ETV Bharat / bharat

ಖಾಲಿದ್ ವಿರುದ್ಧ ಸಲ್ಲಿಸಿರುವ ಚಾರ್ಜ್​ಶೀಟ್​ ವೆಬ್​ ಸರಣಿಯಿದ್ದಂತೆ: ವಕೀಲ ತ್ರಿದೀಪ್​ ಪಾಯ್ಸ್​ - ತ್ರಿದೀಪ್​ ಪಾಯ್ಸ್​

ದೆಹಲಿಯ ಜೆಎನ್​ಯು(JNU) ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ವಿರುದ್ಧ ಕೋರ್ಟ್​ಗೆ ಸಲ್ಲಿಕೆಯಾಗಿರುವ ಚಾರ್ಜ್​ಶೀಟ್​​ ವೆಬ್​ ಸೀರೀಸ್ ಇದ್ದಂತೆ ಎಂದು ವಕೀಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಉಮರ್ ಖಾಲಿದ್
ಉಮರ್ ಖಾಲಿದ್
author img

By

Published : Sep 4, 2021, 8:48 AM IST

ನವದೆಹಲಿ: ದೆಹಲಿ ಗಲಭೆ ಸಂಚು ಪ್ರಕರಣ ಸಂಬಂಧ ಉಗ್ರ ನಿಗ್ರಹ ಕಾನೂನು (UAPA) ಅಡಿಯಲ್ಲಿ ಬಂಧಿಸಲಾಗಿರುವ ಜೆಎನ್​ಯು(JNU) ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್ ಸಲ್ಲಿಕೆಯಾಗಿದೆ.

ಈ ಚಾರ್ಜ್​ಶೀಟ್​ ವೆಬ್​ ಸೀರೀಸ್ ಅಥವಾ ಮಾಧ್ಯಮದಲ್ಲಿ ಬರುವ ಸ್ಕ್ರಿಪ್ಟ್​ ಓದಿದಂತೆ ಭಾಸವಾಗುತ್ತದೆ ಎಂದು ಖಾಲಿದ್ ಪರ ವಕೀಲರು ಅಭಿಪ್ರಾಯಪಟ್ಟಿದ್ದಾರೆ. 2020ರ ಫೆಬ್ರವರಿ ಗಲಭೆಗೆ ಸಂಚು ರೂಪಿಸಿದ್ದ ಆರೋಪದಡಿ ಖಾಲಿದ್ ಹಾಗೂ ಇತರರನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ 53 ಮಂದಿ ಮೃತಪಟ್ಟಿದ್ದು, 700 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಜಾಮೀನು ಕೋರಿ ಖಾಲಿದ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಖಾಲಿದ್ ಪರ ವಾದಿಸಿದ ಹಿರಿಯ ವಕೀಲ ತ್ರಿದೀಪ್ ಪಾಯ್ಸ್​, ತನ್ನ ಕಕ್ಷಿದಾರರ ಮೇಲೆ ಯಾವುದೇ ವಾಸ್ತವಿಕ ಆಧಾರಿವಿಲ್ಲದೆ, ಆರೋಪಗಳನ್ನು ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಯ ಕಲ್ಪನೆಯ ಫಲವೇ ಚಾರ್ಜ್​ಶೀಟ್ ಎಂದಿದ್ದಾರೆ.

ಪೊಲೀಸರು ಸಲ್ಲಿಸಿರುವ ಚಾರ್ಜ್​ ಶೀಟ್, ಹ್ಯಾರಿ ಪಾಟರ್​ ಸೀರೀಸ್​​ನ​​ ಖಳನಾಯಕ ವೋಲ್ಡ್ ​ಮಾರ್ಟ್​ನ ಪಾತ್ರದಂತಿದ್ದು, ಅದರಲ್ಲಿ ಉಲ್ಲೇಖಿಸಿರುವ ಅಂಶಗಳೆಲ್ಲ ನಿರಾಧಾರ ಎಂದಿದ್ದಾರೆ. ಸಾಕ್ಷ್ಯಗಳನ್ನು ಸಂಗ್ರಹಿಸಿ ಚಾರ್ಜ್​ ಶೀಟ್ ಬರೆಯಬೇಕು. ಆದರೆ, ಪೊಲೀಸರು ವೆಬ್​ ಸರಣಿ ( ಫ್ಯಾಮಿಲ್ ಮ್ಯಾನ್-2 ವೆಬ್​ ಸರಣಿಗೆ ಹೋಲಿಸಿ) ಬರೆದಿದ್ದಾರೆ ಎಂದು ವಕೀಲ ಪಾಯ್ಸ್ ಆರೋಪಿಸಿದ್ದಾರೆ.

ಉಮರ್ ಭಾಷಣಗಳಲ್ಲಿ ಕಾನೂನುಬಾಹಿರ ಕ್ರಮ, ದೇಶದ್ರೋಹ, ದ್ವೇಷ ಅಥವಾ ಯಾವುದೇ ರೀತಿಯ ಕಾನೂನುಬಾಹಿರತೆಗೆ ಕಾರಣವಾಗಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ವಾದವನ್ನಾಲಿಸಿದ ಹೆಚ್ಚುವರಿ ಸೆಷನ್​ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್​ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್​ 6 ಕ್ಕೆ ಮುಂದೂಡಿದರು.

ಇದನ್ನೂ ಓದಿ: ಆಜಾದಿ ಆಂದೋಲನದಲ್ಲಿ ಅಚ್ಚಳಿಯದ ಜಲಿಯನ್ ವಾಲಾಬಾಗ್.. ಸ್ವಾತಂತ್ರ್ಯದ ಕಿಡಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿತು ನರಮೇಧ..

ಖಾಲಿದ್​​ ಜಾಮೀನು ಪಡೆಯಲು ಯಾವುದೇ ಅರ್ಹತೆ ಹೊಂದಿಲ್ಲ ಎಂದು ದೆಹಲಿ ಪೊಲೀಸರು ಅಭಿಪ್ರಾಯ ಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.