ETV Bharat / bharat

ದೆಹಲಿ ಲಿಕ್ಕರ್ ಹಗರಣ: ಅರುಣ್ ಪಿಳ್ಳೈಯನ್ನು ಮಾ.13ರ ವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದ ಕೋರ್ಟ್​​ - ಮನೀಶ್ ಸಿಸೋಡಿಯಾಗೆ ಇಡಿ ವಿಚಾರಣೆ

ದೆಹಲಿ ಲಿಕ್ಕರ್ ಹಗರಣ: ವಿಚಾರಣೆಗೆ ಸೌತ್ ಗ್ರೂಪ್​ನ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಮಾರ್ಚ್ 13ರ ವರೆಗೆ ಇಡಿ ಕಸ್ಟಡಿಗೆ ನೀಡಿ ರೋಸ್ ಅವೆನ್ಯೂ ನ್ಯಾಯಾಲಯ ಆದೇಶ. ತಿಹಾರ್ ಜೈಲಿನಲ್ಲಿರುವ ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಇಡಿ ಅಧಿಕಾರಿಗಳು ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ಮಾಡಲಿದ್ದಾರೆ.

ED
ಜಾರಿ ನಿರ್ದೇಶನಾಲಯ
author img

By

Published : Mar 7, 2023, 8:25 PM IST

ನವದೆಹಲಿ/ಹೈದರಾಬಾದ್: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ದೆಹಲಿ ಲಿಕ್ಕರ್ ಹಗರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನವದೆಹಲಿ ಮದ್ಯ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಅರುಣ್ ರಾಮಚಂದ್ರ ಪಿಳ್ಳೈ ಎಂಬಾತನನ್ನು ಇತ್ತೀಚೆಗೆ ಬಂಧಿಸಿದ್ದು, ಪಿಳ್ಳೈ ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಒಂದು ವಾರ ಇಡಿ ಕಸ್ಟಡಿಗೆ ಒಪ್ಪಿಸಿದೆ. ದೆಹಲಿ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಅರುಣ್ ಪಿಳ್ಳೈ ಅವರನ್ನು ಮಂಗಳವಾರ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಅರುಣ್ ಪಿಳ್ಳೈ ಅವರ ರಿಮಾಂಡ್ ವರದಿಗೆ ಸಂಬಂಧಿಸಿದಂತೆ 17 ಪುಟಗಳನ್ನು ಪ್ರಕಟಿಸಿದ್ದು, ಇದರಲ್ಲಿ ಪ್ರಮುಖ ಅಂಶಗಳನ್ನು ಇಡಿ ಬಹಿರಂಗಪಡಿಸಿದೆ. ವರದಿಯಲ್ಲಿ ದೆಹಲಿಯ ಲಿಕ್ಕರ್ ಹಗರಣ... ತೆಲಂಗಾಣದ ಎಂಎಲ್​​ಸಿ ಅವರಿಗೆ ಲಾಭ ಮಾಡಿಕೊಡಲು ಅನ್ನಿ ಠಾಣಾ ಮತ್ತು ಅರುಣ್ ಪಿಳ್ಳೈ ನಡೆದುಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.

ಇಡೀ ಸೌತ್ ಗ್ರೂಪ್​ವನ್ನು ಅರುಣ್ ಪಿಳ್ಳೈ ಮುನ್ನೆಡೆಸುತ್ತಿದ್ದರು ಎಂದು ಇಡಿ ವರದಿಯಲ್ಲಿ ತಿಳಿಸಿದ್ದು, ಅದರಲ್ಲಿ ಬಿಆರ್‌ಎಸ್ ಎಂಎಲ್‌ಸಿ ಅವರು ಸೌತ್ ಗ್ರೂಪ್​ದಲ್ಲಿ ಇದ್ದಾರೆ . ವೈಸಿಪಿ ಸಂಸದ ಮಾಗುಂಟ ಅವರ ಪುತ್ರ ರಾಘವ್, ಶರತ್ ರೆಡ್ಡಿ ಎಂಬುವರನ್ನ ಸೌತ್ ಗ್ರೂಪ್‌ಗೆ ಸೇರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರೋಸ್ ಅವೆನ್ಯೂ ನ್ಯಾಯಾಲಯವು ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಇಡಿ ಕಸ್ಟಡಿಗೆ ನೀಡಿದೆ. ಮಾರ್ಚ್ 13ರ ವರೆಗೆ ಇಡಿ ಕಸ್ಟಡಿಗೆ ಅನುಮತಿ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇಡಿ ವಾದಕ್ಕೆ ಸಮ್ಮತಿಸಿದ ರೂಸ್ ಅವೆನ್ಯೂ ಕೋರ್ಟ್ ತಾಯಿಯೊಂದಿಗೆ ಮಾತನಾಡಲು ಅನುಮತಿ ನೀಡಿದೆ. ಪಿಳ್ಳೈ ಅವರ ಪತ್ನಿ ಮತ್ತು ಸೋದರ ಮಾವ ಅವರನ್ನು ಕಸ್ಟಡಿಯಲ್ಲಿ ಭೇಟಿಯಾಗಲು ನ್ಯಾಯಾಲಯ ಅನುಮತಿ ನೀಡಿದೆ. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಆರ್​ಎಸ್ ಎಂಎಲ್ ಸಿ ಕಲ್ವಕುಂಟ್ಲ ಕವಿತಾ ಅವರ ಮಾಜಿ ಆಡಿಟರ್ ಗೋರಂಟ್ಲ ಬುಚ್ಚಿಬಾಬು ಅವರಿಗೆ ನಿನ್ನೆ ಜಾಮೀನು ಸಿಕ್ಕಿದೆ.

ತಿಹಾರ್ ಜೈಲ್​ನಲ್ಲಿ ಸಿಸೋಡಿಯಾಗೆ ಇಡಿ ವಿಚಾರಣೆ: ಕೇಜ್ರಿವಾಲ್ ಸರ್ಕಾರದ ಹೊಸ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಗಳು ನಿರಂತರ ತನಿಖೆಯುಲ್ಲಿ ತೊಡಗಿವೆ. ದೆಹಲಿಯ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತಂಡವು ಈಗ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಲಿದೆ.

ಮಾರ್ಚ್ 6 ರಂದು ದೆಹಲಿ ನ್ಯಾಯಾಲಯವು ದೆಹಲಿಯ ಲಿಕ್ಕರ್ ಹಗರಣದಲ್ಲಿ ಸಿಸೋಡಿಯಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಂಗಳವಾರ ಇಡಿ ತಂಡವು ತಿಹಾರ್ ಜೈಲಿಗೆ ತಲುಪಿ ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸಬಹುದು ಎಂದು ಹೇಳಿದೆ.

ಇಡಿ ತಂಡವು ಮದ್ಯ ಹಗರಣದಲ್ಲಿ ಇದುವರೆಗೆ 11 ಆರೋಪಿಗಳನ್ನು ಬಂಧಿಸಿದೆ, ಅವರಲ್ಲಿ ಹೆಚ್ಚಿನವರು ದಕ್ಷಿಣ ಭಾರತದವರು. ಈ 11 ಮಂದಿ ವಿಚಾರಣೆ ಮಾಡಿ ಮಾಹಿತಿ ಆಧಾರದ ಮೇಲೆ ಇಡಿ ತಂಡವು ಇದೀಗ ತಿಹಾರ್ ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಲಿದೆ.

ವಿವಿಧ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಇಡಿ ತಂಡವೂ ಪ್ರಶ್ನೆಗಳ ದೀರ್ಘ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಿಸೋಡಿಯಾಗೆ ಕೇಳಲಿದೆ. ಇದಲ್ಲದೇ ಆರೋಪಿಗಳ ಬಂಧನದ ನಂತರ ವಿಚಾರಣೆಯಲ್ಲಿ ಅವರು ನೀಡಿರುವ ಉತ್ತರಗಳು ಹಾಗೂ ಬಯಲಿಗೆ ಬಂದಿರುವ ಸಾಕ್ಷಿಗಳ ಆಧಾರದ ಮೇಲೆ ಇಡಿ ತಂಡವೂ ಆರೋಪಿಗಳನ್ನು ವಿಚಾರಣೆಗೊಳಪಡಿಸಲಿದೆ ಎಂದು ತಿಳಿದು ಬಂದಿದೆ.

ಇದನ್ನೂಓದಿ:ಮನೀಶ್​ ಸಿಸೋಡಿಯಾಗೆ 14 ದಿನ ನ್ಯಾಯಾಂಗ ಬಂಧನ: ತಿಹಾರ್​ ಜೈಲ್​ಗೆ ಶಿಫ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.