ETV Bharat / bharat

ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣಕ್ಕಾಗಿ ಪಿಂಕ್ ಪೊಲೀಸ್ ಚೌಕಿ

author img

By

Published : Mar 8, 2022, 10:34 AM IST

ಲೈಂಗಿಕ ಕಾರ್ಯಕರ್ತೆಯರನ್ನು ಸಬಲೀಕರಣಗೊಳಿಸುವ ಮತ್ತು ಇವರಿಗೆ ಸಹಾಯ ಮಾಡುವ ಉದ್ದೇಶದಿಂದ ಪಿಂಕ್ ಪೋಲಿಸ್ ಚೌಕಿಯನ್ನು ಸ್ಥಾಪಿಸಿರುವುದಾಗಿ ದೆಹಲಿಯ ಪೊಲೀಸರು ಹೇಳಿದ್ದಾರೆ. ಲೈಂಗಿಕ ಕಾರ್ಯಕರ್ತೆಯರಿಗೆ ವಿವಿಧ ರೀತಿಯ ವೃತ್ತಿಪರ ತರಬೇತಿಗಳನ್ನು ನೀಡಿ ತಮ್ಮ ವೃತ್ತಿ ಬದಲಾಯಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.

delhi-police-set-up-pink-booth-for-sex-workers-at-shraddhanand-marg
ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣಕ್ಕಾಗಿ ದೆಹಲಿ ಪೊಲೀಸರಿಂದ ಪಿಂಕ್ ಪೊಲೀಸ್ ಚೌಕಿ

ನವದೆಹಲಿ: ದೆಹಲಿಯಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಪಿಂಕ್ ಪೊಲೀಸ್ ಚೌಕಿಯನ್ನು ಸ್ಥಾಪಿಸಲಾಗಿದೆ. ಲೈಂಗಿಕ ಕಾರ್ಯಕರ್ತೆಯರನ್ನು ಸಬಲೀಕರಣಗೊಳಿಸುವ ಮತ್ತು ಇವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಪಿಂಕ್ ಪೋಲಿಸ್ ಚೌಕಿಯನ್ನು ಸ್ಥಾಪಿಸಿರುವುದಾಗಿ ದೆಹಲಿಯ ಪೊಲೀಸರು ಹೇಳಿದ್ದಾರೆ.

ದೆಹಲಿಯ ಶ್ರದ್ಧಾನಂದ ಮಾರ್ಗದಲ್ಲಿ ತುಂಬಾ ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ. ಇವರಿಗೆ ವಿವಿಧ ರೀತಿಯ ವೃತ್ತಿಪರ ತರಬೇತಿಗಳನ್ನು ನೀಡಿ ತಮ್ಮ ವೃತ್ತಿಯನ್ನು ಬದಲಾಯಿಸಿಕೊಳ್ಳಲು ಸಹಕಾರಿಯಾಗಲು ಈ ಯೋಜನೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ, ಜೊತೆಗೆ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಿ ಇವರ ವೃತ್ತಿಪರ ಕೌಶಲ್ಯಗಳನ್ನು ಉತ್ತೇಜಿಸಲಾಗುವುದು ಎಂದು ಡಿಸಿಪಿ ಶ್ವೇತಾ ಚೌಹಾಣ್ ಹೇಳಿದ್ದಾರೆ.

ದೆಹಲಿಯ ಶ್ರದ್ಧಾನಂದ್ ಮಾರ್ಗದಲ್ಲಿ ಈ ಚೌಕಿಯನ್ನು ಫೆಬ್ರವರಿ 18 ರಂದು ಸ್ಥಾಪಿಸಲಾಗಿದೆ ಎಂದು ಇದೇ ವೇಳೆ ಹೇಳಿದ್ದಾರೆ.

ಓದಿ : ಹಿಮಾಚಲ ಪ್ರದೇಶ: ರೋಹ್ಲಿ ಜಿಲ್ಲೆಯಲ್ಲಿ ಹಿಮಪಾತ: ರಸ್ತೆ ಸಂಚಾರದಲ್ಲಿ ವ್ಯತ್ಯಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.