ನವದೆಹಲಿ: ಆಮ್ಲಜನಕ ಸಿಲಿಂಡರ್ಗಳೆಂದು ನಂಬಿಸಿ, ಅಗ್ನಿಶಾಮಕ ಸಿಲಿಂಡರ್ಗಳನ್ನು ಮಹಿಳೆಯೊಬ್ಬಳಿಗೆ ಮಾರಿದ್ದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಉತ್ತಮ್ ನಗರ್ ಪ್ರದೇಶದಲ್ಲಿ ಮಹಿಳೆಯಾದ ಗೀತಾ ಅರೋರಾ ಎಂಬಾಕೆಯ ಸಂಬಂಧಿಯೊಬ್ಬರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಮಹಿಳೆ ಆಮ್ಲಜನಕ ಸಿಲಿಂಡರ್ಗಾಗಿ ಹುಡುಕಾಡುತ್ತಿದ್ದ ವೇಳೆ ಆರೋಪಿಗಳಿಬ್ಬರು ಅಗ್ನಿಶಾಮಕ ಸಿಲಿಂಡರ್ಗಳನ್ನೇ ಆಮ್ಲಜನಕ ಸಿಲಿಂಡರ್ಗಳೆಂದು ಮಾರಿದ್ದರು.
ಇದನ್ನೂ ಓದಿ: ಸ್ಕ್ರ್ಯಾಪ್ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!
ಕೆಲವು ಸಮಯದ ನಂತರ ತಾನು ಮೋಸ ಹೋಗಿರುವುದಾಗಿ ಅರಿತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಉತ್ತಮ್ ನಗರ್ ಪೊಲೀಸ್ ಮತ್ತು ಡಿಪಾರ್ಟ್ಮೆಂಟ್ ಆಫ್ ವರ್ಕ್ಫೋರ್ಸ್ ಡೆವೆಲಪ್ಮೆಂಟ್ನ ವಿಶೇಷ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ, ಕರೆ ಮಾಹಿತಿ ಆಧರಿಸಿ, ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ ಮತ್ತು ಆಯುಷ್ ಎಂಬುವವರನ್ನು ಸೆರೆ ಹಿಡಿಯಲಾಗಿದೆ. ಇದರ ಜೊತೆಗೆ 5 ಅಗ್ನಿಶಾಮಕ ಸಿಲಿಂಡರ್ಗಳನ್ನು ಜಪ್ತಿ ಮಾಡಲಾಗಿದೆ.