ETV Bharat / bharat

ತೆರಿಗೆ ಆಡಿಟ್​ ಹೆಸರಲ್ಲಿ ವಿದೇಶಿಗರಿಗೆ ವಂಚನೆ.. ನಕಲಿ ಕಾಲ್​ಸೆಂಟರ್​​ನ 21 ಮಂದಿ ಅರೆಸ್ಟ್

ದಾಳಿಯ ವೇಳೆ ಕಾಲ್​ಸೆಂಟರ್​​ನಲ್ಲಿದ್ದ 34 ಕಂಪ್ಯೂಟರ್​​ ಮತ್ತು ಹಲವು ಆನ್​​ಲೈನ್ ಪರಿಕರಗಳ ಜಪ್ತಿ ಮಾಡಲಾಗಿದೆ. ಈ ಕೃತ್ಯಕ್ಕಾಗಿ ಐಬೀಮ್, ವಿಐಸಿಐ ಡೈಯಲ್, ವಿಒಎಸ್​ ವರ್ಡ್‌ಫೋನ್, ಫಾರಿನ್ ಪೇಮೆಂಟ್ ಗೇಟ್​​ವೇ ಅಂತಹ ದುಬಾರಿ ವಿದೇಶಿ ಸಾಫ್ಟ್​​ವೇರ್​ಗಳನ್ನು ಅವರು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ..

ತೆರಿಗೆ ಆಡಿಟ್​ ಹೆಸರಲ್ಲಿ ವಿದೇಶಿಗರಿಗೆ ವಂಚನೆ

author img

By

Published : Jun 6, 2021, 8:51 PM IST

ನವದೆಹಲಿ : ತೆರಿಗೆ ವ್ಯತ್ಯಾಸಗಳ ಸರಿಪಡಿಸುವ ಸೋಗಿನಲ್ಲಿ ವಿದೇಶಿಗರಿಗೆ ಕರೆ ಮಾಡುವ ಮೂಲಕ ವಂಚನೆ ಎಸಗುತ್ತಿದ್ದ 21 ಮಂದಿಯನ್ನು ದೆಹಲಿಯ ನಾರೈನಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇಂಗ್ಲೆಂಡ್​​ನ ಲೆಕ್ಕ ಪರಿಶೋಧನಾ ಅಧಿಕಾರಿಗಳೆಂದು ವಿದೇಶಿಗರಿಗೆ ಕರೆ ಮಾಡಿ ವಂಚನೆ ಎಸಗುತ್ತಿದ್ದ ನಕಲಿ ಅಂತಾರಾಷ್ಟ್ರೀಯ ಕಾಲ್​ ಸೆಂಟರ್ ಇದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತೆರಿಗೆ ಪಾವತಿ ವೇಳೆ ಕಂಡು ಬರುವ ವ್ಯತ್ಯಾಸಗಳ ಆಡಿಟ್ ಮಾಡಿಕೊಡುವ ನೆಪದಲ್ಲಿ ಜನರಿಂದ ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ದಾಳಿ ವೇಳೆ ತಮ್ಮನ್ನು ಹೆಚ್​​​ಎಂಆರ್​ಸಿ (ಹರ್ ಮ್ಯಾಜೆಸ್ಟಿ ರೆವಿನ್ಯೂ ಅಂಡ್ ಕಷ್ಟಮ್ಸ್, ಯೂನೈಟೆಡ್ ಕಿಂಗ್​ಡಮ್​) ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆರಿಗೆ ಆಡಿಟ್​ ಹೆಸರಲ್ಲಿ ವಿದೇಶಿಗರಿಗೆ ವಂಚನೆ

ದಾಳಿಯ ವೇಳೆ ಕಾಲ್​ಸೆಂಟರ್​​ನಲ್ಲಿದ್ದ 34 ಕಂಪ್ಯೂಟರ್​​ ಮತ್ತು ಹಲವು ಆನ್​​ಲೈನ್ ಪರಿಕರಗಳನ್ನ ಜಪ್ತಿ ಮಾಡಲಾಗಿದೆ. ಈ ಕೃತ್ಯಕ್ಕಾಗಿ ಐಬೀಮ್, ವಿಐಸಿಐ ಡೈಯಲ್, ವಿಒಎಸ್​ ವರ್ಡ್​ ಫೋನ್, ಫಾರಿನ್ ಪೇಮೆಂಟ್ ಗೇಟ್​​ವೇ ಅಂತಹ ದುಬಾರಿ ವಿದೇಶಿ ಸಾಫ್ಟ್​​ವೇರ್​ಗಳನ್ನು ಅವರು ಬಳಕೆ ಮಾಡುತ್ತಿದ್ದರು. ಇದಲ್ಲದೆ ಇಂಗ್ಲೆಂಡ್​ನಲ್ಲಿ ತೆರಿಗೆ ಪಾವತಿಸುವ ಜನರ ದಾಖಲೆಗಳು ಸಹ ದಾಳಿ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಕೊಡಕರ ಕಪ್ಪು ಹಣ ಪ್ರಕರಣ : ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್​ ಪುತ್ರನ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.