ನವದೆಹಲಿ: ಕೋವಿಡ್ ವಿರುದ್ಧದ ಲಸಿಕೆ ಎಂದು ಕೊರೊನಿಲ್ ಕಿಟ್ ಬಗ್ಗೆ ಬಾಬಾ ರಾಮ್ದೇವ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬಾಬಾ ರಾಮ್ದೇವ್ ವಿರುದ್ಧ ದೆಹಲಿ ವೈದ್ಯಕೀಯ ಸಂಸ್ಥೆಯು ದೆಹಲಿ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿತ್ತು.
ಈ ಸಂಬಂಧ ಬಾಬಾ ರಾಮ್ದೇವ್ ಅವರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜುಲೈ 13 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಆವರೆಗೆ ಬಾಬಾರಾಮ್ದೇವ್ ಯಾವುದೇ ರೀತಿಯ ಪ್ರಚೋದನಾಕಾರಿ ಹೇಳಿಕೆ ನೀಡಬಾರದೆಂದು ಸೂಚಿಸಿದೆ.
ಇದನ್ನೂ ಓದಿ:ಮಳೆಗೆ ಮನೆ ಮೇಲ್ಛಾವಣಿ ಕುಸಿತ: ಮಗು ಸಾವು
ಕೊರೊನಿಲ್ ಕಿಟ್ ಔಷಧವು ಕೊರೊನಾವನ್ನು ಗುಣಪಡಿಸಲ್ಲ. ರಾಮ್ದೇವ್ ಅವರ ಹೇಳಿಕೆಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿ ವೈದ್ಯರ ತಂಡ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿತ್ತು.