತ್ತಿರುವ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

delhi shahbad dairy minor girl murder
ಆರೋಪಿ ಸಾಹಿಲ್​

ಈ ಭಯಾನಕ ದೃಶ್ಯ ಎಂತಹ ಕಲ್ಲು ಹೃದಯಕ್ಕೂ ನಡುಕ ಹುಟ್ಟಿಸುವಂತಿದೆ. 21 ಬಾರಿ ಚುಚ್ಚಿದ್ದಲ್ಲದೇ 5 ಬಾರಿ ಕಲ್ಲಿನಿಂದ ತಲೆಯ ಮೇಲೆ ಗಂಭಿರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇವಲ 21 ಸೆಕೆಂಡ್​ನಲ್ಲಿ ಆತ ಈ ಕ್ರೌರ್ಯವನ್ನು ಮೆರೆದಿದ್ದಾನೆ. ಆದರೆ, ಈ ಘಟನೆ ನಡೆಯುವಾಗ ಸುತ್ತಮುತ್ತಲಿನ ಜನ ತಮಗೆನೂ ಸಂಬಂಧವೇ ಇಲ್ಲ ಎಂಬಂತೆ ಓಡಾಡುತ್ತಿರುವ ದೃಶ್ಯ ಜನ ಇಷ್ಟೊಂದು ಸ್ವಾರ್ಥಿಗಳೇ ಎಂಬಂತೆ ಬಾಸವಾಗುವಂತೆ ಮಾಡಿದೆ.

ಹತ್ಯೆಗೊಳಗಾದವಳ ಹೆಸರು ಸಾಕ್ಷಿ ಎಂದು ಹೇಳಲಾಗಿದೆ. ಸಾಕ್ಷಿ ಭಾವನಾ ಮನೆಯ ಹೊರಗೆ ನಿಂತಿದ್ದಳು. ಆಗ ಒಬ್ಬ ಯುವಕ ಬಂದು ಪಕ್ಕಕ್ಕೆ ಮಾತನಾಡುವ ನೆಪ ಹೇಳಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ, ಕೋಪ ಮಿತಿ ಮೀರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಸಾಕ್ಷಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾಕ್ಷಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಿದ್ದಾರೆ. ಆದರೆ, ವೈದ್ಯರು ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಸಾಕ್ಷಿಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

ಕೊಲೆ ಮಾಡಿದವನನ್ನು ಸಾಹಿಲ್​ ಎಂದು ಗುರುತಿಸಲಾಗಿದೆ. ಸಾಹಿಲ್​ ಸಾಕ್ಷಿಯ ಸ್ನೇಹಿತ. ಶನಿವಾರ ಇಬ್ಬರ ನಡುವೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸುವ ಬಗ್ಗೆ ಗಲಾಟೆಯಾಗಿತ್ತು. ಆದರೆ, ಸಾಹಿಲ್ ತನ್ನ​ ಮಾತನ್ನು ಧಿಕ್ಕರಿಸಿ ಹುಟ್ಟುಹಬ್ಬದ ಪಾರ್ಟಿಗೆ ತೆರಳುತ್ತಿದ್ದಾಳೆ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ಖಂಡನೆ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಟ್ವೀಟ್ ಮಾಡಿದ್ದಾರೆ ಮತ್ತು ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. "ದೆಹಲಿಯ ಶಹಬಾದ್ ಡೈರಿಯಲ್ಲಿ, ಅಪ್ರಾಪ್ತ ಅಮಾಯಕ ಯುವತಿಯನ್ನು ಚಾಕುವಿನಿಂದ ಇರಿದು ಕೊಂದು ನಂತರ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಈ ಘಟನೆ ಎಲ್ಲಾ ಮಿತಿಗಳನ್ನು ದಾಟಿದೆ. ಇಷ್ಟು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಇದಕ್ಕಿಂತ ಭಯಾನಕವಾದದ್ದನ್ನು ನಾನು ನೋಡಿಲ್ಲ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಲಿವ್​ ಇನ್​ ರಿಲೇಶನ್​ ಶಿಪ್: ಇಸ್ಲಾಂಗೆ ಮತಾಂತರ ಒತ್ತಡ, ಗರ್ಭಿಣಿ ಸಾವು; ಇಬ್ಬರ ಬಂಧನ

Last Updated : May 29, 2023, 4:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.