ETV Bharat / bharat

ಮಹಿಳೆಯರ ಧ್ವನಿಯಲ್ಲಿ ಸಂಭಾಷಣೆ: ಸಂಬಂಧ ಬೆಸೆದು ಹಣ ಗಳಿಸುವ ಆಸೆ, ಯುವಕರಿಗೆ ವಂಚನೆ - ಯುವಕರಿಗೆ ವಂಚನೆ

ಮಹಿಳೆಯರ ಧ್ವನಿಯಲ್ಲಿ ಸಂಭಾಷಣೆ ಮಾಡಿ ಯುವಕರನ್ನು ವಂಚನೆಯ ಖೆಡ್ಡಾಕ್ಕೆ ಕೆಡವುತ್ತಿದ್ದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

delhi-police-arrested-two-accused-of-duping-thousands-of-youths
ಮಹಿಳೆಯರ ಧ್ವನಿಯಲ್ಲಿ ಸಂಭಾಷಣೆ: ಸಂಬಂಧ ಬೆಸೆದು ಹಣ ಗಳಿಸುವ ಆಸೆ ಒಡ್ಡಿ ಯುವಕರಿಗೆ ವಂಚನೆ!
author img

By

Published : Feb 8, 2023, 9:55 PM IST

ನವದೆಹಲಿ: ಆನ್​ಲೈನ್​ನಲ್ಲಿ ಉದ್ಯೋಗ ಹುಡುಕುತ್ತಿದ್ದ ಸಾವಿರಾರು ಯುವಕರಿಗೆ ಮೋಸ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕುಲ್ದೀಪ್​ ಮತ್ತು ಶ್ಯಾಮ್​ ಜೋಗಿ ಬಂಧಿತರು. ಇವರು ಅಂದಾಜು ನಾಲ್ಕು ಸಾವಿರ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿದ್ದು, ಒಂದು ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿದ್ದಾರೆ. ವಯಸ್ಸಾದ ಮಹಿಳೆಯರೊಂದಿಗೆ ಯುವಕರಿಗೆ ಸಂಬಂಧ ಬೆಸೆದು ಹಣ ಗಳಿಕೆ ಮಾಡುವ ಆಸೆಯೊಡ್ಡಿ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆನ್​ಲೈನ್​ನಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯುವಕರನ್ನೇ ಖದೀಮರು ಟಾರ್ಗೆಟ್​ ಮಾಡಿ ಸೆಳೆಯುತ್ತಿದ್ದರು. ಉತ್ತಮ ಉದ್ಯೋಗ ಮತ್ತು ಸಂಬಳ ಕೊಡಿಸುವ ಭರವಸೆ ನೀಡುತ್ತಿದ್ದರು. ಆರಂಭದಲ್ಲಿ ನೋಂದಣಿ ಶುಲ್ಕವಾಗಿ 1,500 ರೂ. ಪೀಕುತ್ತಿದ್ದರು. ಮತ್ತೊಂದು ಶುಲ್ಕದ ಹೆಸರಲ್ಲಿ 2,500 ರೂ. ವಸೂಲಿ ಮಾಡುತ್ತಿದ್ದರು. ಹೀಗೆ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯಿಂದ ಕನಿಷ್ಠ 40 ಸಾವಿರ ರೂಪಾಯಿಯವರೆಗೂ ವಸೂಲಿ ಮಾಡಿರುವ ಆರೋಪವಿದೆ. ಈ ಬಗ್ಗೆ ವಂಚನೆಗೆೊಳಗಾದ ಕೆಲ ಯುವಕರು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.

ಹೋಟೆಲ್​ನಲ್ಲಿ ಕೆಲಸ: ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಜೈಪುರದಲ್ಲಿ ತಲೆ ಮರೆಸಿಕೊಂಡಿದ್ದ ಕುಲ್ದೀಪ್​ ಹಾಗೂ ಶ್ಯಾಮ್​ ಜೋಗಿಯನ್ನು ಪತ್ತೆ ಹಚ್ಚಿ ಸೆರೆಹಿಡಿದ್ದಾರೆ. ಅನೇಕ ದಿನಗಳಿಂದ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದ ಖದೀಮರು ಕೆಲಸ ಕೊಡಿಸದೇ, ಹಣವನ್ನಾದರೂ ಮರಳಿ ಕೊಡುವಂತೆ ಕೇಳಿದರೂ ಕ್ಯಾರೆನ್ನುತ್ತಿರಲಿಲ್ಲ. ಈ ಬಗ್ಗೆ ಕೆಲವು ಅಭ್ಯರ್ಥಿಗಳು ದೂರು ನೀಡಿರುವ ವಿಷಯ ತಿಳಿದು ರಾಜಸ್ಥಾನದ ಜೈಪುರಕ್ಕೆ ಪಲಾಯನ ಮಾಡಿದ್ದರು. ಆದರೆ, ಈ ಖದೀಮರು ಬಳಸುತ್ತಿದ್ದ ವೆಬ್​ಸೈಟ್​ ಆಧಾರದ ಮೇಲೆ ತನಿಖೆ ಮಾಡಿ, ಜೈಪುರದಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ. ಈ ಮೋಸದ ದಂಧೆ ಆರಂಭಿಸುವ ಮೊದಲು ಇಬ್ಬರೂ ಕೂಡ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ದೆಹಲಿ ಹೊರವಲಯ ಡಿಸಿಪಿ ದೇವೇಶ್ ಮಹ್ಲಾ ತಿಳಿಸಿದ್ದಾರೆ.

ಮಹಿಳೆಯರ ಧ್ವನಿಯಲ್ಲಿ ಸಂಭಾಷಣೆ: ಮತ್ತೊಂದು ಅಚ್ಚರಿ ಅಂಶ ಎಂದರೆ, ಗಿಗೋಲೋ (Gigolo) ಎಂಬ ಉದ್ಯೋಗ ನೀಡುವ ಹೆಸರಿನಲ್ಲಿ ಸಾವಿರಾರು ಜನರನ್ನು ವಂಚಿಸಿದ್ದಾರೆ. ಗಿಗೋಲೋ ಎಂದರೆ ವಯಸ್ಸಾದ ಮಹಿಳೆಯರೊಂದಿಗೆ ಯುವಕರಿಗೆ ಸಂಬಂಧ ಬೆಸೆದು, ಆ ಮಹಿಳೆಯರಿಗೆ ಸೇವೆ ನೀಡುವ ಮೂಲಕ ಹಣ ಗಳಿಕೆ ಮಾಡುವ ಆಸೆ ತೋರಿಸುತ್ತಿದ್ದರು. ಇದಕ್ಕಾಗಿ ಯುವಕರನ್ನು ಸೆಳೆಯಲು ಈ ಖದೀಮರು ತಾವೇ ಮಹಿಳೆಯ ಧ್ವನಿಯಲ್ಲಿ ಸಂಭಾಷಣೆ ಮಾಡುತ್ತಿದ್ದರು. ಇಬ್ಬರ ಪೈಕಿ ಒಬ್ಬ ಮಹಿಳೆಯ ಧ್ವನಿಯಲ್ಲಿ ಮಾತನಾಡಿ, ತಾನು ಅನಿವಾಸಿ ಭಾರತೀಯ (ಎನ್‌ಆರ್‌ಐ) ಗ್ರಾಹಕಿ ಅಥವಾ ಕ್ಲೈಂಟ್‌ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದ ಎಂದು ಡಿಸಿಪಿ ದೇವೇಶ್ ಮಾಹಿತಿ ನೀಡಿದ್ದಾರೆ.

2022ರಲ್ಲಿ ಮೊದಲ ಗಿಗೋಲೋ ಗ್ಯಾಂಗ್​ ಪತ್ತೆ: ಈ ಹಿಂದೆ 2022ರಲ್ಲಿ ಗಿಗೋಲೋ ಸೇವೆಯ ಒದಗಿಸುವ ಹೆಸರಲ್ಲಿ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್​ ಅನ್ನು ಪತ್ತೆ ಹೆಚ್ಚಲಾಗಿತ್ತು. ಆಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ದಂಧೆಕೋರರು ನೋಂದಣಿ ಶುಲ್ಕ, ಮಸಾಜ್ ಕಿಟ್, ಹೋಟೆಲ್ ಬುಕ್ಕಿಂಗ್ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಅಲ್ಲದೇ, ವಾಟ್ಸಾಪ್ ಮತ್ತು ಡೇಟಿಂಗ್ ಆ್ಯಪ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲೂ ಜಾಹೀರಾತು ನೀಡಿ ಯುವಕರನ್ನು ವಂಚನೆಯ ಖೆಡ್ಡಾಕ್ಕೆ ಕೆಡವುತ್ತಾರೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಗಲ್ಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ 500ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ವಂಚನೆ: ರಾತ್ರೋರಾತ್ರಿ ಏಜೆಂಟ್​ ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.