ETV Bharat / bharat

ಕೋವಿಡ್ ಸೋಂಕಿಗೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಂದೆ ಬಲಿ - COVID-19 in Delhi

Satyendar Jain's father
Satyendar Jain's father
author img

By

Published : May 2, 2021, 3:04 PM IST

Updated : May 2, 2021, 3:35 PM IST

15:01 May 02

ಮಹಾಮಾರಿ ಕೊರೊನಾಗೆ ಬಲಿಯಾದ ದೆಹಲಿ ಆರೋಗ್ಯ ಸಚಿವರ ತಂದೆ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ನಿಂದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಅವರ ತಂದೆ ಸಾವನ್ನಪ್ಪಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​ ಟ್ವೀಟ್​​ ಮಾಡಿ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿದಿನ ದಾಖಲೆಯ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ನೂರಾರು ಜನರು ಮಹಾಮಾರಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದೀಗ ಆರೋಗ್ಯ ಸಚಿವರ ತಂದೆಯನ್ನು ಸಹ ಕೊರೊನಾ ಬಲಿ ಪಡೆದಿದೆ.

56 ವರ್ಷದ ರಾಮ್​ ಶರಣ್​ ಜೈನ್​ ಕಳೆದ ಕೆಲ ದಿನಗಳ ಹಿಂದೆ ಕೋವಿಡ್​ ಸೋಂಕಿಗೊಳಗಾಗಿದ್ದರು. ಅವರನ್ನ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಸಿಎಂ ಕೇಜ್ರಿವಾಲ್​ ಸಂತಾಪ ಸೂಚಿಸಿದ್ದಾರೆ.

ದೆಹಲಿಯಲ್ಲಿ ಇಂದು ಕೂಡ ದಾಖಲೆಯ 25 ಸಾವಿರಕ್ಕೂ ಅಧಿಕ ಕೋವಿಡ್​ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, 400ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 

Last Updated : May 2, 2021, 3:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.