ETV Bharat / bharat

ಪೊಲೀಸರಿಗೆ ಪಿಸ್ತೂಲ್‌ನಿಂದ ಬೆದರಿಸಿದ ದೆಹಲಿ ಗಲಭೆಕೋರನಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ! ವಿಡಿಯೋ - ಶಾರುಖ್ ಪಠಾಣ್​ಗೆ ಅದ್ಧೂರಿ ಸ್ವಾಗತ

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಗೆ ಪಿಸ್ತೂಲ್‌ನಿಂದ ಬೆದರಿಸಿ ಬಂಧಿತನಾಗಿರುವ ಆರೋಪಿ ಶಾರುಖ್ ಪಠಾಣ್, ಮೇ 23 ರಂದು 4 ಗಂಟೆಗಳ ಪೆರೋಲ್ ಮೇಲೆ ಪೋಷಕರನ್ನು ಭೇಟಿ ಮಾಡಲು ತನ್ನ ನಿವಾಸಕ್ಕೆ ಆಗಮಿಸಿದ್ದಾನೆ. ಈ ವೇಳೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಾರುಖ್ ಪಠಾಣ್​
ಶಾರುಖ್ ಪಠಾಣ್​
author img

By

Published : May 27, 2022, 12:26 PM IST

Updated : May 27, 2022, 12:37 PM IST

ನವದೆಹಲಿ: ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಉದ್ದೇಶಪೂರ್ವಕವಾಗಿ ನಡೆಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಯತ್ನಿಸಿ ಬಂಧಿತನಾಗಿರುವ ಆರೋಪಿ ಶಾರುಖ್ ಪಠಾಣ್ ಮೇ 23 ರಂದು 4 ಗಂಟೆಗಳ ಪೆರೋಲ್ ಮೇಲೆ ತನ್ನ ನಿವಾಸಕ್ಕೆ ಆಗಮಿಸಿದ್ದ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ದಂಗೆಗೆ ಪ್ರಚೋದನೆ ನೀಡಿದ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ ಪಿಸ್ತೂಲ್ ಹಿಡಿದು, ಪೊಲೀಸ್ ಅಧಿಕಾರಿ ದೀಪಕ್ ದಹಿಯಾ ಮೇಲೆ ಗುಂಡು ಹಾರಿಸಲು ಯತ್ನಿಸಿದ ಆರೋಪಿ ಶಾರುಖ್ ಪಠಾಣ್, ತನಗೆ ಜಾಮೀನು ನೀಡುವಂತೆ ಈ ಹಿಂದೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದ. 'ನನ್ನ​ 65 ವರ್ಷದ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರನ್ನು ನೋಡಿಕೊಳ್ಳಲು, ತಂದೆಯ ಆರೈಕೆ ಮಾಡಲು ಯಾರೂ ಇಲ್ಲ. ಹೀಗಾಗಿ ಮಾನವೀಯತೆ ಆಧಾರದಲ್ಲಿ ಜಾಮೀನು ನೀಡಬೇಕು' ಮನವಿ ಮಾಡಿದ್ದ. ಆದರೆ ಕೋರ್ಟ್ ಈತನ ಮನವಿಯನ್ನು ತಿರಸ್ಕರಿಸಿತ್ತು.

  • #WATCH | Accused Shahrukh Pathan, who pointed a gun at a policeman during anti-CAA protests gets a welcome during 4-hour parole on his arrival at his residence on May 23. He got parole to meet his ailing father.

    (The viral video has been confirmed by police) pic.twitter.com/Fc5HjuSdy2

    — ANI (@ANI) May 27, 2022 " class="align-text-top noRightClick twitterSection" data=" ">

ವರದಿಗಳ ಪ್ರಕಾರ, ನ್ಯಾಯಾಲಯವು ಮಾನವೀಯ ಮೇರೆಗೆ ದೆಹಲಿ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ನಾಲ್ಕು ಗಂಟೆಗಳ ಕಾಲ ಪೆರೋಲ್‌ ಮೇಲೆ ನಿವಾಸಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿತ್ತು. ಪೆರೋಲ್‌ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ ಆರೋಪಿಗೆ ಸ್ಥಳೀಯ ಮುಸ್ಲಿಂ ಸಮುದಾಯವರು ಅದ್ಧೂರಿಯಾಗಿ ಸ್ವಾಗತ ಮಾಡಿದರು. ಶಾರುಖ್ ಪಠಾಣ್ ಆಗಮಿಸುತ್ತಿದ್ದಂತೆ ಶಿಳ್ಳೆ, ಕೇಕೆ ಹಾಕಿದರು.

ಪಠಾಣ್‌ಗೆ ತನ್ನ ವಯಸ್ಸಾದ ಪೋಷಕರನ್ನು ಭೇಟಿ ಮಾಡಲು ಮಾತ್ರ ಅನುಮತಿ ನೀಡಲಾಗಿದೆ. ಈ ವೇಳೆ ಬೇರೆ ಯಾರನ್ನೂ ಭೇಟಿ ಮಾಡಬಾರದು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಸೂಚನೆ ನೀಡಿತ್ತು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಅವರ ಸಮುದಾಯದ ಅನೇಕರು ಪಠಾಣ್‌ಗಾಗಿ ಗುಂಪು ಸೇರಿರುವುದನ್ನು ಕಾಣಬಹುದು.

ಇದನ್ನೂ ಓದಿ: ಇದು ಅತೀಯಾಯ್ತು.. ಮದುವೆ ಸಮಾರಂಭದಲ್ಲಿ ಕನ್ನಡ ಹಾಡಿಗೆ ವಿರೋಧ.. ವಧು-ವರರ ಮೇಲೆ MES ಪುಂಡರಿಂದ ಹಲ್ಲೆ..

Last Updated : May 27, 2022, 12:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.