ನವದೆಹಲಿ : ಫೇಸ್‌ಬುಕ್‌ನಲ್ಲಿ 15 ವರ್ಷದ ಬಾಲಕಿಯೊಂದಿಗೆ 18 ವರ್ಷದ ಯುವಕ ಸ್ನೇಹ ಬೆಳೆಸಿ ಆಕೆಯನ್ನು ಮದುವೆಗೆ ಒತ್ತಾಯಿಸಿ ಅಪಹರಿಸಿದ್ದಾನೆಂಬ ಆರೋಪದ ಮೇರೆಗೆ ಆತನನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆ ಅಕ್ಟೋಬರ್ 23ರಂದು ರಾಜೌರಿ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪುತ್ರಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ ನಂತರ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಅಂದು ನಾಪತ್ತೆಯಾದ ಬಾಲಕಿ ಸದ್ಯ ಪತ್ತೆಯಾಗಿದ್ದಾಳೆ.
ರಾಜಸ್ಥಾನದ ರತ್ನಕಿ ಗ್ರಾಮದ ನಿವಾಸಿ ಶೋಯಾಬ್ ಖಾನ್ ಅಕ್ಟೋಬರ್ 22ರಂದು ದೆಹಲಿಗೆ ತೆರಳಿದ್ದಾನೆ. ಫೇಸ್‌ಬುಕ್‌ನಲ್ಲಿ ಪರಿಚಯಳಾಗಿದ್ದ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ನಂತರ ಆಕೆಯನ್ನು ಬಿಹಾರ ಮತ್ತು ಉತ್ತರಪ್ರದೇಶಕ್ಕೆ ಕರೆದೊಯ್ದು ಕೊನೆಗೆ ಅಕ್ಟೋಬರ್ 26ರಂದು ದೆಹಲಿಯ ಬಾದರ್‌ಪುರ ಗಡಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಈ ಸುದ್ದಿಯನ್ನೂ ಓದಿ: ಅಪ್ರಾಪ್ತೆಯೊಂದಿಗೆ ವಿವಾಹಿತನ ಸಂಬಂಧ.. ವಿಷ ಸೇವಿಸಿದ ಇಬ್ಬರಲ್ಲಿ ಒಬ್ಬರು ಸಾವು, ಇನ್ನೊಬ್ಬರ ಸ್ಥಿತಿ ಗಂಭೀರ
ದೂರಿನನ್ವಯ ತನಿಖೆ ಆರಂಭಗೊಂಡು, ಅಪಹರಣಕ್ಕೊಳಗಾದ ಬಾಲಕಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ವಿವರವಾಗಿ ಪರಿಶೀಲಿಸಲಾಯಿತು. ಪರಿಶೀಲನೆ ವೇಳೆ ಎಸ್ ಕೆ ಸಿನ್ಹಾ ಅವರು ಆಗಾಗ್ಗೆ ಸಂದೇಶ ಕಳುಹಿಸುತ್ತಿದ್ದ ವಿಚಾರ ತಿಳಿದು ಬಂದಿದೆ.
ಆದ್ರೆ, ರಾಜಸ್ಥಾನದ ಅಲ್ವಾರ್ನ ರತ್ನಕಿ ಗ್ರಾಮದ ನಿವಾಸಿ ಶೋಯಾಬ್ ಖಾನ್(ಆರೋಪಿ) ಎಸ್ ಕೆ ಸಿನ್ಹಾ ಎಂಬ ನಕಲಿ ಫೇಸ್‌ಬುಕ್ ಖಾತೆಯನ್ನು ರಚಿಸಿ, ಬಾಲಕಿಗೆ ಸಂದೇಶ ಕಳುಹಿಸುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ವೇಳೆ ಆರೋಪಿಯ ಮಾಹಿತಿ ತಿಳಿಯುತ್ತಿದ್ದಂತೆ, ಶೋಯಾಬ್ ಖಾನ್ ನೆಲೆಸಿದ್ದ ಗ್ರಾಮದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಕುಟುಂಬ ಸಮೇತ ಆರೋಪಿ ಪರಾರಿಯಾಗಿದ್ದನು. ಹಲವು ದಿನಗಳ ನಂತರ ದೆಹಲಿಯ ಬಾದರ್‌ಪುರ ಗಡಿ ಬಳಿ ಆರೋಪಿಯನ್ನು ಬಂಧಿಸಲಾಗಿದೆ.